For Quick Alerts
  ALLOW NOTIFICATIONS  
  For Daily Alerts

  'ರಾಜ್ ಲೀಲಾ ವಿನೋದ' ಪುಸ್ತಕದಲ್ಲಿ ಇರುವ ಸ್ಫೋಟಕ ಮಾಹಿತಿ ಇದು.!

  By ಹರಾ
  |

  ಪತ್ರಕರ್ತ ರವಿ ಬೆಳಗೆರೆ ಬರೆದಿರುವ ವಿವಾದಾತ್ಮಕ ಪುಸ್ತಕ 'ರಾಜ್ ಲೀಲಾ ವಿನೋದ' ಅಧಿಕೃತವಾಗಿ ನಿನ್ನೆ (ಡಿಸೆಂಬರ್ 25) ಬಿಡುಗಡೆ ಆಗದೇ ಇದ್ದರೂ, ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ.

  ಮುಖಪುಟದಲ್ಲಿ ಡಾ.ರಾಜ್ ಕುಮಾರ್, ಲೀಲಾವತಿ ಮತ್ತು ಬಾಲಕ ವಿನೋದ್ ರಾಜ್ ಫೋಟೋ ಹೊತ್ತಿರುವ 'ರಾಜ್ ಲೀಲಾ ವಿನೋದ' ಪುಸ್ತಕದಲ್ಲಿ ಇರುವ ಸ್ಫೋಟಕ ಮಾಹಿತಿಯಾದರೂ ಏನು ಎಂಬ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.

  'ಸಂತ ತುಕಾರಾಂ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಘಟನೆಯೊಂದನ್ನ ಪತ್ರಕರ್ತ ರವಿ ಬೆಳಗೆರೆ ಬಳಿ ಹಿರಿಯ ನಟಿ ಲೀಲಾವತಿ ನೆನಪಿಸಿಕೊಂಡಿರುವುದು ಹೀಗೆ....

  ಅಫೇರ್ ವಿಷಯ 'ಅವರ' ಮನೆಯಲ್ಲಿ ಗೊತ್ತಾಯ್ತು!

  ಅಫೇರ್ ವಿಷಯ 'ಅವರ' ಮನೆಯಲ್ಲಿ ಗೊತ್ತಾಯ್ತು!

  'ಸಂತ ತುಕಾರಾಂ' ಸಿನಿಮಾದ ‍ಶೂಟಿಂಗ್ ಟೈಮ್ ನಲ್ಲಿ ನಮ್ಮ ಅಫೇರ್ ವಿಷಯ ಅವರ ಮನೆಯಲ್ಲಿ ಗೊತ್ತಾಯ್ತು. ಅದರಿಂದಾಗಿ ಇರುಸು ಮುರುಸುಗಳಾದವು. ಅವರಿಗಿನ್ನೂ ಮಕ್ಕಳಾಗಿರಲಿಲ್ಲ. ಅದೊಂದು ದೊಡ್ಡ ಇನ್ಸಿಡೆಂಟ್ ರವಿಯವರೇ.[ನನ್ನ ಸ್ಥಿತೀಲಿ ಬೇರೆ ಹೆಂಗಸಿದ್ದಿದ್ದರೆ ಎಷ್ಟು ರಾದ್ಧಾಂತ ಆಗ್ತಿತ್ತು?]

