For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಕ್ವಿನ್ ರಮ್ಯಾ ಸೀರೆ ಮ್ಯಾಜಿಕ್ ಹಿಂದಿನ ಕಥೆ

  By ಉದಯರವಿ
  |

  ಮಂಡ್ಯ ಕ್ವೀನ್ ರಮ್ಯಾ ಇದೀಗ ಭರ್ಜರಿ ಪ್ರಚಾರ ಮಾಡುತ್ತಾ ಕಾಟನ್ ಸೀರೆಯಲ್ಲಿ ಎಲ್ಲರ ಗಮನಸೆಳೆಯುತ್ತಿದ್ದಾರೆ. ಸೀರೆಯಲ್ಲಿ ಅವರನ್ನು ಕಂಡ ಮಂಡ್ಯ ಜನತೆ ಕೈಮುಗಿಯುತ್ತಿದ್ದಾರೆ. ಈ ಬಾರಿಯೂ ಅವರ ಕೈಹಿಡಿಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

  ಎಲ್ಲ ಮಹಿಳೆಯರೂ ಒಂದಲ್ಲಾ ಒಂದು ದಿನ ಸೀರೆ ಉಡಲೇಬೇಕು. ಅದು ಗಂಡ ಕೊಡಿಸಿದ್ದೋ, ತಂದೆ ಕೊಡಿಸಿದ್ದೋ ಅಥವಾ ಅವರೇ ತೆಗೊಂಡಿದ್ದೋ ಒಟ್ಟಿನಲ್ಲಿ ಚೆಲುವೆಯ ಅಂದದ ಮೈಗೆ ಸೀರೆಯೇ ಭೂಷಣ, ಬಳುಕುವಾ ಲತೆಗೆ ಹೆಣ್ಣಿನಾ ಮುಡಿಗೆ ಹೂವೇ ಭೂಷಣ...

  ಇರಲಿ ಸೀರೆ ಬಗ್ಗೆ ಬರೆಯುತ್ತಾ ಮಾತು ಇನ್ನೆಲ್ಲಿಗೋ ಹೋಗುತ್ತಿದೆ. ಇತ್ತೀಚೆಗೆ ರಮ್ಯಾ ಅವರನ್ನು ಖಾಸಗಿ ಟಿವಿ ವಾಹಿನಿಯೊಂದು ಸಂದರ್ಶಿಸಿದಾಗ ಅವರಿಗೆ ಎದುರಾದ ಪ್ರಮುಖ ಪ್ರಶ್ನೆ ಸೀರೆಯದ್ದೇ ಆಗಿತ್ತು. [ರಮ್ಯಾ ಸಾಧನೆಗಳ ವಿಡಿಯೋ ಬಹಿರಂಗ]

  ಇದಕ್ಕೆಲ್ಲಾ ತಯಾರಿ ಹೇಗೆ? ಬಹುಶಃ ಸೀರೆಯನ್ನು ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಬಳಿಕ ಇಷ್ಟೊಂದು ಪರ್ಫೆಕ್ಟ್ ಆಗಿ ಉಡುತ್ತಿರುವುದು ನೀವೇ ಏನೋ ಎಂದರು. ಇದಕ್ಕೆ ನಗುತ್ತಲೇ ಉತ್ತರಿಸಿದ ರಮ್ಯಾ, ತಮ್ಮ ಸೀರೆಯ ಗುಟ್ಟು ಬಿಟ್ಟುಕೊಟ್ಟರು. [ಸರಸದ ಸಮಯವನು ರಸಮಯವಾಗಿಸುವ ಸೀರೆ]

  ಅವರು ಮಾತನಾಡುತ್ತಾ, ಜನರಿಗೆ ಸುಲಭವಾಗಿ ಕನೆಕ್ಟ್ ಆಗಬೇಕಾದರೆ ಸೀರೆಯೇ ಪರ್ಫೆಕ್ಟ್ ದಿರಿಸು. ನನ್ನಲ್ಲಿ ಸಾಕಷ್ಟು ಸೀರೆಗಳ ಸಂಗ್ರಹ ಇದ್ದರೂ ಬಹಳಷ್ಟು ಸೀರೆಗಳನ್ನು ಮತ್ತೆಮತ್ತೆ ಬಳಸಿದ್ದೇನೆ. ಸೀರೆಯ ಅಂದವನ್ನು ಚಪ್ಪಲಿಗಳು ಇಮ್ಮಡಿಸುತ್ತವೆ. ಕಳೆದ ಆರು ತಿಂಗಳಿಂದ ತಾನು ಒಂದೇ ಜೊತೆ ಚಪ್ಪಲಿ ಬಳಸುತ್ತಿರುವುದಾಗಿ ರಮ್ಯಾ ಹೇಳಿಕೊಂಡಿದ್ದಾರೆ.

  English summary
  Recently a local TV anchor said in an interview that, Mandya queen Ramya was the third woman-politician in the country to have draped the saree the perfect way, after Indira and Sonia Gandhi. What's Ramya reaction to above comment?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X