ಕಿಚ್ಚ ಸುದೀಪ್ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ

By Rajendra

ನಟ ಕಿಚ್ಚ ಸುದೀಪ್ ಅವರ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ಸೇರ್ಪಡೆಯಾಗಿದೆ. ಈಗಾಗಲೆ ಅವರ ತೆಲುಗು 'ಈಗ' ಚಿತ್ರದಲ್ಲಿನ ಅಭಿನಯಕ್ಕೆ ಹಲವಾರು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿದ್ದಾರೆ. ಈ ಬಾರಿ "ಚೆನ್ನೈ ಟೈಮ್ಸ್ ಬೆಸ್ಟ್ ಆಕ್ಟರ್" ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತೆಲುಗಿನ 'ಈಗ' ಚಿತ್ರ ತಮಿಳಿಗೆ 'ನಾನ್ ಈ' ಎಂಬ ಹೆಸರಿನಲ್ಲಿ ರೀಮೇಕ್ ಆಗಿತ್ತು. ಆ ಚಿತ್ರದಲ್ಲಿನ ಅತ್ಯುತ್ತಮ ನೆಗಟೀವ್ ಪಾತ್ರಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ. ಈ ಬಗ್ಗೆ ಸ್ವತಃ ಸುದೀಪ್ ಸಹ ಟ್ವೀಟಿಸಿದ್ದಾರೆ. ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೂ ಹರಿದುಬರುತ್ತಿದೆ.

ಅಭಿಮಾನಿಗಳು ತಮ್ಮ ಬಗ್ಗೆ ತೋರಿಸಿರುವ ಅಭಿಮಾನಕ್ಕೆ ಸುದೀಪ್ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ಸುದೀಪ್ ಟ್ವಿಟ್ಟರ್ ಸಂದೇಶ ಈ ರೀತಿ ಇದೆ, "Just got th news tat I won the chennai times 'best actor in negative role' (public voting)... Thanx to all fr this luv."

ಸಾರ್ವಜನಿಕರು ಹಾಕಿದ ಮತಗಳ ಅನ್ವಯ ಸುದೀಪ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸುದೀಪ್ ಅವರಿಗೆ ಅತ್ಯಧಿಕ ಮತಗಳು ಬಿದ್ದಿದ್ದು ಅವರು ತಮಿಳು ಅಭಿಮಾನಿಗಳ ಮನಸ್ಸನ್ನೂ ಗೆದ್ದಿದ್ದಾರೆ. ಎಸ್ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ಸುದೀಪ್ ಮಲ್ಟಿಮಿಲಿಯನೇರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಸುದೀಪ್ ಹುಡುಗಿಗಾಗಿ ಆಕೆಯ ಬಾಯ್ ಫ್ರೆಂಡ್ ನನ್ನು ಕೊಲ್ಲುವ ಖಳನಟನ ಪಾತ್ರ. ಆದರೆ ಸತ್ತವ ನೊಣವಾಗಿ ಎದ್ದುಬಂದು ಸೇಡು ತೀರಿಸಿಕೊಳ್ಳುತ್ತಾನೆ. ಚಿತ್ರದ ಇತರೆ ಪಾತ್ರವರ್ಗದಲ್ಲಿ ಸಮಂತಾ, ಹಂಸಾ ನಂದಿನಿ, ಕ್ರೇಜಿ ಮೋಹನ್ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Kichcha Sudeep has created wonders by winning many number of awards for his performance in Telugu flick Eega. Sudeep has won the Chennai Times Best Actor in a Negative Role Award for Tamil version, Naan Ee.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X