twitter
    For Quick Alerts
    ALLOW NOTIFICATIONS  
    For Daily Alerts

    ದೇಶಾದ್ಯಂತ ಎಷ್ಟು ಸ್ಕ್ರೀನ್‌ಗಳಲ್ಲಿ 'ವಿಕ್ರಾಂತ್ ರೋಣ' ಅಬ್ಬರ: ಇಲ್ಲಿದೆ ಪಕ್ಕಾ ಲೆಕ್ಕಾ!

    |

    'ವಿಕ್ರಾಂತ್ ರೋಣ' ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾ ನೋಡುವ ಕೌತುಕತೆ ಪ್ರೆಕ್ಷಕರಲ್ಲಿ ಹೆಚ್ಚುತ್ತಿದೆ. ಅದರಂತೆ ಸಿನಿಮಾ ಹೆಚ್ಚಿನ ಪ್ರಚಾರವನ್ನೂ ಮಾಡುತ್ತಿದೆ. ನಟ ಸುದೀಪ್ ರಾಜ್ಯ ರಾಜ್ಯ ಸುತ್ತಿ ಚಿತ್ರದ ಸುದ್ದಿ ಗೋಷ್ಠಿ ನಡೆಸುತ್ತಿದ್ದರೆ.

    ಇನ್ನು ವಿಕ್ರಾಂತ್ ರೋಣ ಸಿನಿಮಾ ಕೂಡ ಕನ್ನಡದ, ಸೌತ್ ಚಿತ್ರರಂಗದ ಬಹು ನಿರೀಕ್ಷೆಯ ಸಿನಿಮಾ ಆಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಚಿತ್ರದ ಮೇಲು ಹೆಚ್ಚಿನ ನಿರೀಕ್ಷೆಗಳು ಮನೆ ಮಾಡಿವೆ. ಚಿತ್ರದ ಟ್ರೈಲರ್ ರಿಲೀಸ್ ಬಳಿಕೆ ಚಿತ್ರದಲ್ಲಿ ಹೊಸದೇನೋ ಇದೆ ಎನ್ನುವ ಕುತೂಹಲ ಹುಟ್ಟಿದೆ.

    "ನನ್ನ ಸಿನಿಮಾ ಕಲೆಕ್ಷನ್ ನನಗೆಷ್ಟು ಅಭಿಮಾನಿಗಳಿದ್ದಾರೆ ಅಂತ ಹೇಳುತ್ತೆ"- ಕಿಚ್ಚ ಸುದೀಪ್!

    ಸದ್ಯ ವಿಕ್ರಾಂತ್ ರೋಣ ಸಿನಿಮಾ ಎಲ್ಲಿಲ್ಲಿ ಎಷ್ಟು ಚಿತ್ರಮಂದಿಗಳಲ್ಲಿ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ. ವಿಕ್ರಾಂತ್ ರೋಣ ಅಂದಾಜು ಎಷ್ಟು ಸ್ಕ್ರೀನ್‌ಗಳಲ್ಲಿ ತೆರೆಕಾಣ ಬಹುದು ಎನ್ನುವ ಅಧಿಕೃತ ಮಾಹಿತಿ ಇಲ್ಲಿದೆ ಮುಂದೆ ಓದಿ.

    ಇಲ್ಲಿ ತನಕ 3500 ಸ್ಕ್ರೀನ್!

    ಇಲ್ಲಿ ತನಕ 3500 ಸ್ಕ್ರೀನ್!

    'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಅನ್ನೋ ಬಗ್ಗೆ ಸಹಜ ಕುತೂಹಲ ಇದ್ದೇ ಇದೆ. ಅದು ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎನ್ನುವ ಬಗ್ಗೆ ಚಿತ್ರತಂಡ ಕಡೆಯಿಂದ ಫಿಲ್ಮೀ ಬೀಟ್‌ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಭಾರತದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಸುಮಾರು 3500 ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ. ಇನ್ನು ಈ ಸಿನಿಮಾ ರಿಲೀಸ್‌ಗೆ ಕೆಲವು ದಿನಗಳು ಬಾಕಿ ಇದೆ. ಹಾಗಾಗಿ ಈ ಸ್ಕ್ರನ್‌ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಆದರೆ ಇಂದಿನ ತನಕ (ಜುಲೈ 23)ರ ವರೆಗೆ ಸ್ಕ್ರೀನ್ ಲೆಕ್ಕ ತೆಗೆದುಕೊಂಡರೆ ಒಟ್ಟಾರೆ 3500 ಸ್ಕ್ರೀನ್‌ಗಳು ಈಗಾಗಲೇ ವಿಕ್ರಾಂತ್ ರೋಣನಿಗಾಗಿ ಬುಕ್ ಆಗಿವೆ.

    ಕರ್ನಾಟಕದಲ್ಲಿ 450 ಸ್ಕ್ರೀನ್!

    ಕರ್ನಾಟಕದಲ್ಲಿ 450 ಸ್ಕ್ರೀನ್!

    'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಆದ್ರೂ, ಕನ್ನಡದ ಸಿನಿಮಾ. ಹಾಗಾಗಿ ಕರ್ನಾಟಕದಲ್ಲಿ ಹೆಚ್ಚಿನ ಬೇಡಿಕೆ ಇದ್ದೇ ಇದೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ಒಂದು ಲೆಕ್ಕಚಾರದ ಪ್ರಕಾರ ಕರ್ನಾಟಕದಲ್ಲಿ ಒಟ್ಟಾರೆಯಾಗಿ ಇರುವುದೇ ಸರಿಸುಮಾರು 500 ಚಿತ್ರಮಂದಿರಗಳು. ಇದರಲ್ಲಿ ಬರೋಬ್ಬರಿ 450 ಸ್ಕ್ರೀನ್‌ಗಳಲ್ಲಿ ವಿಕ್ರಾಂತ್ ರೋಣ ತೆರೆಗೆ ಬರಲಿದೆ. ಕರ್ನಾಟಕದಲ್ಲಿ ಮಾತ್ರವೇ ವಿಕ್ರಾಂತ್ ರೋಣಗಾಗಿ 450 ಸ್ಕ್ರೀನ್‌ಗಳನ್ನು ಈಗಾಗಲೇ ಮೀಸಲಿರಿಸಲಾಗಿದೆ.

    'ವಿಕ್ರಾಂತ್ ರೋಣ' ತಂಡದ NFT ಮೆಂಬರ್‌ಶಿಪ್: ವಿಶ್ವದಲ್ಲಿ ಇದೇ ಮೊದಲು!'ವಿಕ್ರಾಂತ್ ರೋಣ' ತಂಡದ NFT ಮೆಂಬರ್‌ಶಿಪ್: ವಿಶ್ವದಲ್ಲಿ ಇದೇ ಮೊದಲು!

    ಆಂಧ್ರ, ಕೇಳರ, ತಮಿಳು ನಾಡು!

    ಆಂಧ್ರ, ಕೇಳರ, ತಮಿಳು ನಾಡು!

    ಕರ್ನಾಟಕದಲ್ಲಿ 450 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ವಿಕ್ರಾಂತ್ ರೋಣ, ಅಕ್ಕಪಕ್ಕದ ರಾಜ್ಯಗಳಲ್ಲಿ ಕೂಡ ಹೆಚ್ಚಿನ ಬೇಡಿಕೆ ಸೃಷ್ಟಿಸಿಕೊಂಡಿದೆ. ಮೂಲಗಳ ಮಾಹಿತಿಯ ಪ್ರಕಾರ ಆಂಧ್ರ, ಕೇರಳ, ತಮಿಳುನಾಡಿನಲ್ಲಿ ವಿಕ್ರಾಂತ್ ರೋಣ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಆಂಧ್ರ- ತೆಲಂಗಾಣದಾದ್ಯಂತ 450 ಸ್ಕ್ರೀನ್‌ಗಳಲ್ಲಿ ಚಿತ್ರ ತೆರೆಕಂಡರೆ, ತಮಿಳುನಾಡಿನಲ್ಲಿ 200 ಸ್ಕ್ರೀನ್, ಅಂತೆಯೇ ಕೇರಳದಾದ್ಯಂತ 150 ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

    ಹಿಂದಿಯಲ್ಲಿ 1000ಕ್ಕೂ ಅಧಿಕ!

