»   » ನೆಚ್ಚಿನ ಚಿತ್ರಮಂದಿರಗಳಲ್ಲಿ ಕಾಮಿಡಿ ಚಿತ್ರ 'ಪರಾರಿ'

ನೆಚ್ಚಿನ ಚಿತ್ರಮಂದಿರಗಳಲ್ಲಿ ಕಾಮಿಡಿ ಚಿತ್ರ 'ಪರಾರಿ'

By Rajendra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಈ ವರ್ಷದ ಬಹುನಿರೀಕ್ಷಿತ ಚಿತ್ರ ಅಲ್ಲದಿದ್ದರೂ 'ಪರಾರಿ' ಚಿತ್ರ ಕುತೂಹಲವನ್ನಂತೂ ಕೆರಳಿಸಿದೆ. ಇದಕ್ಕೆ ಕಾರಣವಾಗಿರುವುದು ಚಿತ್ರದ ನಿರ್ದೇಶಕ ಕೆ.ಎಂ.ಚೈತನ್ಯ. ಬಹಳಷ್ಟು ಗ್ಯಾಪ್ ನ ಬಳಿಕ ಅವರು ಪರಾರಿ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  ಈ ಬಾರಿ ಅವರ ಸಬ್ಜೆಕ್ಟ್ ಕಾಮಿಡಿ ಆಗಿರುವ ಕಾರಣ ಪ್ರೇಕ್ಷಕರು ಗಂಭೀರ ನೋಟ ಹರಿಸಿದ್ದಾರೆ. ಹರೆಯದ ಹೃದಯ ಯಾರಿಗೆ ಇದೆಯೋ ಅಂಥಹವರಿಗೆ ತಮ್ಮ ಚಿತ್ರ ಎಂದಿದ್ದಾರೆ ಚಿತ್ರದ ನಿರ್ದೇಶಕರು. ಈ ಚಿತ್ರದ ಮೂಲಕ ಮೇಘನಾ ನಾಯ್ಡು ಐಟಂ ಬೆಡಗಿಯಾಗಿ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ.


  ಶುಭಾ ಪೂಂಜಾ, ಜಾಹ್ನವಿ ಕಾಮತ್, ಶ್ರವಂತ್ ರಾವ್, ಶೃಂಗ, ಬುಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ ಪಾತ್ರವರ್ಗದಲ್ಲಿ ಇದ್ದಾರೆ. ಶಕ್ತಿ ಮೂವೀಸ್ ವರ್ಲ್ಡ್ ವೈಡ್ ಲಾಂಛನದಲ್ಲಿ ಸುಮಿತ್ ಕೊಂಬ್ರ ಅವರು ನಿರ್ಮಿಸಿರುವ 'ಪರಾರಿ' ಚಿತ್ರ ಈ ವಾರ (ಏಪ್ರಿಲ್ 19) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. (ಕೆ.ಎಂ.ಚೈತನ್ಯ ಸಂದರ್ಶನ)

  'ಆ ದಿನಗಳು', 'ಸೂರ್ಯಕಾಂತಿ' ಚಿತ್ರಗಳ ನಂತರ ಕೆ.ಎಂ.ಚೈತನ್ಯ ನಿರ್ದೇಶಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ಹರಿದಾಸ್ ಕೆ.ಜಿ.ಎಫ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ಅರುಣ್ ಸಾಗರ್ ಕಲಾನಿರ್ದೇಶನದ 'ಪರಾರಿ'ಗೆ ಎಸ್.ಮೋಹನ್ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

  ಚಿತ್ರದಲ್ಲಿ ಭರಪೂರ ಮನರಂಜನೆ ಇದೆ. 16ರಿಂದ 22ರ ವಯೋಮಾನದ ಯುವಕರ ಕತೆ ಇದು. ಎರಡೂವರೆ ಗಂಟೆಗಳ ಎಲ್ಲರೂ ನಕ್ಕು ನಗಿಸಲಿದ್ದಾರೆ. ಚಿತ್ರದಲ್ಲಿ ವಿಲನ್ ಸಹ ನಗಿಸುತ್ತಾನೆ. ಯುವಕರ ಕನಸು, ಕಷ್ಟ ಸುಖಗಳನ್ನು ಕಾಮಿಡಿ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ ಎಂದಿದ್ದಾರೆ ಚೈತನ್ಯ. (ಒನ್ಇಂಡಿಯಾ ಕನ್ನಡ)

  English summary
  K M Chaitanya's non stop rib-tickling, action and fun roller coaster 'Parari' film slated for release on 19th April. Parari is a film for everyone who is young at heart.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more