For Quick Alerts
  ALLOW NOTIFICATIONS  
  For Daily Alerts

  "ದೊಡ್ಡವ್ರೇ ಇದ್ರ ಹಿಂದೆ ಇದ್ದಾರೆ.. ಎಲ್ಲಾ ಕಲೆ ಹಾಕ್ತಿದ್ದೀವಿ.. ಮುಟ್ಟಿ ನೋಡ್ಕೊಳ್ಳುವಂತೆ ಕೊಡ್ತೀವಿ": ದರ್ಶನ್

  By ಫಿಲ್ಮಿಬೀಟ್ ಡೆಸ್ಕ್
  |

  'ಕ್ರಾಂತಿ' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಡಿ ಕಂಪನಿ ಯೂಟ್ಯೂಬ್‌ ಚಾನಲ್‌ಗೆ ನಟ ದರ್ಶನ್ ಸಂದರ್ಶನ ಕೊಟ್ಟಿದ್ದಾರೆ. 'ಕ್ರಾಂತಿ' ಸಿನಿಮಾ ಜೊತೆಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹೊಸಪೇಟೆ ಘಟನೆ ಬಗ್ಗೆ ಕೂಡ ಚಾಲೆಂಜಿಂಗ್ ಸ್ಟಾರ್ ಮತ್ತೊಂದು ಪ್ರತಿಕ್ರಿಯಿಸಿದ್ದಾರೆ.

  ಡಿಸೆಂಬರ್ 18ರಂದು 'ಬೊಂಬೆ ಬೊಂಬೆ' ಸಾಂಗ್‌ ಬಿಡುಗಡೆ‌ಗಾಗಿ 'ಕ್ರಾಂತಿ' ಟೀಂ ಹೊಸಪೇಟೆಗೆ ಭೇಟಿ ನೀಡಿತ್ತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಾಂಗ್ ರಿಲೀಸ್ ಮಾಡಲಾಗಿತ್ತು. ವೇದಿಕೆಯಲ್ಲಿ ನಟಿ ರಚಿತಾ ರಾಮ್ ಮಾತನಾಡುತ್ತಿದ್ದಾಗ ಪಕ್ಕದಲ್ಲೇ ನಿಂತಿದ್ದ ದರ್ಶನ್ ಅವರ ಮೇಲೆ ಕಿಡಿಗೇಡಿ ಒಬ್ಬ ಚಪ್ಪಲಿ ತೂರಿದ್ದ ಘಟನೆ ನಡೆದಿತ್ತು. ಒಂದು ಕ್ಷಣ ಈ ಘಟನೆ ಅಲ್ಲಿದ್ದ ಅಭಿಮಾನಿಗಳಿಗೆ ಶಾಕ್ ತಂದಿತ್ತು. ಚಿತ್ರರಂಗ ಆ ಘಟನೆಯನ್ನು ಖಂಡಿಸಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಬೆಂಬಲ ಸೂಚಿಸಿತ್ತು. ಈ ಘಟನೆ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವಿನ ಕೆಸರೆರಚಾಟಕ್ಕೂ ಕಾರಣವಾಗಿತ್ತು.

  ಮುಂಬೈ, ಪುಣೆ, ಹೈದ್ರಾಬಾದ್‌ನಲ್ಲಿ 'ಕ್ರಾಂತಿ' ಟಿಕೆಟ್ ಬುಕ್ಕಿಂಗ್ ಆರಂಭ: ಹೈದ್ರಾಬಾದ್‌ನಲ್ಲಿ ಒಂದು ಶೋ ಸೋಲ್ಡೌಟ್‌!ಮುಂಬೈ, ಪುಣೆ, ಹೈದ್ರಾಬಾದ್‌ನಲ್ಲಿ 'ಕ್ರಾಂತಿ' ಟಿಕೆಟ್ ಬುಕ್ಕಿಂಗ್ ಆರಂಭ: ಹೈದ್ರಾಬಾದ್‌ನಲ್ಲಿ ಒಂದು ಶೋ ಸೋಲ್ಡೌಟ್‌!

  ಈ ಹಿಂದೆ ಆರ್‌ಜೆ ಮಯೂರ ರಾಘವೇಂದ್ರ ನಡೆಸಿದ ಸಂದರ್ಶನದಲ್ಲೂ ನಟ ದರ್ಶನ್ ಹೊಸಪೇಟೆ ಘಟನೆ ಬಗ್ಗೆ ಮಾತನಾಡಿದ್ದರು. ಡಿ ಕಂಪೆನಿಗೆ ನೀಡಿರುವ ಸಂದರ್ಶನದಲ್ಲಿ ತುಸು ಖಾರವಾಗಿಯೇ ಎಚ್ಚರಿಕೆ ನೀಡಿದ್ದಾರೆ.

  ಯಾರೋ ಹೇಳಿಕೊಟ್ಟಿದ್ದಾರೆ

  ಯಾರೋ ಹೇಳಿಕೊಟ್ಟಿದ್ದಾರೆ

  ಹೊಸಪೇಟೆ ಘಟನೆಯಿಂದ ದರ್ಶನ್ ಅಭಿಮಾನಿಗಳಿಗೆ ಬಹಳ ಬೇಸರವಾಗಿತ್ತು. ನಾವು ನಿಮ್ಮ ಮೇಲೆ ಹೂ ಹಾಕ್ತೀವಿ, ಹಚ್ಚೆ ಹಾಕಿಸಿಕೊಳ್ತೀವಿ, ಅಂತಾದ್ರಲ್ಲಿ ಯಾರೊ ಒಬ್ಬ ಗುಂಪಲ್ಲಿ ಚಪ್ಪಲಿ ಎಸೆದು ಅವಮಾನ ಮಾಡಿದ್ದ. ಇದನ್ನು ನಾನು ಹೇಗೆ ತೆಗೆದುಕೊಳ್ಳಬೇಕು ಎನ್ನುವ ಪ್ರಶ್ನೆಗೆ ದರ್ಶನ್, "ಒಂದ್ಕಡೆ ಕೊಚ್ಚೆ ಇದೆ. ಎಲ್ರೂ ಅದ್ರಲ್ಲಿ ಕಾಲು ಹಾಕಲ್ಲ. ಯಾವನೋ ಒಬ್ಬ ಕಾಲು ಹಾಕ್ತಾನೆ. ಅವನು ಕಾಲು ಹಾಕಿದ ಎಂದು ನಾವು ಅಯ್ಯೋ ಎಂದುಕೊಳ್ತೀವಿ. ಆದ್ರೆ ಅವನಿಗೆ ಇನ್ನೊಬ್ಬ ಹೇಳಿರುತ್ತಾನೆ. ಈ ರೀತಿ ಕೊಚ್ಚೆಯಲ್ಲಿ ಕಾಲು ಹಾಕು ಅಂತ"

  ಅವನ ಬುದ್ಧಿಯಿಂದ ಹೊಡೆದಿಲ್ಲ

  ಅವನ ಬುದ್ಧಿಯಿಂದ ಹೊಡೆದಿಲ್ಲ

  ಸಂದರ್ಶನಕರನ್ನು ಉದ್ದೇಶಿಸಿ "ನಾನು ಏನಾದರೂ ಕೇಳಿದರೆ ನೀವು ಕೊಡ್ತೀರಾ. ನಾನು ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೇ ಕೊಡ್ತೀರಾ. ಯಾಕೆ ಕೊಟ್ರಿ, ದರ್ಶನ್ ಏನೋ ಕೇಳಿದ್ದಾರೆ. ಕೊಡ್ಬೇಕು ಅಂತ ಕೊಟ್ರಿ, ಅದೇ ರೀತಿ ಹೊಡಿ ಎಂದು ಹೇಳಿದಾಗ ಹಿಂದೆ ಮುಂದೆ ನೋಡದೇ ಅವನು ಹೊಡೆದಿದ್ದಾನೆ. ಅವನ ಬುದ್ದಿಯಿಂದ ಅಂತೂ ಹೊಡೆದಿರುವುದಿಲ್ಲ ಅಲ್ಲವೇ".

  ದೊಡ್ಡವ್ರೇ ಇದ್ರ ಹಿಂದೆ ಇದ್ದಾರೆ

  ದೊಡ್ಡವ್ರೇ ಇದ್ರ ಹಿಂದೆ ಇದ್ದಾರೆ

  "ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಎಲ್ಲಾ ಇದೆ. ಎಲ್ಲಾ ಬರುತ್ತೆ. ಬಟ್ ತೆಗೆದ್ರೆ ಮಾತ್ರ ಅದು ಯಾರೇ ಆಗಿದ್ರೂ ಮುಟ್ಟಿನೋಡಿಕೊಳ್ಳುವಂತೆ ಕೊಟ್ಟೇ ಕೊಡ್ತೀವಿ. ಅಂತಹ ದೊಡ್ಡ ತಪ್ಪು ನಾವೇನು ಮಾಡಿಲ್ಲ ಅಲ್ಲ. ಯಾರನ್ನಾದರೂ ಎಳೆದಾಡಿದ್ದೀವಾ? ಏನಾದರೂ ಮಾಡಿದ್ದೀವಾ? ಮತ್ತೊಂದು ಮಗೊದಂದು ಮಾಡಿದ್ದೀವಾ? ನಾವು ನಮ್ಮ ಸಿನಿಮಾ ಪ್ರಚಾರಕ್ಕೆ ಹೋಗಿದ್ದೆವು. ಅದಕ್ಕೆ ಇನ್ನು ಸುಮಾರು ಜನ ಸೇರಿದ್ದಾರೆ. ನಾವೇ ದೊಡ್ಡವರು ಎನ್ನುವವರು, ನಾವೇ ಎಲ್ಲಾ ಅಂದುಕೊಂಡಿರುವವರು ಸೇರಿದ್ದಾರೆ. ಆಗಲಿ, ಎಲ್ಲವನ್ನು ಕಾದು ನೋಡೋಣ. ಸ್ವಲ್ಪ ತಾಳ್ಮೆ ಇರಲಿ" ಎಂದು ದರ್ಶನ್ ಹೇಳಿದ್ದಾರೆ.

  'ಕ್ರಾಂತಿ' ರಿಲೀಸ್‌ಗೆ ಕ್ಷಣಗಣನೆ

  'ಕ್ರಾಂತಿ' ರಿಲೀಸ್‌ಗೆ ಕ್ಷಣಗಣನೆ

  ದರ್ಶನ್ ನಟನೆಯ ಬಹುನಿರೀಕ್ಷಿತ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಈ ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ವಿ. ಹರಿಕೃಷ್ಣ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಚರ್ಚಿಸಲಾಗಿದೆ. ಅಭಿಮಾನಿಗಳು ಕೇಳುವ ಎಲ್ಲಾ ಕಮರ್ಷಿಯಲ್ ಅಂಶಗಳು ಚಿತ್ರದಲ್ಲಿದೆ. ಭಾನುವಾರವೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

  English summary
  Kranti Actor Darshan Reacts On Hospet slipper hurled incident. Darshan Starrar kranti movie which is scheduled to release on January 26, 2023. Know more.
  Wednesday, January 25, 2023, 13:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X