For Quick Alerts
  ALLOW NOTIFICATIONS  
  For Daily Alerts

  ನಿನ್ನೆ 'ಪಿವಿಆರ್ ಮಲ್ಟಿಪ್ಲೆಕ್ಸ್'ನಲ್ಲಿ ಆಗಿದ್ದು.! ನೀವೇನಂತೀರಿ.?

  By ಫಿಲ್ಮಿಬೀಟ್ ಕನ್ನಡ ಓದುಗರು
  |

  'ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ....'
  'ಒಂದೇ ಒಂದು ಆಸೆ ನಂದು, ಸಾವಿರ ಕೋಟಿ ಬೇಕು...'

  - ಈ ಹಾಡುಗಳನ್ನ ಕೇಳಿ ನಮಗೆ ಆಶ್ಚರ್ಯ. ನಾವು ಬಂದಿರುವ ಜಾಗ ಯಾವುದು ಅಂತ ನಮಗೇ ಒಂದು ಕ್ಷಣ ಕಕ್ಕಾಬಿಕ್ಕಿ.!

  ಯಾಕಂದ್ರೆ, ನಾವು ಹೋಗಿದ್ದದ್ದು ಬೆಂಗಳೂರಿನ ಮಲ್ಲೇಶ್ವರಂ ಸಮೀಪ ಇರುವ ಒರಾಯನ್ ಮಾಲ್ ನ 'ಪಿವಿಆರ್ ಮಲ್ಟಿಪ್ಲೆಕ್ಸ್'ಗೆ.!

  ಇದುವರೆಗೂ ಸಾಕಷ್ಟು ಬಾರಿ ನಾವು ಅಲ್ಲಿಗೆ ಹೋಗಿದ್ದೀವಿ. ಹೋದಾಗೆಲ್ಲಾ, ಹಿಂದಿ ಅಥವಾ ತೆಲುಗು, ಬಿಟ್ಟರೆ ಅರ್ಥವಾಗದ ಇಂಗ್ಲೀಷ್ ಸಾಲುಗಳ ಹಾಡುಗಳದ್ದೇ ಕಾರುಬಾರಾಗಿದ್ದ 'ಪಿವಿಆರ್ ಮಲ್ಟಿಪ್ಲೆಕ್ಸ್'ನಲ್ಲಿ ಕನ್ನಡ ಹಾಡು ಬರ್ತಿದ್ಯಲ್ಲಾ ಅಂತ ನಮಗೆ ಆಶ್ಚರ್ಯ ಆಯ್ತು. ಅಟ್ ದಿ ಸೇಮ್ ಟೈಮ್ ಖುಷಿ ಕೂಡ ಆಯ್ತು. [ತಪ್ಪೊಪ್ಪಿಕೊಂಡ ಪಿ.ವಿ.ಆರ್.! ದಂಡ ಕಟ್ಟಲು ಮಲ್ಟಿಪ್ಲೆಕ್ಸ್ ಸಿದ್ಧ.!]

  ಕನ್ನಡ ಡಿಂಡಿಮ ಇಲ್ಲದ ಒರಾಯನ್ ಮಾಲ್ ನಲ್ಲಿ ಕನ್ನಡ ಹಾಡುಗಳು ಬರ್ತಿದೆ ಅಂದ್ರೆ ಕನ್ನಡ ಚಿತ್ರಗಳಿಗೂ ಪ್ರಾಮುಖ್ಯತೆ ಸಿಕ್ಕಿದ ಹಾಗೆ ಲೆಕ್ಕ ಅಂತ ಟಿಕೆಟ್ ಕೌಂಟರ್ ಹತ್ರ ಹೋದ್ವಿ. ಅಲ್ಲಿಗೆ ಹೋದ ಮೇಲೆ ಗೊತ್ತಾಗಿದ್ದು, ಇದೆಲ್ಲಾ ಜಸ್ಟ್ ಮೂಗಿಗೆ ತುಪ್ಪ ಸವರುವ ಕೆಲಸ ಅಂತ.

  ಕನ್ನಡ ಹಾಡುಗಳನ್ನ ಪ್ಲೇ ಮಾಡುತ್ತಿರುವ ಒರಾಯನ್ ಮಾಲ್ 'ಪಿವಿಆರ್ ಮಲ್ಟಿಪ್ಲೆಕ್ಸ್'ನಲ್ಲಿ ಕನ್ನಡ ಚಿತ್ರಗಳು ಬೋರ್ಡ್ ಗೆ ಇರಲಿಲ್ಲ.!

  ಪ್ರತಿ ದಿನ ಇಪ್ಪತ್ತಕ್ಕೂ ಹೆಚ್ಚು ಶೋ ನಡೆಸುವ 'ಪಿವಿಆರ್ ಮಲ್ಟಿಪ್ಲೆಕ್ಸ್' ನಲ್ಲಿ ಕನ್ನಡ ಚಿತ್ರಗಳಿಗೆ ಲಭ್ಯವಾಗಿದ್ದು ಕೇವಲ ಆರು ಶೋ ಮಾತ್ರ.! ಅರ್ಧಕ್ಕೆ ಅರ್ಧವೂ ಇಲ್ಲ! [ಮಲ್ಟಿಪ್ಲೆಕ್ಸ್ ಗಳಲ್ಲಿನ್ನು ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ!]

  ಯುಗಾದಿ ಹಬ್ಬದ ದಿನ ಬಿಡುಗಡೆ ಆದ 'ಜೈ ಮಾರುತಿ 800' ಚಿತ್ರಕ್ಕೆ ಎರಡು ಶೋ, 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ', 'ಕಿರಗೂರಿನ ಗಯ್ಯಾಳಿಗಳು', 'ಶಿವಲಿಂಗ', 'ರೆಡ್' ಹಾಗೂ 'ಜೆಸ್ಸಿ' ಚಿತ್ರಗಳಿಗೆ ತಲಾ ಒಂದು ಶೋ ಮಾತ್ರ ಇತ್ತು. [ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ನಾಚಿಕೆ ಆಗಬೇಕು..ಥೂ.!]

  ಆದ್ರೆ, ಅದೇ ಹಿಂದಿ, ಇಂಗ್ಲೀಷ್ ಹಾಗೂ ತಮಿಳು ಚಿತ್ರಗಳಿಗೆ ಡಬ್ಕಿ ಡಬಲ್ ಶೋಗಳಿವೆ. ಕನ್ನಡ ಸಿನಿಮಾ ಇದ್ಯೇನೋ ಅಂತ ನೋಡಲು ಹೋದ ನಮಗೆ, ಶೋ ಟೈಮ್ ನೋಡಿ ಸಿಟ್ಟು ಬಂತು.! ಹೀಗೆ ಆದರೆ ಕನ್ನಡ ಚಿತ್ರೋದ್ಯಮ ಉದ್ಧಾರ ಆದ ಹಾಗೆ.! ಕನ್ನಡ ಸಿನಿ ಪ್ರಿಯರೇ ಇದಕ್ಕೆ ನೀವೇನಂತೀರಿ..?

  English summary
  Even after Good collection, less showtimes are given for Kannada Movies when compared to other language movies in Bengaluru Mutiplexes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X