»   » 1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ 'ಕಿರಿಕ್ ಪಾರ್ಟಿ' ಹಾಡು.!

1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ 'ಕಿರಿಕ್ ಪಾರ್ಟಿ' ಹಾಡು.!

Posted By:
Subscribe to Filmibeat Kannada
ಬಿಡುಗಡೆಯಾದ 1 ವರ್ಷದ ನಂತರ ಹೊಸ ದಾಖಲೆ ನಿರ್ಮಿಸಿದ ‘ಕಿರಿಕ್ ಪಾರ್ಟಿ’ | Filmibeat Kannada

"ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ...ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ'......ಈ ಹಾಡನ್ನ ಗುನುಗುತ್ತಾ ಅದೇಷ್ಟು ಜನ ಯುವಕರು ತಮ್ಮ ಪ್ರೇಯಸಿ ಬಗ್ಗೆ ಯೋಚನೆ ಮಾಡಿರುತ್ತಾರೋ ಗೊತ್ತಿಲ್ಲ. ವರ್ಷಗಳು ಕಳೆದರೂ, ಮತ್ತಷ್ಟು ಮಧುರವಾದ ಹಾಡುಗಳು ಬಂದರೂ, ಈ ಹಾಡಿನ್ನ ಕ್ರೇಜ್ ಮಾತ್ರ ಇನ್ನು ಕಮ್ಮಿಯಾಗಿಲ್ಲ.

ಹೌದು, 'ಕಿರಿಕ್ ಪಾರ್ಟಿ' ಚಿತ್ರದ ಈ ಹಾಡು ಯ್ಯೂಟ್ಯೂಬ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಒಂದು ವರ್ಷದಲ್ಲಿ ಸುಮಾರು 4 (40,067,539) ಕೋಟಿಗೂ ಅಧಿಕ ಬಾರಿ ಈ ಹಾಡನ್ನ ಯ್ಯೂಟ್ಯೂಬ್ ನಲ್ಲಿ ನೋಡಿದ್ದಾರೆ. ಈ ಮೂಲಕ ಕನ್ನಡದ ಹಾಡೊಂದು 40 ಮಿಲಿಯನ್ ವೀಕ್ಷಕರನ್ನ ಹೊಂದಿರುವುದು ಇದೇ ಮೊದಲು.

'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ರೈಟ್ಸ್ ಗೆ ಅಷ್ಟೊಂದು ಬೆಲೆಯೇ.? ಅಬ್ಬಬ್ಬಾ.!

Kirik Party's song 40 million views in youtube

ಅಂದ್ಹಾಗೆ, ಈ ಹಾಡಿಗೆ ಧನಂಜಯ ರಂಜನ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನವೆಂಬರ್ 25, 2016 ರಂದು ಯೂಟ್ಯೂಬ್ ನಲ್ಲಿ ಅಪ್‌ ಲೋಡ್ ಮಾಡಲಾಗಿತ್ತು. ಇನ್ನು 10 ದಿನ ಆದ್ರೆ, ಈ ಹಾಡಿಗೆ ಒಂದು ವರ್ಷದ ಸಂಭ್ರಮ.

ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಸೇರಿದಂತೆ ಹಲವರು ಅಭಿನಯಿಸಿದ್ದರು.

English summary
Kirik Party's song was First Kannada song to hit the 40 million views in youtube. Here is full details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada