For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಆಫೀಸಲ್ಲಿ ಮುನ್ನುಗ್ಗಿದ ನಾಗಶೇಖರ್ ಮೈನಾ

  By Rajendra
  |

  ಕನ್ನಡದ ರೊಮ್ಯಾಂಟಿಕ್ ಚಿತ್ರ ಮೈನಾ ಬಾಕ್ಸ್ ಆಫೀಸಲ್ಲಿ ಮುನ್ನುಗ್ಗುತ್ತಿದೆ. ನೈಜ ಘಟನೆ ಆಧಾರಿತ ಈ ಚಿತ್ರವನ್ನು ನಾಗಶೇಖರ್ ರಚಿಸಿ ನಿರ್ದೇಶಿಸಿದ್ದಾರೆ. ಚೇತನ್ ಕುಮಾರ್ ಹಾಗೂ ನಿತ್ಯಾ ಮೆನನ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಅರ್ಧ ಸೆಂಚುರಿ ಬಾರಿಸಲು ಸಜ್ಜಾಗಿದೆ. (ಮೈನಾ ಚಿತ್ರ ವಿಮರ್ಶೆ ಓದಿ)

  ಇದೇ ಏಪ್ರಿಲ್ 11ಕ್ಕೆ ಮೈನಾ ಚಿತ್ರ 25 ಚಿತ್ರಮಂದಿಗಳಲ್ಲಿ ಅರ್ಧ ಸೆಂಚುರಿ ಬಾರಿಸುತ್ತಿದೆ. ಮೈಸೂರು, ಮಂಡ್ಯ, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗಗಳಲ್ಲೂ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  ಜೆಸ್ಸಿ ಗಿಫ್ಟ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ಈಗ ಆನಂದ್ ಆಡಿಯೋ ಪ್ಲಾಟಿನಂ ಡಿಸ್ಕ್ ಹೊರತರಲು ಮುಂದಾಗಿದೆ. ಏಪ್ರಿಲ್ 14ರ ಯುಗಾದಿ ಹಬ್ಬದಂತು ಪ್ಲಾಟಿನಂ ಡಿಸ್ಕ್ ಬಿಡುಗಡೆಯಾಗುವ ಸಾಧ್ಯತೆಗಳಿವೆ.

  ಏತನ್ಮಧ್ಯೆ ಮೈನಾ ಚಿತ್ರಕ್ಕೆ ಪೈಪೋಟಿ ನೀಡಲು ಸಾಕಷ್ಟು ಚಿತ್ರಗಳು ಬಂದವು. ಆದರೂ ಮೈನಾ ಚಿತ್ರ ದೊಡ್ಡ ಸ್ಟಾರ್ ಚಿತ್ರಗಳ ನಡುವೆಯೂ ಮುನ್ನುಗ್ಗುತ್ತಿರುವುದು ವಿಶೇಷ. ಚಿತ್ರ ಶತಕ ಬಾರಿ‌ಸುವುದು ಗ್ಯಾರಂಟಿ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಾಗಶೇಖರ್.

  ಮೈನಾ ಚಿತ್ರದ ಯಶಸ್ಸು ಪರಭಾಷಾ ಚಿತ್ರ ನಿರ್ಮಾಪಕರ ಗಮನವನ್ನೂ ಸೆಳೆದಿದೆ. ತೆಲುಗಿನಲ್ಲೂ ಈ ಚಿತ್ರವನ್ನು ರೀಮೇಕ್ ಮಾಡಲಾಗುತ್ತಿದೆ. ಆದರೆ ಮೂಲ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ತೆಲುಗಿನಲ್ಲಿ ಬದಲಾಯಿಸಲಾಗುತ್ತಿದೆ.

  ತೆಲುಗು ಚಿತ್ರದ ಬಳಿಕ ತಮಿಳು ಹಾಗೂ ಮಲಯಾಳಂನತ್ತಲೂ ಮೈನಾ ಚಿತ್ರ ಹಾರಲಿದೆ ಎನ್ನುತ್ತವೆ ಮೂಲಗಳು. ಪರಭಾಷಾ ಚಿತ್ರಗಳ ತೀವ್ರ ಪೈಪೋಟಿ ನಡುವೆ ಕನ್ನಡ ಚಿತ್ರಗಳು ಮುನ್ನುಗ್ಗುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. (ಏಜೆನ್ಸೀಸ್)

  English summary
  Kannada romantic drama film written and directed by Nagashekar's Myna racing towards 50 days landmark. It is the first one more superhit Kannada film of 2013. Chetan Kumar and Nithya Menon are in the lead roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X