»   » ತೆಲುಗು ಸಿನಿಪ್ರೇಕ್ಷಕರಿಗೆ ರಾಧಿಕಾ ಪಂಡಿತ್ ದರ್ಶನ

ತೆಲುಗು ಸಿನಿಪ್ರೇಕ್ಷಕರಿಗೆ ರಾಧಿಕಾ ಪಂಡಿತ್ ದರ್ಶನ

Posted By:
Subscribe to Filmibeat Kannada

ಕನ್ನಡದ ಅತೀ ಬೇಡಿಕೆಯ ನಟಿಯರಲ್ಲಿ ರಾಧಿಕಾ ಪಂಡಿತ್ ಹೆಸರು ಬಹುಮುಖ್ಯವಾದುದು. ಕನ್ನಡದಲ್ಲಿ ರಮ್ಯಾ ನಂತರದ ಸ್ಥಾನದಲ್ಲಿ ಕೇಳಿಬರುತ್ತಿರುವ ಹೆಸರೆಂದರೆ ಅದು ರಾಧಿಕಾ ಪಂಡಿತ್ ಮಾತ್ರ. ಇಲ್ಲಿಯವೆರೆಗೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸುತ್ತಿದ್ದ ರಾಧಿಕಾ ಸದ್ಯದಲ್ಲೇ ತೆಲುಗಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದರೆ ರಾಧಿಕಾ ತೆಲುಗು ಚಿತ್ರಗಳಲ್ಲಿ ನಟಿಸುತ್ತಿಲ್ಲ. ಬದಲಿಗೆ ರಾಧಿಕಾ ಹಾಗೂ ಅಜಯ್ ರಾವ್ ನಟಿಸಿರುವ ಶಶಾಂಕ್ ನಿರ್ದೇಶನದ 'ಕೃಷ್ಣನ್ ಲವ್ ಸ್ಟೋರಿ' ಚಿತ್ರ ತೆಲುಗಿಗೆ 'ಕೃಷ್ಣ ಲವ್ಸ್ ಗೀತಾ' ಎಂಬ ಹೆಸರಿನಿಂದ ಡಬ್ ಆಗಿದೆ. ಕನ್ನಡದ ಕೃಷ್ಣನ್ ಲವ್ ಸ್ಟೋರಿ. ಡಬ್ ಆಗಿದ್ದರಿಂದ ಸಹಜವಾಗಿ ಕನ್ನಡದ ಅಜಯ್ ಹಾಗೂ ರಾಧಿಕಾ ಪಂಡಿತ್ ಜೋಡಿ ತೆಲುಗಿನ ಪ್ರೇಕ್ಷಕರ ಮುಂದೆ ನಿಲ್ಲಲಿದ್ದಾರೆ.

ಅಕಸ್ಮಾತ್ ಈ ಚಿತ್ರವೇನಾದರೂ ತೆಲುಗಿಗೆ ರೀಮೇಕ್ ಆಗಿದ್ದರೆ ಅಲ್ಲಿ ಇದೇ ಜೋಡಿಯನ್ನು ನೋಡಲು ಸಾಧ್ಯವಾಗುವ ಅವಕಾಶ ಕಡಿಮೆಯಿತ್ತು. ಡಬ್ ಆಗಿರುವುದರಿಂದ ರಾಧಿಕಾ ಪಂಡಿತ್ ಬಂಪರ್ ಹೊಡೆಯಲಿದ್ದಾರೆ ಎನ್ನಬಹುದು. ಏಕೆಂದರೆ ಕನ್ನಡದಲ್ಲಿ ಇಷ್ಟೊಂದು ಬೆಳೆದಿದ್ದರೂ ರಾಧಿಕಾ ಬೇರೆ ಭಾಷೆಯ ಚಿತ್ರಗಳಲ್ಲಿ ಇನ್ನೂ ಮುಖ ತೋರಿಸಿರಲಿಲ್ಲ.

ಇನ್ನು ಅಜಯ್ ರಾವ್ ಕೂಡ ಮೊದಲಬಾರಿಗೆ ಕನ್ನಡ ಬಿಟ್ಟು ಬೇರೆ ಭಾಷೆಯ ನೆಲದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅಜಯ್ ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವ ಯಾವುದೇ ಇರಾದೆ ಸದ್ಯಕ್ಕಿಲ್ಲ ಎನ್ನಲಾಗುತ್ತಿದೆ. ಆದರೆ ರಾಧಿಕಾ ಮಾತ್ರ 'ಕಲಾವಿದರಿಗೆ ಭಾಷೆಯ ಹಂಗಿಲ್ಲ' ಎಂಬ ನಿಲುವಿಗೆ ಬದ್ಧರಾಗಿದ್ದಾರೆ ಎನ್ನಲಾಗಿದೆ.

ಇತ್ತೀಚಿಗೆ, ಶನಿವಾರ (09 ಜೂನ್ 2012) ರಂದು ಹೈದ್ರಾಬಾದ್ ನಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕನ್ನಡದ ಕೃಷ್ಣನ್ ಲವ್ ಸ್ಟೋರಿ ತಂಡ ಹೋಗಿತ್ತು. ನಿರ್ದೇಶಕ ಶಶಾಂಕ್, ಅಜಯ್ ರಾವ್, ರಾಧಿಕಾ ಪಂಡಿತ್ ಎಲ್ಲರೂ ಹೈದ್ರಾಬಾದ್ ನೆಲದ ವೇದಿಕೆಯಲ್ಲಿ ಮಿಂಚುತ್ತಿದ್ದರು. ರಾಧಿಕಾ ಪಂಡಿತ್ ಅವರಂತೂ ಎಕ್ಸ್ ಟ್ರಾ ಎನರ್ಜಿಯೊಂದಿಗೆ ಎಲ್ಲರ ಕಣ್ಣು ಕುಕ್ಕುತ್ತಿದ್ದರು.

ರಾಧಿಕಾ-ಅಜಯ್ ಕೃಷ್ಣನ್ ಲವ್ ಸ್ಟೋರಿಯಂತೂ ಡಬ್ ಆಗಿದೆ. ಸದ್ಯದಲ್ಲೇ ಬಿಡುಗಡೆಯೂ ಆಗಲಿದೆ. ಈ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿ ತಮ್ಮ ಅಭಿನಯ ಸಾಮರ್ಥ್ಯವನ್ನು ಗುರುತಿಸಿಬಹುದು. ತಮಗೆ ತೆಲುಗು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗಬಹುದು ಎಂಬ ಕನಸನ್ನು ರಾಧಿಕಾ ಕಾಣುತ್ತಿದ್ದಾರಂತೆ. ರಾಧಿಕಾ ಮಹಿಮೆ ಏನಿದೆಯೋ! (ಒನ್ ಇಂಡಿಯಾ ಕನ್ನಡ)

English summary
Shashank directed Kannada Movie Krishan Love Story Dubbed to Telugu in the name Krishna Loves Geetha. In this way, actress Radhika Pandit and Ajay Rao is going in front of Telugu audience. Radhika is dreaming to get chance in Telugu movies from this.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada