For Quick Alerts
ALLOW NOTIFICATIONS  
For Daily Alerts

ಕಲಾವಿದರು ಓದಲೇಬೇಕಾದ ಓದುಗರ ಕಾಮೆಂಟುಗಳು

By ಫಿಲ್ಮಿಬೀಟ್ ಡೆಸ್ಕ್
|

ಇದ್ದದ್ದನ್ನು ಇದ್ದಂತೆ ಎದ್ದು ಬಂದು ಎದೆಗೆ ಒದೀಬ್ಯಾಡ್ರಿ ಎನ್ನುವುದು ಗಾದೆ ಮಾತು. ಇದು ಹಲವಾರು ಕಲಾವಿದರಿಗೆ ರುಚಿಸುವುದಿಲ್ಲ. ಸಿನೆಮಾನೇ ಒಂದು ಭ್ರಮಾ ಲೋಕ, ಅದರಲ್ಲಿ ದುಡಿಯುತ್ತಲೇ ಕೆಲ ಕಲಾವಿದರು ತಮ್ಮ ಸುತ್ತಲೇ ಭ್ರಮಾಲೋಕ ಸೃಷ್ಟಿಸಿಕೊಂಡಿರುತ್ತಾರೆ.

ಕೆಲ ಕಲಾವಿದರು ಹೇಳುವ ಮಾತನ್ನು ನೀವು ಕೇಳಿರಬಹುದು. "ನಾನು ಪೇಪರ್ ಓದುವುದೇ ಇಲ್ಲ", "ನಾನು ವಿಮರ್ಶೆಗಳತ್ತ ಕಣ್ಣು ಕೂಡ ಹಾಕುವುದಿಲ್ಲ", "ನಾನು ಗಾಸಿಪ್ಪುಗಳಿಗೆ, ಸಲ್ಲದ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ"... ಇತ್ಯಾದಿ ಇತ್ಯಾದಿ. ಪ್ರೇಕ್ಷಕರನ್ನು ದೇವರೆಂದು ತಿಳಿದವರು, ಓದುಗರು ಕೂಡ ಪ್ರೇಕ್ಷಕರೇ ಎಂಬುದನ್ನು ತಿಳಿಯಬೇಕು.

ಮೇಲೆ ಹೇಳಿದ ಗಾದೆ ಮಾತಿನಂತೆ, ನಮ್ಮ ಓದುಗರು ಕೂಡ ತಾವು ಪ್ರೀತಿಸುವ ಕಲಾವಿದರಿಗೆ ಪ್ರೀತಿಯಿಂದಲೇ ಕಿವಿ ಹಿಂಡಿದ್ದಾರೆ. ಓದುಗರು ತಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎಂಬುದನ್ನು ಕಲಾವಿದರೂ ಓದಿಕೊಳ್ಳಲಿ, ಬೇಕಿದ್ದರೆ ತಮ್ಮನ್ನು ತಾವು ತಿದ್ದಿಕೊಳ್ಳಲಿ. ತಮಗೆ ತಿಳಿದಂತೆ ಹೇಳುವ ಅಧಿಕಾರ ಕಲಾವಿದರಿಗೆ ಹೇಗಿದೆಯೋ, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಹಕ್ಕು ಓದುಗರಿಗೂ ಇದೆ. ಈ ಪತ್ರಗಳನ್ನು ಬರೆದ ಎಲ್ಲ ಓದುಗರಿಗೆ ಅನಂತ ಧನ್ಯವಾದಗಳು. ಹೀಗೆಯೇ ಪ್ರತಿಕ್ರಿಯಿಸುತ್ತಿರಿ.

ಒಳಿತೆಗೆ ಕೆಡುಕಿಗೆ ನಾವೇ ಕಾರಣರು

ಒಳಿತೆಗೆ ಕೆಡುಕಿಗೆ ನಾವೇ ಕಾರಣರು

ಆಕಸ್ಮಿಕವಾಗಿ ನಡೆದ ಘಟನೆಗಳಿಗೆಲ್ಲಾ ಮಾಟ ಮಂತ್ರ ಕಾರಣ ಎಂದುಕೊಳ್ಳುವ ಇಂತಹ ಮೂರ್ಖ ಶಿಖಾಮಣಿಗಳಿಂದಲೇ ಸಮಾಜದಲ್ಲಿ ಅದರ ಲಾಭ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ತಾನೇನಾದರೂ ಬೇರೆಯವರಿಗೆ ಕೆಡುಕು ಮಾಡಿದ ಅಥವಾ ಕೆಡುಕು ಬಯಸಿದ ಸಂದರ್ಭದಲ್ಲಿಯೇ, ಬೇರೆಯವರು ತನಗೆ ಕೆಡುಕು ಮಾಡುವರೆಂಬ ಅಳುಕು ಕಾಡುತ್ತದೆ. ನಾವೆಂದೂ ಒಂದು ವಿಷಯವನ್ನು ಮರೆಯಬಾರದು; ನಮಗೆ ಒಳಿತಾಗಲೀ, ಕೆಡುಕಾಗಲೀ, ಅದರ ಕಾರಣಕರ್ತರು ನಾವೇ ಆಗಿರುತ್ತೇವೆ. ಸುಖಾಸುಮ್ಮನೆ ಎಲ್ಲಾ ಅನಿಷ್ಟಗಳಿಗೂ ಶನೀಶ್ವರನೇ ಕಾರಣ ಅನ್ನುವುದರಲ್ಲಿ ಅರ್ಥವಿಲ್ಲ.

ಸುನೀಲ್ ಜಿ.

ಸ್ಟಾರ್ ವಾರ್ ನಡೆಸುವುದು ತಪ್ಪೇನಿಲ್ಲ

ಸ್ಟಾರ್ ವಾರ್ ನಡೆಸುವುದು ತಪ್ಪೇನಿಲ್ಲ

ಅಭಿಮಾನಿಗಳು ಅಂತರ್ಜಾಲಗಳಲ್ಲಿ ಸ್ಟಾರ್ ವಾರ್ ನಡೆಸುವುದು ತಪ್ಪೇನಿಲ್ಲ. ಕಾರಣ ಸ್ಟಾರ್ಗಳ ನಡುವಿನ ಸ್ನೇಹ ಸಂಬಂಧ ಹಾಗಿವೆ. ರಣವಿಕ್ರಮ ಹಾಗೂ ರನ್ನ ಚಿತ್ರಗಳು ಏಕಕಾಲಕ್ಕೆ ಬಿಡುಗಡೆ ಆಗಬಹುದಾಗಿತ್ತು. ಆದರೆ ರನ್ನ ಚಿತ್ರ ತಂಡ ಹಾಗೇ ಮಾಡದೇ ರನ್ನ ಚಿತ್ರವನ್ನು ಮುಂದೂಡಿತು. ಆದರೆ ಈಗ ವಜ್ರಕಾಯ ಚಿತ್ರ ತಂಡ, ರನ್ನ ಚಿತ್ರ ಬಿಡುಗಡೆಯ ಕೆಲವೇ ದಿನಗಳಲ್ಲಿ ತಮ್ಮ ಚಿತ್ರವನ್ನು ಬಿಡುಗಡೆ ಗೊಳಿಸುವುದು ಎಷ್ಟರಮಟ್ಟಿಗೆ ಸರಿ?

ದರ್ಶನ್ ವೈಎಲ್

ರಮ್ಯಾಗೆ ಕಾಮನ್ ಮ್ಯಾನ್ ಬಗ್ಗೆ ಏನು ಗೊತ್ತಿದೆ?

ರಮ್ಯಾಗೆ ಕಾಮನ್ ಮ್ಯಾನ್ ಬಗ್ಗೆ ಏನು ಗೊತ್ತಿದೆ?

ನಿನ್ಗೆ (ರಮ್ಯಾ) ಏನ್ ಗೊತ್ತಿದೆ ಕಾಮನ್ ಮ್ಯಾನ್ ಬಗ್ಗೆ? ಗೊತ್ತಿದ್ರೆ ಈ ತರಾ ಮಾತು ಆಡ್ತಾ ಇರ್ಲಿಲ್ಲ.. ಉಪಯೋಗವಿಲ್ಲದ ಆಧಾರ್ ಮಾಡಿ ಜನರ ಗೋಳು ಹೊಇಕೊಂಡ ಯುಪಿಎಗೂ ವಿವಿಧ ಯೋಜನೆಗಳ ಮೂಲಕ ಕಡು ಬಡವರಿಗೂ ಬ್ಯಾಂಕ್ ಪರಿಚಯಿಸಿ ಹಣ ಕೂಡಿ ಇಡುವ ಹಾಗೆ ಮಾಡಿದ ಮೋದಿ ಸರಕಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ... ಮೂವಿಗೂ ಮನುಷ್ಯರ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ. ನೀವು ರಾಹುಲ್ ಗಾಂಧಿಯ ಸ್ತ್ರೀರೂಪ.

ಚೇತನ್ ಶೆಟ್ಟಿ

ಶಿವಣ್ಣಗೆ ಉ.ಕ. ಕಲಾವಿದರ ಬಗ್ಗೆ ಗೊತ್ತಿಲ್ಲವೆ?

ಶಿವಣ್ಣಗೆ ಉ.ಕ. ಕಲಾವಿದರ ಬಗ್ಗೆ ಗೊತ್ತಿಲ್ಲವೆ?

ಕನ್ನಡ ಚಿತ್ರರಂಗದ ಮನೆಯಲ್ಲಿ ಹುಟ್ಟಿ, ಕಳೆದ 29 ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಶಿವಣ್ಣನವರಿಗೆ ಉತ್ತರ ಕರ್ನಾಟಕದ ಕಲಾವಿದರು ಮತ್ತು ನಿರ್ಮಾಪಕರ ಸಮಸ್ಯೆಗಳ ಬಗ್ಗೆ ತಿಳಿದಿಲ್ಲ ಎಂದರೆ ಆಶ್ಚರ್ಯವಾಗುತ್ತದೆ.

ಕುಮಾರ್

ಉಪ್ಪಿಯನ್ನು ಆತನ ಪಾಲಿಗೆ ಬಿಟ್ಟುಬಿಡಿ

ಉಪ್ಪಿಯನ್ನು ಆತನ ಪಾಲಿಗೆ ಬಿಟ್ಟುಬಿಡಿ

ಏಳುಬೀಳುಗಳು ಎಲ್ಲರ ಜೀವನದ ಅವಿಭಾಜ್ಯ ಅಂಗಗಳು. ಉಪೇಂದ್ರನ ಕಥೆಯೂ ಇದಕ್ಕೆ ಹೊರತಲ್ಲ. ಆತನ ಪಾಡಿಗೆ ಆತನನ್ನು ಬಿಡಿ. ಸುಮ್ಮಸುಮ್ಮನೇ ಆತನ ಹಿಂದೆ ಬಿದ್ದು ಅವರ ಜೀವನವನ್ನೇಕೆ ನರಕಕ್ಕೆ ತಳ್ಳುವಿರಿ?

ಸತ್ಯವಾದಿ

ಬಿಡಿಸಿ ಹೇಳುವ ತಾಕತ್ತಿಲ್ಲದಿದ್ದರೆ...

ಬಿಡಿಸಿ ಹೇಳುವ ತಾಕತ್ತಿಲ್ಲದಿದ್ದರೆ...

