»   » ಸ್ಟಾರ್ ಸುವರ್ಣ ವಾಹಿನಿಯಿಂದ 'ಶಿವರಾತ್ರಿ ಸಂಭ್ರಮ'

ಸ್ಟಾರ್ ಸುವರ್ಣ ವಾಹಿನಿಯಿಂದ 'ಶಿವರಾತ್ರಿ ಸಂಭ್ರಮ'

Posted By:
Subscribe to Filmibeat Kannada

ಶಿವರಾತ್ರಿ ಹಬ್ಬದ ನಿಮಿತ್ತ ಫೆಬ್ರವರಿ 18 ರಂದು ನಿಮ್ಮ ಸ್ಟಾರ್ ಸುವರ್ಣ ವಾಹಿನಿ 'ಮಹಾಯಾಗ' ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅಂದು ಬೆಳಗ್ಗೆ ಆನಂದವಾಣಿಯ ಡಾ.ವಿದ್ವಾನ್ ಗೋಪಾಲಕೃಷ್ಣ ಗುರೂಜಿ ನೇತೃತ್ವದಲ್ಲಿ 11 ಲಕ್ಷ ಶಿವನಾಮ ಜಪಕ್ಕೆ ಚಾಲನೆ ನೀಡಲಾಯಿತು. 1008 ಮೃತ್ತಿಕಾ ಶಿವಲಿಂಗವನ್ನು ಅಲ್ಲಿಯೇ ಭಕ್ತರು ಸಿದ್ಧಪಡಿಸಿ ಪ್ರತಿಷ್ಠಾಪಿಸಿದರು.[ಮಹಾ ಶಿವರಾತ್ರಿ ಹಬ್ಬ, ಸ್ಟಾರ್ ಸುವರ್ಣ ವಾಹಿನಿ ಹಾಗೂ 'ಮಹಾಯಾಗ']

ಲೋಕಕಲ್ಯಾಣಾರ್ಥ 'ಮಹಾ ರುದ್ರಯಾಗ'ವನ್ನು ನೆರವೇರಿಸಲಾಯಿತು. ಬೆಂಗಳೂರಿನ ವಿವಿಧ ಬಡಾವಣೆಗಳಿಂದ 50ಕ್ಕೂ ಹೆಚ್ಚು ಭಜನಾ ಮಂಡಳಿಗಳು ಆಗಮಿಸಿ 'ಹರ ಭಜನೆ' ನಡೆಸಿಕೊಟ್ಟರು. ಸುವರ್ಣ ಲೇಡೀಸ್ ಕ್ಲಬ್ ವತಿಯಿಂದ ಹಲವು ತಂಡಗಳು ಶಿವ, ಪಾರ್ವತಿ ಹಾಗೂ ಗಣೇಶನ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ನಟರಾಜನಿಗೆ 'ನಾಟ್ಯ ನಮನ' ಸಲ್ಲಿಸಿದರು.

ಶಿವ-ಪಾರ್ವತಿ-ಗಜಮುಖ ಆಗಮನ

ಭವ್ಯ ವೇದಿಕೆಗೆ ಶಿವ, ಪಾರ್ವತಿ ಹಾಗೂ ಗಜಮುಖ ಆಗಮಿಸಿದರು. ವೀಕ್ಷಕರ ಹರ್ಷೋದ್ಗಾರದ ನಡುವೆ 'ಹರಹರ ಮಹಾದೇವ' ಶೀರ್ಷಿಕೆ ಗೀತೆಯೊಂದಿಗೆ ಶಿವ-ಪಾರ್ವತಿ-ಗಣೇಶ ವೇದಿಕೆಯನ್ನು ಅಲಂಕರಿಸಿದರು.[ಫೆಬ್ರವರಿ 13 ರಿಂದ ಕರುನಾಡ ಮನೆ ಮನೆಯಲ್ಲೂ ಗಣೇಶೋತ್ಸವ.!]

ವಿಶೇಷ ಅತಿಥಿಗಳು

ಈ ಸಂದರ್ಭದಲ್ಲಿ ಶ್ರೀ ನರೇಂದ್ರ ಬಾಬು ಶರ್ಮಾ ಗುರೂಜಿ ಆಗಮಿಸಿ ಶಿವರಾತ್ರಿ ಮತ್ತು 'ಹರಹರ ಮಹಾದೇವ' ಧಾರಾವಾಹಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಕರ್ನಾಟಕ ಸರ್ಕಾರದ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಆಗಮಿಸಿ ಸ್ಟಾರ್ ಸುವರ್ಣ ವಾಹಿನಿಯ 'ಮಹಾಯಾಗ' ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಶಾಸಕ ಗೋಪಾಲಗೌಡ ಉಪಸ್ಥಿತರಿದ್ದರು.

'ಮಹಾಯಾಗ'ದಲ್ಲಿ ಸೂಪರ್ ಜೋಡಿ

'ಮಹಾಯಾಗ' ಕಾರ್ಯಕ್ರಮಕ್ಕೆ 'ಸೂಪರ್ ಜೋಡಿ'ಯ ಕಾಳಿಸ್ವಾಮಿ, ಅರುಣ್ ಮತ್ತು ಸೌಮ್ಯ ಜೋಡಿ ಅಗಮಿಸಿ ಮೆರುಗು ನೀಡಿದರು.

'ಮಹಾ ಮೂವಿ'

ಶಿವರಾತ್ರಿ ಹಬ್ಬದಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬೆಳಗ್ಗೆ 9ಕ್ಕೆ 'ಹರಹರ ಮಹಾದೇವ' ಪ್ರಮುಖ ಕಥೆಗಳನ್ನಿಟ್ಟುಕೊಂಡು 'ಮಹಾ ಮೂವಿ' ಬಿತ್ತರವಾಗಲಿದೆ.

English summary
Maha Shivaratri Special: 'Maha Yaga' by Star Suvarna Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada