ಕೊರೋನಾ ಭೀತಿ: ಚಿತ್ರಮಂದಿರಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದ ಸರ್ಕಾರ

ದೇಶದಲ್ಲಿ ಮತ್ತೆ ಕೊರೋನಾ ಭೀತಿ ಶುರುವಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿದೆ. ಕೊರೋನಾ ಅಂದಾಕ್ಷಣ ಸರ್ಕಾರಕ್ಕೆ ಮೊದಲು ನೆನಪಾಗುವುದು ಚಿತ್ರಮಂದಿರಗಳು. ಸಿನಿಮಾ ನೋಡಲು ಹೋಗುವವರು ತಪ್ಪದೇ ಮಾಸ್ಕ್ ಧರಿಸಿ ಹೋಗಬೇಕಾಗಿದೆ.

ಸೋಮವಾರ ಸುವರ್ಣಸೌಧದ ಸಮಿತಿ ಕೊಠಡಿಯಲ್ಲಿ ಸಚಿವರಾದ ಆರ್‌. ಅಶೋಕ್ ಹಾಗೂ ಸುಧಾಕರ್‌ ವರ್ಚುವಲ್ ಮೀಟ್‌ನಲ್ಲಿ ತಜ್ಞರ ಜೊತೆ ಸಭೆ ನಡೆಸಿದರು. ತಜ್ಞರ ಸಲಹೆಯಂತೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಹೊಸ ವರ್ಷಾಚರಣೆಗೂ ಹೊಸ ಗೈಡ್‌ಲೈನ್ ಬಿಡುಗಡೆ ಆಗಿದೆ. ಸದ್ಯಕ್ಕೆ ಯಾವುದೇ ಸಭೆ, ಸಮಾರಂಭಕ್ಕೆ ನಿರ್ಬಂಧ ಹೇರಿಲ್ಲ. ಚಿತ್ರಮಂದಿರಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಿದೆ. ರಾಜ್ಯದಲ್ಲಿ ಒಟ್ಟು 650 ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳು ಇವೆ. 90ಕ್ಕೂ ಅಧಿಕ ಮಲ್ಟಿಫ್ಲೆಕ್ಸ್ ಸ್ಕ್ರೀನ್‌ಗಳಿವೆ. ಸರ್ಕಾರ ಆದೇಶವನ್ನು ಅನುಸರಿಸುವುದಾಗಿದೆ ಸಿನಿಮಾ ವಿತರಕರು ಹಾಗೂ ಪ್ರದರ್ಶಕರು ಹೇಳಿದ್ದಾರೆ.

Karnataka Govt Makes N 95 masks mandatory in cinema halls, theatres and multiplexes

ಕೊರೋನಾದ ಮೊದಲ 3 ಅಲೆಗಳ ಸಮಯದಲ್ಲಿ ತಿಂಗಳುಗಟ್ಟಲೆ ಥಿಯೇಟರ್ ಬಾಗಿಲು ಬಂದ್ ಆಗಿ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗಿತ್ತು. ಈ ವರ್ಷ 190ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆ ಆಗಿದೆ. ಸೆನ್ಸಾರ್ ಆಗಿರುವ 100ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಇಂತಹ ಸಮಯದಲ್ಲಿ ಕೊರೋನಾ ಅಲೆಯ ಭೀತಿ ಚಿತ್ರರಂಗಕ್ಕೆ ಎದುರಾಗಿದೆ. 50- 50 ನಿಯಮ ಜಾರಿಗೆ ಬಂದರೂ, ಸಂಪೂರ್ಣವಾಗಿ ಥಿಯೇಟರ್ ಬಂದ್ ಆದರೂ ಸಾಕಷ್ಟು ನಷ್ಟ ಎದುರಾಗಲಿದೆ.

More from Filmibeat

English summary
Karnataka Govt Makes N 95 masks mandatory in cinema halls, theatres and multiplexes. Amid covid concerns, the mask mandate is back in Karnataka. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X