For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟ ದಿಲೀಪ್ ಕುಮಾರ್ ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು

  By Bharath Kumar
  |

  ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅವರು ಅನಾರೋಗ್ಯದ ಹಿನ್ನೆಲೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 94 ವರ್ಷದ ದಿಲೀಪ್ ಕುಮಾರ್ ಕೆಮ್ಮು ಹಾಗೂ ಜ್ವರದಿಂದ ಬಳುತ್ತಿದ್ದರು. ಹೀಗಾಗಿ ಇಂದು ಬೆಳಿಗ್ಗೆ (ಡಿಸೆಂಬರ್ 7) ಮುಂಬೈನ ಲೀಲಾವತಿ ಆಸ್ಪತ್ರೆಗೆ ಅವರನ್ನ ದಾಖಲಿಸಲಾಗಿದೆ.

  ದಿಲೀಪ್ ಕುಮಾರ್ ಅವರ ಬಲಗಾಲಿನಲ್ಲಿ ಊತ ಕಂಡು ಬಂದಿದ್ದು, ಇದರ ಜೊತೆಗೆ ಜ್ವರ ಕೂಡ ಉಲ್ಬಿಣಿಸಿತ್ತು. ಹೀಗಾಗಿ ದಿಲೀಪ್ ಕುಮಾರ್ ಅವರ ಪತ್ನಿ ಸಾಯಿರಾ ಬಾನು ಅವರು ಆಸ್ಪತ್ರೆಗೆ ಸೇರಿಸಿದ್ದಾರೆ.

  ತದ ನಂತರ ಖಾಸಗಿ ಪ್ರತಿಕೆಗೆ ಪ್ರತಿಕ್ರಿಯೆ ನೀಡಿದ ಪತ್ನಿ ಸಾಯಿರಾ ಬಾನು ಅವರು, ''ದಿಲೀಪ್ ಕುಮಾರ್ ಅವರಿಗೆ ಶೀತ ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಯಾವುದೇ ಅಪಾಯವಿಲ್ಲ. ಡಿಸೆಂಬರ್ 11 ರಂದು ದಿಲೀಪ್ ಅವರ ಹುಟ್ಟುಹಬ್ಬವಿದೆ. ಅಷ್ಟರೊಳಗೆ ಅವರನ್ನ ಮನೆಗೆ ಕರೆದುಕೊಂಡು ಹೋಗುತ್ತೇವೆ ಎಂದಿದ್ದಾರೆ.

  Legendary Actor Dilip Kumar Hospitalised Suffering From Fever

  ಬಾಲಿವುಡ್ ನಲ್ಲಿ 'ಟ್ರಾಜಿಡಿ ಕಿಂಗ್' ಅಂತಾನೇ ಕರೆಸಿಕೊಳ್ಳುವ ದಿಲೀಪ್ ಕುಮಾರ್ 1998 ರಲ್ಲಿ ತೆರೆಕಂಡ 'ಕಿಲಾ' ಚಿತ್ರದಲ್ಲಿ ಕೊನೆಯದಾಗಿ ಅಭಿನಯಿಸಿದ್ದರು. ಇನ್ನೂ 'ದೇವದಾಸ್', 'ನಯಾದಾರ್', 'ಗಂಗಾ ಜಮುನಾ', 'ಮಧುಮತಿ', 'ಮೊಘಲ್ ಎ ಅಜ‍ಮ್', ಕೋಹಿನರ್, ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ದಿಲೀಪ್ ಕುಮಾರ್ ಅವರ ಅತ್ಯುತ್ತಮ ನಟನೆಗೆ 1994 ರಲ್ಲಿ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ' ಹಾಗೂ 2015 ರಲ್ಲಿ 'ಪದ್ಮ ವಿಭೂಷಣ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

  English summary
  Bollywood Legendary actor Dilip Kumar was admitted to Mumbai's Lilavati Hospital after complaining of fever and swelling in the leg. His wife Saira Bano said the doctors were examining him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X