For Quick Alerts
  ALLOW NOTIFICATIONS  
  For Daily Alerts

  ತಪ್ಪು ಮಾಡಿದ್ದೇನೆ, ಆದರೆ ಪರವಾಗಿಲ್ಲ: ಶಿಲ್ಪಾ ಶೆಟ್ಟಿ

  |

  ನಟಿ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪೋಸ್ಟ್ ಹಲವು ಅನಮಾನುಗಳನ್ನು ಎಬ್ಬಿಸಿದೆ.

  ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಈ ಸಂದರ್ಭದಲ್ಲಿ ನಟಿ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ''ತಪ್ಪೊಂದನ್ನು ಮಾಡಿದ್ದೇನೆ ಆದರೆ ಪರವಾಗಿಲ್ಲ'' ಎಂದು ಬರೆದುಕೊಂಡಿದ್ದಾರೆ.

  ಸೋಫಿಯಾ ಲಾರೆನ್‌ ಬರೆದಿರುವ 'ಜೀವನದಲ್ಲಿ ನಾವು ತೆರೆಬೇಕಾಗಿರುವುದಕ್ಕೆ ಕಂತುಗಳೇ ತಪ್ಪಗಳು' ಎಂಬ ಸಾಲುಗಳುಳ್ಳ ಪುಸ್ತಕದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಶಿಲ್ಪಾ ಶೆಟ್ಟಿ. ಅದರ ಜೊತೆಗೆ 'ತಪ್ಪು ಮಾಡಿದ್ದೇನೆ ಆದರೆ ಪರವಾಗಿಲ್ಲ'' ಎಂದು ಸಹ ಬರೆದಿದ್ದಾರೆ.

  ಶಿಲ್ಪಾ ಹಂಚಿಕೊಂಡಿರುವ ಪುಸ್ತಕದ ಹಾಳೆಯ ಚಿತ್ರದಲ್ಲಿ ಜೀವನದಲ್ಲಿ ಮಾಡುವ ತಪ್ಪುಗಳ ಬಗ್ಗೆ ಸಾಲುಗಳಿವೆ. 'ತಪ್ಪುಗಳನ್ನು ಮಾಡಬೇಕು. ತಪ್ಪುಗಳಿಲ್ಲದೇ ಹೋದರೆ ಜೀವನ ಆಸಕ್ತಿದಾಯಕವಾಗಿರುವುದಿಲ್ಲ. ತಪ್ಪು ಮಾಡಬೇಕಿರುವುದು ತಪ್ಪು ಮಾಡಬೇಕೆಂಬ ಕಾರಣಕ್ಕೆ ಅಲ್ಲ ಬದಲಿಗೆ ಅವುಗಳಿಂದ ಕಲಿಯಬೇಕು ಎಂಬ ಕಾರಣಕ್ಕೆ'' ಎಂದು ಬರೆದಿದ್ದಿದೆ.

  ಆದರೆ ಶಿಲ್ಪಾ ಶೆಟ್ಟಿ ತಾವು ತಪ್ಪು ಮಾಡಿರುವುದಾಗಿ ಏಕೆ ಬರೆದುಕೊಂಡಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ರಾಜ್ ಕುಂದ್ರಾ ಉದ್ದೇಶಿಸಿ ತಾವು ತಪ್ಪು ಮಾಡಿದ್ದಾಗಿ ಹೇಳಿದ್ದಾರೆಯೇ ಅಥವಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಭಾಗಿಯಾಗಿ ತಪ್ಪು ಮಾಡಿದ್ದಾಗಿ ಹೇಳುತ್ತಿದ್ದಾರೆಯೇ ಅನುಮಾನ ಮೂಡಿಸಿದೆ.

  ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಜುಲೈ 19 ರಂದು ಬಂಧಿಸಲಾಗಿದೆ. ಜುಲೈ 27ರವರೆಗೂ ಪೊಲೀಸ್ ಕಸ್ಟಡಿಯಲ್ಲಿದ್ದ ರಾಜ್ ಕುಂದ್ರಾರನ್ನು ಬಳಿಕ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಇನ್ನು ಈ ಕೇಸ್‌ಗೆ ಸಂಬಂಧಿಸಿದಂತೆ ನಟಿ ಶೆರ್ಲಿನ್ ಚೋಪ್ರಾ, ಗೆಹನಾ ವಸಿಷ್ಠ್ ಸೇರಿದಂತೆ ಮತ್ತೆ ಕೆಲವು ನಟಿಯ ಹೆಸರು ಕೇಳಿಬರುತ್ತಿದೆ. ಶಿಲ್ಪಾ ಶೆಟ್ಟಿಗೆ ಈ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಲಾಗಿಲ್ಲ ಎಂದು ಪ್ರಕರಣದ ಆರಂಭದ ಸಮಯದಲ್ಲಿ ಮುಂಬೈ ಪೊಲೀಸರು ಹೇಳಿದ್ದರು.

  ರಾಜ್ ಕುಂದ್ರಾ ಬಂಧನದ ಬಳಿಕ ಮೌನಕ್ಕೆ ಶರಣಾಗಿದ್ದ ಶಿಲ್ಪಾ ಶೆಟ್ಟಿ ಇತ್ತೀಚೆಗಷ್ಟೆ ಕೆಲಸಕ್ಕೆ ಮರಳಿದ್ದಾರೆ. ಸೂಪರ್ ಡಾನ್ಸರ್ 4 ಶೋನ ಜಡ್ಜ್ ಆಗಿರುವ ಶಿಲ್ಪಾ ಶೆಟ್ಟಿ ಸೆಟ್‌ಗೆ ಮರಳಿದ್ದು ಅವರು ಜಡ್ಜ್ ಮಾಡಿರುವ ಶೋ ಪ್ರಸಾರವೂ ಆಗಿದೆ.

  English summary
  'Made a mistake but its ok' Shilpa Shetty shared a cryptic message on Instagram. Shilpa's husband Raj Kundra arrested in indecent video case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X