  ರೈಲಿನಲ್ಲಿ ಇಬ್ಬರ ಪ್ರಯಾಣ

  ರೈಲಿನಲ್ಲಿ ಇಬ್ಬರ ಪ್ರಯಾಣ

  ಅದು 'ಸಂತ ತುಕಾರಾಂ' ಶೂಟಿಂಗ್ ಸಮಯ. ಅದಕ್ಕೆ ಹೋಗಿದ್ದು ನಾವಿಬ್ರೇ. ರೈಲಿನಲ್ಲಿ ಪ್ರಯಾಣ. ನಾನು ತಿಂಡಿ-ಗಿಂಡಿ ಏನೂ ತಗೊಂಡು ಹೋಗಿರ್ಲಿಲ್ಲ. ಅವರ ಮನೇಲಿ ಬೇಕಾಧಂಗೆ ತಿಂಡಿ ಪ್ಯಾಕ್ ಮಾಡಿ ಕಳ್ಸಿದ್ರು. ರೈಲಿನಲ್ಲಿ ತಿಂದ್ವಿ.[ಲೀಲಾವತಿ ಆತ್ಮಕಥನ 'ರಾಜ್ ಲೀಲಾ ವಿನೋದ'ದಲ್ಲಿ ಅಂಥಾದ್ದೇನಿದೆ?]

  ಕಥೆ ಶುರುವಾಗಿದ್ದು ಇಲ್ಲಿಂದ...

  ಕಥೆ ಶುರುವಾಗಿದ್ದು ಇಲ್ಲಿಂದ...

  ''ನೋಡಿದ್ಯಾ, ಎಷ್ಟು ರುಚಿಯಾಗಿ ಮಾಡಿ ಕಳ್ಸಿದಾರೆ'' ಅಂದ್ರು. ಅದು ನಿಜಕ್ಕೂ ರುಚಿಯಾಗಿತ್ತು. ಚೆನ್ನಾಗಿ ತಿಂದ್ವಿ. ಆ ಹೊತ್ತಿಗೆ ನಾವು ಕೊಲ್ಹಾಪುರ ಸೇರಿಕೊಂಡ್ವಿ. ಅಲ್ಲಿ ಶುರುವಾಯ್ತು ನಮ್ಮ ಕಥೆ.

  ಒಂದೇ ರೂಮ್ ನಲ್ಲಿ ವಾಸ

  ಒಂದೇ ರೂಮ್ ನಲ್ಲಿ ವಾಸ

  ನನಗೂ-ಅವರಿಗೂ ಸ್ನೇಹವಿದೆ ಅಂತ ಅವರಿಗೆ ಗೊತ್ತು. ಹಾಗಾಗಿ ಇಬ್ರಿಗೂ ಸೇರಿಸಿ ಒಂದೇ ರೂಂ ಕೊಟ್ರು. ಮಹಾರಾಜರ ಪ್ಯಾಲೇಸ್ ಅದು.

  ಲಕ್ಷ್ಮಿ ಕಾಸು

  ಲಕ್ಷ್ಮಿ ಕಾಸು

  ''ನೋಡಿದೇನೇ...ಮಹಾರಾಜರು ಬಾಳಿ ಬದುಕಿದ ಜಾಗ. ಅದು ನಮಗೆ ಸಿಕ್ಕಿದೆ'' ಅಂದ್ರು. ಆಮೇಲೆ ಅವರೇನೇ ಹೊರಗಡೆ ಹೋಗಿ ಒಂದು ಲಕ್ಷ್ಮಿ ಕಾಸು ತಗೊಂಡು. ಅದನ್ನ ಎಲ್ಲಿ ತಗೊಂಡ್ರು ಅಂತ ಗೊತ್ತಿಲ್ಲ.

  ಮದುವೆಯ ಸಂಕೇತ ಅಲ್ವಾ?

  ಮದುವೆಯ ಸಂಕೇತ ಅಲ್ವಾ?

  ಅದು ಲಕ್ಷ್ಮಿಯದು ಒಂದು ಬಿಳ್ಳೆ. ಲಕ್ಷ್ಮಿ ಚಿತ್ರ ಇದೆ. ಅದನ್ನ ಒಂದು ದಾರಕ್ಕೆ ಪೋಣಿಸಿ, ಕೊಲ್ಹಾಪುರದ ಲಕ್ಷ್ಮಿ ದೇವರ ಮುಂದೆ ನನ್ನ ಕೊರಳಿಗೆ ಕಟ್ಟಿದರು. ಅದು ಮದುವೆಯ ಸಂಕೇತವೇ ಅಲ್ವಾ?

