»   » ವಿಮರ್ಶೆ : 'ಮೈನಾ' ಎಂಬ ಸುಂದರ ದೃಶ್ಯ ಕಾವ್ಯ

ವಿಮರ್ಶೆ : 'ಮೈನಾ' ಎಂಬ ಸುಂದರ ದೃಶ್ಯ ಕಾವ್ಯ

Posted By:
Subscribe to Filmibeat Kannada
Rating:
3.5/5
ಅಂದು ಸಂಜು ವೆಡ್ಸ್ ಗೀತಾ ಚಿತ್ರವನ್ನು ನಿರ್ದೇಶಕ ನಾಗಶೇಖರ್ ತೆರೆಗೆ ತಂದ ಶೈಲಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಇಂದು (ಫೆ 22) ಬಿಡುಗಡೆಯಾದ ಮೈನಾ ಚಿತ್ರ ನಿಸ್ಸಂಸಯವಾಗಿ ಅವರ ಪ್ರತಿಭೆಗೆ ಹಿಡಿದ ಇನ್ನೊಂದು ಸಾಕ್ಷಿ.

ಖಡಕ್ ಪೊಲೀಸ್ ಅಧಿಕಾರಿ ಬಿಬಿ ಅಶೋಕ್ ಕುಮಾರ್ ಹೇಳಿದ ನೈಜ ಕಥಾಧಾರಿತ ಚಿತ್ರವೇ ಮೈನಾ. ಒಂದು ಚಿತ್ರಕ್ಕೆ ಬೇಕಾದ ಮಸಾಲಾ ಎಲಿಮೆಂಟ್ ಗಳನ್ನು ನಿರ್ದೇಶಕರು ಹದವಾಗಿ ಬಳಸಿ ತೆರೆಗೆ ತಂದಿದ್ದಾರೆ. ಚಿತ್ರಕಥೆ ಹೇಳುವ ಮೊದಲು ಛಾಯಾಗ್ರಾಹಕ ಸತ್ಯ ಹೆಗಡೆ ಅವರಿಗೊಂದು ಉಘೇ ಉಘೇ ಎನ್ನಲೇಬೇಕು. ಮುಂಗಾರುಮಳೆಯನ್ನು ಮೀರಿಸುವ ಸುಂದರ ಚಿತ್ರಣವನ್ನು ಮೈನಾ ಚಿತ್ರದಲ್ಲಿ ಹೆಗಡೆ ನೀಡಿದ್ದಾರೆ. ಜೊತೆಗೆ ಚೇತನ್, ನಿತ್ಯಾ ಮೆನನ್ ಮತ್ತು ಶರತ್ ಕುಮಾರ್ ಅವರ ಮನೋಜ್ಞ ಅಭಿನಯ.

ರಾಜಕಾರಣಿ ಸಂಜಯ್ ದೇಸಾಯಿ (ಅರುಣ್ ಸಾಗರ್) ಅವರ ಸಹೋದರ ಅನಿರುದ್ದ ದೇಸಾಯಿ (ಅಜಯ್) ಅವರ ಕೊಲೆಯೊಂದಿಗೆ ಚಿತ್ರ ಆರಂಭವಾಗುತ್ತದೆ. ಪೊಲೀಸ್ ಇಲಾಖೆಗೆ ಮುಜುಗರ ತರುವ ಈ ಘಟನೆಯ ಸತ್ಯಾಸತ್ಯತೆಯನ್ನು ಭೇದಿಸುವ ಹೊಣೆಯನ್ನು ಶರತ್ ಕುಮಾರ್ ಮತ್ತು ಸುಮನ್ ರಂಗನಾಥ್ ಅವರಿಗೆ ಇಲಾಖೆ ವಹಿಸುತ್ತದೆ.

ಕೊಲೆ ನಡೆದ ಕೆಲವೇ ದಿನಗಳಲ್ಲಿ ಪೊಲೀಸರು ನಾಯಕ(ಸತ್ಯಮೂರ್ತಿ)ನನ್ನು ಚೆನ್ನೈನಲ್ಲಿ ಬಂಧಿಸುತ್ತಾರೆ. ಇತ್ತ ಸಂಜಯ್ ದೇಸಾಯಿ ತಮ್ಮನ ಕೊಲೆಗೆ ಪ್ರತೀಕಾರ ತೀರಿಸಲು ಗೂಂಡಾಗಳನ್ನು ಚೆನ್ನೈಗೆ ಕಳುಹಿಸುತ್ತಾನೆ. ನಾಯಕ ಪೊಲೀಸ್ ಅಧಿಕಾರಿ ಶರತ್ ಕುಮಾರಿಗೆ ತಾನು ಯಾಕೆ ಅನಿರುದ್ದ ದೇಸಾಯಿಯನ್ನು ಕೊಂದೆ ಎನ್ನುವ ಫ್ಲ್ಯಾಷ್ ಬ್ಯಾಕ್ ಕಥೆ ಹೇಳಲು ಆರಂಭಿಸುತ್ತಾನೆ. ಮುಂದೆ ಓದಿ..


