»   » ಪುಂಗಿ ಊದಿದ್ದಕ್ಕೆ ಕೊನೆಗೂ ಯು/ಎ ಅರ್ಹತಾ ಪತ್ರ

ಪುಂಗಿ ಊದಿದ್ದಕ್ಕೆ ಕೊನೆಗೂ ಯು/ಎ ಅರ್ಹತಾ ಪತ್ರ

Posted By:
Subscribe to Filmibeat Kannada

ಹಾಸ್ಯ ಚಿತ್ರಕ್ಕೆ ಎಂದರೆ ಸಾಮಾನ್ಯವಾಗಿ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ನೀಡುತ್ತದೆ. ಒಂಚೂರು ಇರುಸು ಮುರುಸು ಸನ್ನಿವೇಶಗಳಿದ್ದರೆ ಯು/ಎ ಸರ್ಟಿಫಿಕೇಟ್. ಪುಂಗಿ ಊದಿದ್ದಕ್ಕೆ ಕೊನೆಗೂ ಯು/ಎ ಅರ್ಹತಾ ಪತ್ರವನ್ನು ಸೆನ್ಸಾರ್ ಮಂಡಳಿ 'ಪುಂಗಿದಾಸ'ನಿಗೆ ನೀಡಿದೆ.

ಬೀದರ್ ಕೋಟೆಯಲ್ಲಿ ಹಾಡಿನ ಚಿತ್ರೀಕರಣದೊಂದಿಗೆ 'ಪುಂಗಿದಾಸ' ಚಿತ್ರ ಪ್ಯಾಕಪ್ ಹೇಳಿದೆ. ಈಗ ಚಿತ್ರೇತರ ಚಟುವಟಿಕೆಗಳು ನಡೆಯುತ್ತಿರುವಾಗಲೇ ಅದಕ್ಕೆ ಬೇರೆ ಭಾಷೆಯಿಂದ ಬೇಡಿಕೆ ಸಹ ಬಂದಿರುವುದು ವಿಶೇಷ.

ಕೋಮಲ್ ಕುಮಾರ್ ಅವರ ಮತ್ತೊಂದು ನಿರೀಕ್ಷಿತ ಚಿತ್ರ 'ಪುಂಗಿ ದಾಸ' ಚಿತ್ರದ ನಿರ್ದೇಶಕ ಶ್ರೀನಾಥ್ 'ರಾಂಬೋ' ನಿರ್ದೇಶಕರು, 'ವಿಕ್ಟರಿ' ಚಿತ್ರಕ್ಕೆ ಕಥೆ ಒದಗಿಸಿರುವವರು. ಈ ಬಾರಿ ಒಂದು ವಿಚಿತ್ರ ಹಾಗೂ ಸಮಾಜದಲ್ಲಿ ಜರಗುವ ಸಂಗತಿಯನ್ನು ಇಟ್ಟುಕೊಂಡೇ ನಕ್ಕು ನಗಿಸಲು ಕೋಮಲ್ ಕುಮಾರ್ ಅವರ ಇಮೇಜ್ ಅನ್ನು ಬಳಸಿಕೊಂಡಿದ್ದಾರೆ. [ಕಾಮಿಡಿ ಸಿನಿಮಾಗಳೇ ಕಾಣ್ತಿಲ್ಲ ಗಾಂಧಿನಗರದಲ್ಲಿ]


ಕೋಮಲ್ ಕುಮಾರ್ ಅವರಿಗೆ ಆಸ್ಮಾ ಎಂಬುವರು ನಾಯಕಿ. ಆರ್ ಎನ್ ಸುದರ್ಶನ್ ತಾತನಾಗಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ಸಾಹುಕಾರ್ ಜಾನಕಿ ಅವರು ಅಜ್ಜಿ ಪಾತ್ರಧಾರಿ. ಬಿ ಸಿ ಪಾಟೀಲ್, ಆಶಿಷ್, ತಬ್ಲ ನಾಣಿ, ಕುರಿ ಪ್ರತಾಪ್, ಬುಲ್ಲೆಟ್ ಪ್ರಕಾಶ್, ಪದ್ಮಜಾ ರಾವ್ ಮುಖ್ಯ ಪಾತ್ರದಲ್ಲಿ ರಾಜೇಂದ್ರ ಕಾರಂತ್ ಹಾಗೂ ಇನ್ನಿತರರು ಇದ್ದಾರೆ.

'ಪುಂಗಿ ದಾಸ' ಚಿತ್ರಕ್ಕೆ ಸಂಗೀತದ ಪುಂಗಿ ಊದುತ್ತಿರುವವರು ಫರ್ಹಾನ್ ರೋಶನ್ (ಈ ಹಿಂದೆ ಏಮಿಲ್ ಎಂದು ಪರಿಚಯ ಅದವರು ನಂದ ಲವ್ಸ್ ನಂದಿತಾ ಚಿತ್ರದ ಜಿಂಕೆಮರಿ ಹಾಡಿನ ಖ್ಯಾತಿ). ಅರುಳ್ ಅವರ ಛಾಯಾಗ್ರಹಣವಿದೆ. ಎಸ್ ಎಸ್ ವಿ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದ ನಿರ್ಮಾಪಕರು ಸದಾಶಿವ. (ಒನ್ಇಂಡಿಯಾ ಕನ್ನಡ)

English summary
Kannada comedy star Komal Kumar lead film 'Pungi daasa' gets U/A certificate from regional censor board. The movie directed by MS Sreenath who had given successful film 'Rambo'. For 'Pungi Daasa' Sadashiva is the producer. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada