»   » ರಾಜಕೀಯಕ್ಕೆ ಧುಮುಕಿದ 'ಲಹರಿ ಆಡಿಯೋ ಸಂಸ್ಥೆ'ಯ ವೇಲು

ರಾಜಕೀಯಕ್ಕೆ ಧುಮುಕಿದ 'ಲಹರಿ ಆಡಿಯೋ ಸಂಸ್ಥೆ'ಯ ವೇಲು

Posted By:
Subscribe to Filmibeat Kannada

'ಲಹರಿ ಆಡಿಯೋ ಸಂಸ್ಥೆ'ಯ ಮಾಲೀಕ ಲಹರಿ ವೇಲು ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ಇಷ್ಟುದಿನ ಸಂಗೀತ ಜಗತ್ತಿನಲ್ಲಿ ಹಾಗೂ ಚಿತ್ರರಂಗದಲ್ಲಿ ಹೆಚ್ಚು ತೊಡಗಿಕೊಂಡಿದ್ದ ಲಹರಿ ವೇಲು ಅವರು ಬಿಜೆಪಿ ಪಕ್ಷವನ್ನ ಸೇರುತ್ತಿದ್ದಾರೆ.

ಈ ಬಗ್ಗೆ ಸ್ವತಃ ಲಹರಿ ವೇಲು ಅವರೇ ಅಧಿಕೃತಪಡಿಸಿದ್ದು, ಆಗಸ್ಟ್ 30 ರಂದು ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ವೇಲು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ.

Lahari Velu to enter politics

ಸುಮಾರು 36 ವರ್ಷಗಳಿಂದ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಪ್ರಕ್ರೀಯರಾಗಿದ್ದು, ಕನ್ನಡ, ತೆಲುಗು, ತಮಿಳು, ಹಾಗೂ ಹಿಂದಿ ಸೇರಿದಂತೆ ನೂರಾರು ಚಿತ್ರಗಳನ್ನ ಹಾಡುಗಳನ್ನ ಖರೀದಿಸಿದ್ದಾರೆ. ಆಲ್ಬಂಗಳನ್ನ ತಯಾರಿಸಿದ್ದಾರೆ.

ವೇಲು ಅವರು ಕೇವಲ ಆಡಿಯೋ ಹಕ್ಕು ಖರೀದಿಸುವುದು ಮಾತ್ರವಲ್ಲ, ಕೆಲವು ಸಿನಿಮಾಗಳಲ್ಲಿ ನಟನೆ ಕೂಡ ಮಾಡಿದ್ದಾರೆ. ಕನ್ನಡದ ಗೋಲಿಸೋಡಾ ಚಿತ್ರದಲ್ಲಿ ರಾಜಕಾರಣಿಯಾಗಿ, ಶಿವರಾಜ್ ಕುಮಾರ್ ಅಭಿನಯಿಸಿದ್ದ ಮಾಸ್ ಲೀಡರ್ ಚಿತ್ರದಲ್ಲಿ ಕೇಂದ್ರ ಮಂತ್ರಿಯಾಗಿ ಬಣ್ಣ ಹಚ್ಚಿದ್ದರು.

English summary
Lahari audio company director Velu (Lahari Velu) will join to BJP. On August 28, 2017 he confirmed that, he will join party on August 30 in the presence of Karnataka BJP president B.S.Yeddyurappa.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada