»   » ಫೆಬ್ರವರಿ ತಿಂಗಳಲ್ಲಿ 'ಸೈರಾಟ್' ರೀಮೇಕ್ 'ಮನಸು ಮಲ್ಲಿಗೆ' ಬಿಡುಗಡೆ

ಫೆಬ್ರವರಿ ತಿಂಗಳಲ್ಲಿ 'ಸೈರಾಟ್' ರೀಮೇಕ್ 'ಮನಸು ಮಲ್ಲಿಗೆ' ಬಿಡುಗಡೆ

Posted By:
Subscribe to Filmibeat Kannada

ರಾಕ್ ಲೈನ್ ಪ್ರೊಡಕ್ಷನ್ ಹಾಗೂ ಜೀ ಸ್ಟುಡಿಯೋ ಮೂಲಕ ರಾಕ್ ಲೈನ್ ವೆಂಕಟೇಶ್ ಹಾಗೂ ಆಕಾಶ್ ಚಾವ್ವಾ ಅವರು ನಿರ್ಮಿಸುತ್ತಿರುವ, ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನದ 'ಮನಸ್ಸು ಮಲ್ಲಿಗೆ' ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಕಾರ್ಯ ಮುಕ್ತಾಯವಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರ ಬಿಡುಗಡೆ ಆಗಲಿದೆ.

manasu-mallige-to-release-in-february

ಮರಾಠಿ ಭಾಷೆಯ ಬ್ಲಾಕ್ ಬಸ್ಟರ್ 'ಸೈರಾಟ್' ಚಿತ್ರದ ರೀಮೇಕ್ ಆಗಿರುವ 'ಮನಸ್ಸು ಮಲ್ಲಿಗೆ' ಚಿತ್ರಕ್ಕೆ ನಾಯಕನಾಗಿ ನಿಶಾಂತ್ ಅಭಿನಯಿಸಿದ್ದರೆ, ನಾಯಕಿ ಪಾತ್ರದಲ್ಲಿ ರಿಂಕು ರಾಜಗುರು ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ರಂಗಭೂಮಿ ಕಲಾವಿದರ ದಂಡೇ ಈ ಚಿತ್ರದಲ್ಲಿದೆ.[ಕನ್ನಡಕ್ಕೆ ಬಂದ 'ಸೈರತ್' ಬೆಡಗಿ ರಿಂಕುಗೆ ನಾಯಕ ಸಿಕ್ಕಾಯ್ತು!]

manasu-mallige-to-release-in-february

ಬೆಂಗಳೂರು, ಹೊಸಪೇಟೆ, ಗದಗ, ಕೊಳ್ಳೇಗಾಲ, ಚಾಮರಾಜನಗರ ಮುಂತಾದ ಪ್ರದೇಶಗಳಲ್ಲಿ ಸುಮಾರು ಮೂವತ್ತು ದಿನಗಳ ಕಾಲ 'ಮನಸ್ಸು ಮಲ್ಲಿಗೆ' ಚಿತ್ರದ ಚಿತ್ರೀಕರಣ ನಡೆದಿದೆ.[ಕನ್ನಡದ 'ಸೈರಾಟ್'ಗೆ ಟೈಟಲ್ ಫಿಕ್ಸ್!]

manasu-mallige-to-release-in-february

ಮನೋಹರ ಜೋಷಿ ಛಾಯಾಗ್ರಹಣ, ಇಸ್ಮಾಯಿಲ್ ಕಲಾ ನಿರ್ದೇಶನ, ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್, ಯೋಗರಾಜ್ ಭಟ್, ಕವಿರಾಜ್ ಗೀತ ಸಾಹಿತ್ಯ ಈ ಚಿತ್ರಕ್ಕಿದೆ.

English summary
S.Narayan directorial Kannada Movie 'Manasu Mallige' will release in February. 'Manasu Mallige' is the remake of Marathi Hit Film 'Sairat'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada