Don't Miss!
- News
Kamal Haasan: ಕಾಂಗ್ರೆಸ್ನಿಂದ ಕಣಕ್ಕಿಳಿಯಲಿದ್ದಾರಾ ಕಮಲ್ ಹಾಸನ್? ಅವರ ಮಾತು ಇಲ್ಲಿದೆ
- Sports
U-19 Women's World Cup 2023: ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಶ್!!!' ರೀ ರಿಲೀಸ್: ಕುಮಾರ್ ಗೋವಿಂದ್ ಪ್ಲ್ಯಾನ್ ಹಿಂದೆ ಇಷ್ಟೆಲ್ಲಾ ಲೆಕ್ಕಾಚಾರ ಇದ್ಯಾ?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಶ್!!!'. 1993ರಲ್ಲಿ ಈ ಸಿನಿಮಾ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಹೊಸ ತಂತ್ರಜ್ಞಾನ ಬಳಸಿ ಹೊಸ ರೂಪದಲ್ಲಿ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡುವ ಕೆಲಸ ಶುರುವಾಗಿದೆ.
ಕುಮಾರ್ ಗೋವಿಂದ್ ನಿರ್ಮಿಸಿ ಹೀರೊ ಆಗಿ ನಟಿಸಿದ್ದ ಈ ಹಾರರ್ ಥ್ರಿಲ್ಲರ್ ಸಿನಿಮಾ ದಾಖಲೆ ಬರೆದಿತ್ತು. ಸಿನಿಮಾ 30 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ದೊಡ್ಡಮಟ್ಟದಲ್ಲಿ ರೀ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಈ ಬಗ್ಗೆ ಸ್ವತಃ ಕುಮಾರ್ ಗೋವಿಂದ್ ಕನ್ನಡ ಪಿಕ್ಚರ್ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ. ಉಪೇಂದ್ರ ಹೀರೊ ಆಗಿ ನಟಿಸುವುದಕ್ಕೂ ಮೊದಲು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ ಸಿನಿಮಾಗಳಲ್ಲಿ 'ಶ್!!!' ಕೂಡ ಒಂದು. ಯಾವುದೇ ನಿರೀಕ್ಷೆ ಇಲ್ಲದೇ ತೆರೆಗೆ ಬಂದಿದ್ದ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸಿತ್ತು.
Yash
19
:
ಯಶ್
ಮುಂದಿನ
ಚಿತ್ರಕ್ಕೆ
ಯಶ್
ಅವರೇ
ನಿರ್ಮಾಪಕರಂತೆ;
ಬ್ಯಾನರ್
ಹೆಸರೇನು?
ಅವತ್ತಿನ ಕಾಲಕ್ಕೆ 'ಶ್!!!' ಸಿನಿಮಾ ತೆಲುಗು ಡಬ್ಬಿಂಗ್ ರೈಟ್ಸ್ 5 ಲಕ್ಷಕ್ಕೆ ಮಾರಾಟವಾಗಿತ್ತು. ನಿಜಕ್ಕೂ ಉಪೇಂದ್ರ ಸಿಲ್ವರ್ ಸ್ಕ್ರೀನ್ ಮೇಲೆ ಮ್ಯಾಜಿಕ್ ಮಾಡಿದ್ದರು. ಒಂದು ಹಾರರ್ ಚಿತ್ರವನ್ನು ಹಿಂಗೂ ಹೇಳಬಹುದು ಎಂದು ತೋರಿಸಿಕೊಟ್ಟಿದ್ದರು. ಕಂಟೆಂಟ್, ಮೇಕಿಂಗ್ ಎಲ್ಲಾ ವಿಚಾರಗಳಲ್ಲೂ ಸಿನಿಮಾ ಅದ್ಭುತ ಎನಿಸಿಕೊಂಡಿತ್ತು. ಈಗ ಇಂತಹ ಕಲ್ಟ್ ಸಿನಿಮಾಗಳಿಗೆ ಒಳ್ಳೆ ಡಿಮ್ಯಾಂಡ್ ಇದೆ. ಹಾಗಾಗಿ ಚಿತ್ರವನ್ನು ರೀ ರಿಲೀಸ ಮಾಡುವ ಕೆಲಸಕ್ಕೆ ಚಾಲನೆ ಸಿಕ್ಕಿದೆ.

ಸಿನಿಮಾ ಸ್ಕೋಪ್‌ನಲ್ಲಿ 'ಶ್!!!' ರೀ ರಿಲೀಸ್
"30 ಫ್ರೇಮ್‌ನಲ್ಲಿದ್ದ 'ಶ್!!!' ಚಿತ್ರವನ್ನು ಸಿನಿಮಾ ಸ್ಕೋಪ್‌ಗೆ ಬದಲಾಯಿಸಿದ್ದೇವೆ. ಕಂಪ್ಲೀಟ ಸೌಂಡ್ ತೆಗೆದು ಹಾಕಲಾಗಿದೆ. ಹೊಸದಾಗಿ ರೀ ರೆಕಾರ್ಡಿಂಗ್ ನಡೀತಿದೆ. ಇವತ್ತಿನ ಎಫೆಕ್ಟ್ಸ್, ಸೌಂಡ್ಸ್ ಬಳಸಲಾಗುತ್ತಿದ್ದು, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕೆಲಸ ನಡೀತಿದೆ. ಡಿಐ, ಕಲರ್ ಗ್ರೇಡಿಂಗ್ ಕೆಲಸ ಕೂಡ ಮುಗಿದಿದೆ. ಟೈಟಲ್ ಕಾರ್ಡ್ ಬೇರೆ ತರ ಮಾಡಿದ್ದೇವೆ. ಈಗ ಸಬ್‌ಟೈಟಲ್ಸ್ ಕೆಲಸ ಶುರುವಾಗಿದೆ. ಅದು ಮುಗಿದ ಮೇಲೆ ಸರ್‌ಪ್ರೈಸ್ ಆಗಿ ಚಿತ್ರವನ್ನ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ" ಎಂದು ನಟ, ನಿರ್ಮಾಪಕ ಕುಮಾರ್ ಗೋವಿಂದ್ ಮಾಹಿತಿ ನೀಡಿದ್ದಾರೆ.