ಬಿಡಿಸಿ ಹೇಳುವುದಕ್ಕೆ ತಾಕತ್ತು ಇಲ್ಲ ಅಂದ್ರೆ ಸುಮ್ಮನೆ ಮನೆಯಲ್ಲಿ ಇರಬೇಕು. ಅದು ಬಿಟ್ಟು ಈ ತರಹದ ಒಗಟು ಯಾಕೆ ಮಾಡಬೇಕು? ರೆಬೆಲ್ ಚಲನಚಿತ್ರ ನಾನು ನೋಡಿದೆ. ದಯವಿಟ್ಟು ನೀವೇ ತಿಳಿಸಿ ಆದಿತ್ಯ, ಚಲನಚಿತ್ರದಲ್ಲಿ ಏನು ಚೆನ್ನಾಗಿದೆ ಅಂತ? ಮೊದಲು ಒಳ್ಳೆ ಸವಿ ರುಚಿಯಾದ "ಮುಗಾರುಮಳೆ" ಅಥವಾ "ಮಿಲನ" ದಂತಹ ಚಲನಚಿತ್ರವನ್ನು ಮಾಡಿ ಜನರು ಏಕೆ ನೋಡುವುದಿಲ್ಲ?

ರಂಗ

ಬಡವರ ತೆರಿಗೆ ಹಣದಿಂದ ಐಷಾರಾಮಿ ಸಮಾಧಿ

ಬಡವರ ತೆರಿಗೆ ಹಣದಿಂದ ಐಷಾರಾಮಿ ಸಮಾಧಿ

ನಾನೊಬ್ಬ ವಿಷ್ಣು ಅಭಿಮಾನಿ. ಕನ್ನಡಕ್ಕೆ ನೂರಾರು ಕಲಾವಿದರು ಸೇವೆ ಸಲ್ಲಿಸಿದ್ದಾರೆ. ಕುವೆಂಪು, ಕಾರಂತ್, ಹೊನಪ್ಪ ಭಾಗವತರ್, ಪಂತಲು, ಪುಟ್ಟಣ್ಣ ಕಣಗಾಲ್, ಲೋಕೇಶ್, ಶಂಕರ್ನಾಗ್ ಇನ್ನೂ ನೂರಾರು ಕಲಾವಿದರಿದ್ದಾರೆ. ಅವರಾರಿಗೂ ಇಲ್ಲದ್ದು ವಿಷ್ಣುಗೆ ಏಕೆ? ಡಾ. ರಾಜ್ ರನ್ನು ಬಿಟ್ಟು ಬೇರಾರಿಗೂ ಸರ್ಕಾರ ಸ್ಮಾರಕ ನಿರ್ಮಿಸಬಾರದು. ಹಾಗೆ ಮಾಡಿದರೆ ಅದು ಬೇರೆಯವರಿಗೆ ಮಾಡುವ ಅವಮಾನ. ವಿಷ್ಣು ಜೀವಿತ ಅವಧಿಯಲ್ಲಿ ಸಾಕಷ್ಟು ದುಡಿದಿದ್ದಾರೆ. ಅವರ ಬಂಧುಗಳು ಈಕೆಲಸವನ್ನು ಕೈಗೆತ್ತಿಕೊಳ್ಳಲಿ ಬೇಕಿದ್ದರೆ. ಅಂಬರೀಶ್ ಕೂಡ ಸಹಾಯ ಮಾಡಬಹುದು. ಸರ್ಕಾರದ ಹಿಂದೇಕೆ ಬಿದ್ದಿದ್ದೀರಿ? ವೆನ್ ಲಿವಿಂಗ್, in movies the heros talk so much about the pro poor. after death they want the same poor's tax paid money for ಐಷಾರಾಮಿ sammadhi construction.

ವೆಂಕಟೇಶ್ ಕೆ

English summary
Letter to the editor by Kannada movie lovers. Readers have every right to say what they feel about Kannada movies or film artists. The actors and actresses should take their time to know what the spectators think about them.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more