ಮೈನಾ' ಅದ್ಭುತ ದೃಶ್ಯ ಕಾವ್ಯ

ರಿಯಾಲಿಟಿ ಶೋನಲ್ಲಿ ಭಾಗವಹಿಸಲು ನಾಯಕ ಟ್ರೈನಿನಲ್ಲಿ ಪ್ರಯಾಣಿಸುತ್ತಿರ ಬೇಕಾದರೆ ನಾಯಕಿಯ ಪರಿಚಯವಾಗುತ್ತದೆ. ಭಿಕ್ಷುಕನಾಗಿ ನಟಿಸುವ ನಾಯಕನಿಗೆ ನಾಯಕಿ ನೂರು ರೂಪಾಯಿ ನೀಡುತ್ತಾಳೆ. ಲವ್ ಎಟ್ ಫಸ್ಟ್ ಸೈಟ್ ಎನ್ನುವ ಹಾಗೆ ನಾಯಕಿಗಾಗಿ ಮತ್ತೆ ಮತ್ತೆ ಕಾಲಿಲ್ಲದ ಭಿಕ್ಷುಕನ ಪಾತ್ರದಲ್ಲಿ ನಾಯಕ ನಟಿಸುತ್ತಾನೆ.

ಮೈನಾ' ಅದ್ಭುತ ದೃಶ್ಯ ಕಾವ್ಯ

ಮುಂದೊಂದು ದಿನ ನಾಯಕ ಅಂಗವಿಕಲನಲ್ಲ ನಟನೆ ಮಾಡುತ್ತಿದ್ದಾನೆಂದು ಅರಿತ ನಾಯಕಿ ಅವನಿಂದ ದೂರವಾಗುತ್ತಾಳೆ. ನಾಯಕ ಅನಿರುದ್ದ ದೇಸಾಯಿಯನ್ನು ಯಾಕಾಗಿ ಕೊಲೆ ಮಾಡುತ್ತಾನೆ? ಅವನಿಗೆ ನಾಯಕಿ ಒಲಿಯುತ್ತಾಳಾ ? ಚಿತ್ರ ದುರಂತ ಅಂತ್ಯ ಕಾಣುತ್ತಾ? ಇದನ್ನು ನೋಡಲು ಚಿತ್ರ ವೀಕ್ಷಿಸಿದರೆ ಉತ್ತಮ.

ಮೈನಾ' ಅದ್ಭುತ ದೃಶ್ಯ ಕಾವ್ಯ

ಕರ್ನಾಟಕದಲ್ಲೂ ಸರಿಯಾಗಿ ಹುಡುಕಿದರೆ ಬೇಕಾದಷ್ಟು ಸ್ವಿಟ್ಜರ್ಲ್ಯಾಂಡ್ ನಲ್ಲಿ ಸಿಗುವಂತಹಾ ಸ್ಪಾಟ್ ಗಳು ಸಿಗುತ್ತವೆ ಎನ್ನುವ ನಿರ್ದೇಶಕರ ಮಾತನ್ನು ಅಕ್ಷರಶ: ಸತ್ಯವಾಗಿಸಿದ್ದಾರೆ ಛಾಯಾಗ್ರಾಹಕ ಸತ್ಯ ಹೆಗಡೆ. ಕರ್ನಾಟಕ, ಚೆನ್ನೈ ಮತ್ತು ದೂದ್ ಸಾಗರ ಮುಂತಾದ ಪ್ರದೇಶದ ರಿಸ್ಕಿ ಸ್ಪಾಟ್ ನಲ್ಲಿ ಹೆಗಡೆ ಕ್ಯಾಮರಾ ವರ್ಕ್ ಸೂಪರ್.

ಮೈನಾ' ಅದ್ಭುತ ದೃಶ್ಯ ಕಾವ್ಯ

ಚಿತ್ರದ ಮೈನಸ್ ಪಾಯಿಂಟ್ ಅಂದರೆ ನಿರೂಪಣೆಯಲ್ಲಿ ಕೊಂಚ ಬಿಗಿ ಇರಬೇಕಿತ್ತು. ಕೆಲವೊಂದು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಬಹುದಿತ್ತು. ಮೊದಲಾರ್ಥ ಪ್ರೇಕ್ಷಕರಿಗೆ ಕೊಂಚ ಬೋರ್ ಎನಿಸಿದರೂ ದ್ವಿತೀಯಾರ್ಧ ಲವಲವಿಕೆಯಿಂದ ಕೂಡಿದೆ. ಚೇತನ್, ಶರತ್ ಕುಮಾರ್, ಅನಂತನಾಗ್, ಸುಹಾಸಿನಿ, ಮಾಳವಿಕ, ಜೈಜಗದೀಶ್, ತಬ್ಲಾ ನಾಣಿ, ಬುಲೆಟ್ ಪ್ರಕಾಶ್ ನಟನೆ ಚೆನ್ನಾಗಿದೆ. ನಾಯಕಿ ನಿತ್ಯಾ ಮೆನನ್ ನಟನೆ ಎಲ್ಲರಿಗಿಂತಲೂ ಒಂದು ಕೈಮೇಲು.

ಮೈನಾ' ಅದ್ಭುತ ದೃಶ್ಯ ಕಾವ್ಯ

ಜೆಸ್ಸಿ ಗಿಫ್ಟ್ ಅವರ ಸಂಗೀತದಲ್ಲಿ ಮೂರು ಹಾಡುಗಳು ಚೆನ್ನಾಗಿವೆ. ಸಾಧು ಕೋಕಿಲಾ ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮಸ್ತಾಗಿದೆ. ಮುಂಗಾರು ಮಳೆಯಂತೆಯೇ ಮೈನಾ ಸುಂದರ ಪ್ರೇಮ ಕಾವ್ಯ. ಚಿತ್ರದ ನಿರೂಪಣೆ ಕೊಂಚ ಬಿಗಿ ಇದ್ದಿದ್ದರೆ ಮೈನಾ ಚಿತ್ರ ಮಾಸ್ಟರ್ ಪೀಸ್ ಆಗುತ್ತಿತ್ತು.

English summary
Kannada movie 'Mynaa' review directed by Sanju Weds Geetha fame Nagashekar. 
Please Wait while comments are loading...