    ಹಿಂದಿಯಲ್ಲಿ 1000ಕ್ಕೂ ಅಧಿಕ!

    ಇನ್ನು ಇತ್ತೀಚಿಗೆ ನಾರ್ತ್ ಇಂಡಿಯಾದಲ್ಲಿ ಸೌತ್ ಸಿನಿಮಾಗಳ ಅಬ್ಬರದ ಪರಿ ಗೊತ್ತೇ ಇದೆ. ನಾರ್ತ್‌ನಲ್ಲೂ ಈ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದೆ. ಇನ್ನು ಹಿಂದಿ ವರ್ಷನ್‌ನಲ್ಲಿ ರಿಲೀಸ್ ಆಗುತ್ತಿರುವ, ವಿಕ್ರಾಂತ್ ರೋಣ ಸಿನಿಮಾ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಇಲ್ಲಿ ತನಕ 1000 ಸ್ಕ್ರೀನ್‌ಗಳು ವಿಕ್ರಾಂತ್ ರೋಣ ಹಿಂದಿ ಅವತರಣಿಕೆಗೆ ನಿಗಧಿ ಆಗಿವೆ. ಇನ್ನು ಬಾಲಿವುಡ್‌ನಲ್ಲಿ ಬಂದ ಶಂಶೇರಾ ಸಿನಿಮಾ ಅಷ್ಟಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡದ ಕಾರಣ, ಮತ್ತಷ್ಟು ಸ್ಕ್ರೀನ್‌ಗಳು ವಿಕ್ರಾಂತ್ ರೋಣನ ಪಾಲಾಗಲಿವೆ. ಹಾಗಾಗಿ ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಹಿಂದಿ ಅವತರಣಿಕೆಯ ವಿಕ್ರಾಂತ್ ರೋಣ ಅಬ್ಬರಿಸಲಿದ್ದಾನೆ.

    ಇನ್ನೂ ಹೆಚ್ಚಲಿದೆ ಸ್ಕ್ರೀನ್ ಸಂಖ್ಯೆ!

    ಇನ್ನೂ ಹೆಚ್ಚಲಿದೆ ಸ್ಕ್ರೀನ್ ಸಂಖ್ಯೆ!

    ಇದು ಕೇವಲ ಭಾರತದಾದ್ಯಂತ ನಿಗದಿಯಾಗಿರುವ ಸ್ಕ್ರೀನ್‌ಗಳ ಸಂಖ್ಯೆ ಇನ್ನೂ ಓವರ್ಸೀಸ್ ನಲ್ಲಿ ವಿಕ್ರಾಂತ್ ಎಷ್ಟು ಸ್ಕ್ರೀನ್‌ಗಳಲ್ಲಿ ತೆರೆಕಾಣಲಿದೆ ಎನ್ನುವ ಲೆಕ್ಕಾಚಾರ ಬರಬೇಕಿದೆ. ಜುಲೈ 28ರ ತನಕ ಸಮಯ ಇರುವುದರಿಂದ ಭಾರತದಲ್ಲಿ ಸದ್ಯಕ್ಕೆ ನಿಗದಿಯಾಗಿರುವ 3500 ಸ್ಕ್ರೀನ್‌ಗಳು ಮತ್ತಷ್ಟು ಹೆಚ್ಚಾಗುವುದು ಖಚಿತ. ಓವರ್ಸೀಸ್ ಲೆಕ್ಕ ಸಿಕ್ಕರೆ. ಬಹುಶಃ 5000 ಸ್ಕ್ರೀನ್‌ಗಳ ವರೆಗೂ ಈ ಸಂಖ್ಯೆ ಏರಿಕೆ ಆಗಬಹುದು.

    English summary
    Kichcha Sudeep starrer Vikrant Rona Movie set to release on 3500 screens as on today in India, Know More,
    Saturday, July 23, 2022, 12:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X