  ಮುದ್ದು ಮಾಡೋರು

  ಮುದ್ದು ಮಾಡೋರು

  ಅವರಿಗೆ ಮೀನು ಅಂದ್ರೆ ತುಂಬ ಇಷ್ಟ: ತರಿಸೋರು. ನಾನು ಮೀನು ಹೆಚ್ಚೋದನ್ನೇ ನೋಡ್ತಾ ನಿಲ್ಲೋರು. ''ಜುಟ್ಟು ಎಗರಿಸಿಕೊಂಡು ಚೆನ್ನಾಗಿ ಹೆಚ್ತೀಯ ಕಣೆ..'' ಅಂತ ಅಲ್ಲೇ ಮುದ್ದು ಮಾಡೋರು. ಅದು ನಮ್ಮ ಪಾಲಿಗೆ ಒಂಥರಾ ಮಧುಚಂದ್ರ ಅನ್ನೋ ಹಾಗಿತ್ತು. Enjoy ಮಾಡಿದ್ವಿ.

  ಕಲ್ಮಶ ಬೆರಕೆ ಆಯ್ತು

  ಕಲ್ಮಶ ಬೆರಕೆ ಆಯ್ತು

  ಅವರ ಪ್ರೀತಿಯಲ್ಲಿ ಕಲ್ಮಶ ಇರಲಿಲ್ಲ. ಕೆಲವು ಸಲ ಕಲ್ಪನೇಲಿ ಕವಿಗಳ ಥರಾ ಮಾತಾಡ್ತಿದ್ರು. ಯಾರೂ ಕೂಡ ಹುಟ್ಟೋವಾಗ್ಲೇ ಕಲ್ಮಶ ಇಟ್ಕೊಂಡು ಹುಟ್ಟೋದಿಲ್ಲ. ಬೆಳೀತಾ ಬೆಳೀತಾ ಅದು ಸೇರ್ಕೊಳ್ಳುತ್ತೆ. ಹಾಗೆ ಬೆರಕೆ ಆಯ್ತು ಅವರಲ್ಲಿ ಕಲ್ಮಶ.

  ಬದುಕಿನ ಅತ್ಯಂತ ಸಂತೋಷದ ಕಾಲ

  ಬದುಕಿನ ಅತ್ಯಂತ ಸಂತೋಷದ ಕಾಲ

  'ಸಂತ ತುಕಾರಾಂ' ಶೂಟಿಂಗ್ ಟೈಮ್ ಅನ್ನೋದು ನನ್ನ ಬದುಕಿನ ಅತ್ಯಂತ ಸಂತೋಷದ ಕಾಲ. ಇಬ್ರೂ ಒಟ್ಟಿಗೆ ಇದ್ವಿ. ಅದೊಂಥರಾ ಸಂತೋಷದ ಸಂಸಾರ. ಒಂದು ಪತ್ರದಲ್ಲಿ ದೊಡ್ಡೋರು ಅದನ್ನ ಬರ್ದಿದಾರೆ. ''ಕೊಲ್ಹಾಪುರದಲ್ಲಿ ನೀನು ಮಾಡಿದ ಮೀನಿನ ಘಮ ಇನ್ನೂ ಹಾಗೇ ಇದೆ. ಮೊನ್ನೆ ಕೊಲ್ಹಾಪುರಕ್ಕೆ ಮತ್ತೆ ಹೋದೆ. ಅದೇ ಜಾಗಕ್ಕೆ ಹೋದೆ. ತುಂಬ ಸಂಕಟ ಆಯ್ತು ಕಣೇ'' ಅಂತ ಬರೆದಿದ್ದಾರೆ.

  ('ರಾಜ್ ಲೀಲಾ ವಿನೋದ' ಪುಸ್ತಕದಲ್ಲಿ ಇರುವ ಯಥಾವತ್ ಸಾಲುಗಳಿವು)

  English summary
  Kannada Actress Leelavathi's Biography 'Raj Leela Vinoda' is available in Stores. Here is a chapter from the book which is written by Ravi Belagere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X