'ರಾಯಣ್ಣ' ಶತದಿನೋತ್ಸವಕ್ಕೆ ಭರ್ಜರಿ ಸಿದ್ಧತೆ
ಸಂಗೊಳ್ಳಿ ರಾಯಣ್ಣ ಚಿತ್ರ 112 ಚಿತ್ರಮಂದಿರಗಳಲ್ಲಿ 35 ದಿನ ಪ್ರದರ್ಶನ ಕಂಡಿದೆ, 74 ಚಿತ್ರಮಂದಿರಗಳಲ್ಲಿ ಅರ್ಧ ಶತಕ ಬಾರಿಸಿದೆ, 52 ಚಿತ್ರಮಂದಿರಗಳಲ್ಲಿ 75 ದಿನಗಳನ್ನು ಪೂರೈಸಿ ಈಗ 43 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸುತ್ತಿದೆ.
ಕನ್ನಡ ಚಿತ್ರೋದ್ಯಮದಲ್ಲಿ ವಾರ ಒಂದು ವಾರಕ್ಕೆಲ್ಲಾ ಚಿತ್ರಗಳು ಎತ್ತಂಗಡಿಯಾವುದು ಸರ್ವೇ ಸಾಮಾನ್ಯ. ಆದರೆ ಸ್ವಾತಂತ್ರ್ಯ ಸೇನಾಯಿ ರಾಯಣ್ಣನ ಕಥೆ ಇಷ್ಟು ದಿನ ಪ್ರದರ್ಶನ ಕಾಣುತ್ತಿರುವುದು ಐತಿಹಾಸಿಕ ಚಿತ್ರಗಳಿಗೆ ಬೇಡಿಕೆ ಇದ್ದೇ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇದೇ ಫೆಬ್ರವರಿ 22ರಂದು ಸಂಗೊಳ್ಳಿ ರಾಯಣ್ಣ ಶತದಿನೋತ್ಸವ ಸಮಾರಂಭವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಅರಮನೆ ಮೈದಾನದ ಶೃಂಗಾರ್ ಗಾರ್ಡನ್ಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಶತದಿನೋತ್ಸವ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳ ಮಾಲೀಕರನ್ನು ಆಹ್ವಾನಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಗೆಲ್ಲಾ ಕಾರ್ಯಕ್ರಮ ಆರಂಭವಾಗಲಿದೆ. ಹಾಗೆಯೇ ಚಿತ್ರದಲ್ಲಿ ಕೆಲಸ ಮಾಡಿರುವ ಕಲಾವಿದರು, ತಂತ್ರಜ್ಞರು ಒಳಗೊಂಡಂತೆ 90 ಮಂದಿ ಪಾಲ್ಗೊಳ್ಳಲಿದ್ದಾರೆ. ರಾಯಣ್ಣನ 600 ಪಂಚಲೋಹ ವಿಗ್ರಹಗಳು, 20 ಪಾರಿತೋಷಕಗಳನ್ನು ನೀಡಲು ಅಪ್ಪುಗೋಳ್ ಮುಂದಾಗಿದ್ದಾರೆ. (ಏಜೆನ್ಸೀಸ್)


Click it and Unblock the Notifications