ಸಿನಿಮಾ ಉಪೇಂದ್ರ ನೋಡಿ ಮೆಚ್ಚುಗೆ
"ಎಲ್ಲರೂ 'ಶ್!!!' ಸಿನಿಮಾ ನೋಡಿದ್ದಾರೆ. ಆದರೂ ಕೂಡ ಈಗ ಕನ್ನಡ ಸಿನಿಮಾಗಳು ಎಲ್ಲಾ ಕಡೆ ಸದ್ದು ಮಾಡುತ್ತಿವೆ. ಹಾಗಾಗಿ ಚಿತ್ರವನ್ನು ಧೈರ್ಯ ಮಾಡಿ ಹೊಸ ರೂಪದಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಉಪೇಂದ್ರ ಕೂಡ ಈಗಾಗಲೇ ಹೊಸ ವರ್ಷನ್ ಕೆಲಸಗಳನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಒಳ್ಳೆ ಸಮಯದಲ್ಲಿ ಸಿನಿಮಾ ತೆರೆಗೆ ತರುತ್ತೇವೆ" ಎಂದಿದ್ದಾರೆ.

ಕುಮಾರ್ ಗೋವಿಂದ್ ಲೆಕ್ಕಾಚಾರ ಏನು?
ರಿಯಲ್ ಸ್ಟಾರ್ ಉಪೇಂದ್ರ ಈಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಉಪ್ಪಿ ದಶಕಗಳ ಹಿಂದೆಯೇ ಬೇರೆ ಭಾಷೆಯ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದವರು. ಅವರ ಡೈರೆಕ್ಷನ್ ನೋಡಿ ಪರಭಾಷಾ ಫಿಲ್ಮ್ಸ್ ಮೇಕರ್ಸ್ ಬೆರಗಾಗಿದ್ದರು. ಸದ್ಯ 'ಕಬ್ಜ' ಹಾಗೂ 'UI' ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಲಿವೆ. ಎರಡೂ ಸಿನಿಮಾಗಳಿಂದ ಹೊರ ರಾಜ್ಯಗಳಲ್ಲಿ ಉಪ್ಪಿ ಕ್ರೇಜ್ ಹೆಚ್ಚಾಗೋದು ಗ್ಯಾರೆಂಟಿ. ಇದನ್ನು ಎನ್‌ಕ್ಯಾಶ್ ಮಾಡಿಕೊಂಡು ಉಪೇಂದ್ರ 3 ದಶಕಗಳ ಹಿಂದೆ ನಿರ್ದೇಶಿಸಿದ್ದ 'ಶ್!!!' ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರೀ ರಿಲೀಸ್ ಮಾಡುವ ಸುಳಿವು ಸಿಗುತ್ತಿದೆ.

ಒಂಟಿ ಮನೆ ಎಸ್ಟೇಟ್‌ನಲ್ಲಿ 'ಶ್!!!' ಥ್ರಿಲ್
ದಶಕಗಳ ಹಿಂದೆ 'ಶ್!!!' ಸಿನಿಮಾ ನೋಡಿದವರಿಗೆ ಸಕತ್ ಕಿಕ್ ಕೊಟ್ಟಿತ್ತು. ಬಹುತೇಕ ಹೊಸಬರು ಸೇರಿ ಮಾಡಿದ್ದ ಸಿನಿಮಾ ಸೈಪರ್ ಹಿಟ್ ಆಗಿತ್ತು. ಸಿನಿಮಾ ಶೂಟಿಂಗ್‌ಗಾಗಿ ಒಂಟಿ ಮನೆ ಎಸ್ಟೇಟ್‌ಗೆ ಹೋಗುವ ಚಿತ್ರತಂಡ. ಅಲ್ಲಿ ನಡೆಯುವ ನಡೆಯುವ ಚಿತ್ರವಿಚಿತ್ರ ಘಟನೆಗಳು, ನಿಧಿಗಾಗಿ ಹುಡುಕಾಟ, ಒಂಚೂರು ಕಾಮಿಡಿ, ಹಾರರ್ ಅಂಶಗಳು ಸೇರಿ ಸಿನಿಮಾ ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಟ್ಟಿತ್ತು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಭರ್ಜರಿ ಬ್ಯುಸಿನೆಸ್ ಮಾಡಿತ್ತು.