For Quick Alerts
  ALLOW NOTIFICATIONS  
  For Daily Alerts

  ಚಿರು-ಮೇಘನಾ ಆರತಕ್ಷತೆಯಲ್ಲಿ ತಾರಾ ಮೆರುಗು

  By Pavithra
  |
  ಮೇಘನಾ -ಚಿರು ಮದುವೇಲಿ ಸೌತ್ cini ತಾರೆಯರ ಸಮಾಗಮ |Filmibeat Kannada

  ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಉಂಗುರ ಬದಲಾಯಿಸಿಕೊಂಡು ದಾಂಪತ್ಯ ಜೀವನದ ಮೊದಲ ಹೆಜ್ಜೆ ಇಟ್ಟ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ನಿನ್ನೆ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡರು.

  ಬೆಳಿಗ್ಗೆ ಗುರು-ಹಿರಿಯರು ನಿಶ್ಚಯ ಮಾಡಿರುವಂತ ಲಗ್ನದಲ್ಲಿ ಮಾಂಗಲ್ಯಧಾರಣೆ ಮಾಡಿಸಲಾಯ್ತು. ಪ್ರಜ್ವಲ್, ಪುನೀತ್ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ರಮೇಶ್ ಭಟ್, ರಾಮಕೃಷ್ಣ, ತಾರಾ ವೇಣು ಸೇರಿದಂತೆ ಇನ್ನು ಅನೇಕರು ವಿವಾಹ ಸಂಭ್ರಮದಲ್ಲಿ ಭಾಗಿ ಆಗಿದ್ದರು.

  ಮದುವೆ ಮುಗಿದ ನಂತರವೂ ಮೇಘನಾ ಮನೆಯಲ್ಲಿ ಮುಗಿಯದ ಸಂಭ್ರಮಮದುವೆ ಮುಗಿದ ನಂತರವೂ ಮೇಘನಾ ಮನೆಯಲ್ಲಿ ಮುಗಿಯದ ಸಂಭ್ರಮ

  ಮಲೆಯಾಳಂ ನಟಿ ನಜ್ರಿಯಾ ಕೂಡ ಚಿರು-ಮೇಘನಾ ಮದುವೆಯಲ್ಲಿ ಕಾಣಿಸಿಕೊಂಡರು. ಸ್ಯಾಂಡಲ್ ವುಡ್ ನ ದೊಡ್ಡ ಸ್ಟಾರ್ ಗಳೆಲ್ಲರು ಸಂಜೆ ನಡೆದ ಆರತಕ್ಷತೆಯಲ್ಲಿ ಭಾಗಿ ಆಗಿದ್ದರು. ಹಾಗಾದರೆ ಚಿರು-ಮೇಘನಾ ಆರತಕ್ಷತೆಯಲ್ಲಿ ಯಾರೆಲ್ಲಾ ಸ್ಟಾರ್ ಗಳು ಕಾಣಿಸಿಕೊಂಡರು ಇಲ್ಲಿದೆ ಸ್ಟೋರಿ ಮುಂದೆ ಓದಿ

  ಆರತಕ್ಷತೆಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್

  ಆರತಕ್ಷತೆಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್

  ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಆರತಕ್ಷತೆಯಲ್ಲಿ ಸಾಕಷ್ಟು ಸ್ಟಾರ್ ಗಳು ಭಾಗಿ ಆಗಿದ್ದರು. ಸರ್ಜಾ ಹಾಗೂ ಸುಂದರ್ ರಾಜ್ ಎರಡು ಕುಟುಂಬಗಳು ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಇರುವುದರಿಂದ ಚಂದನವನದ ಬಹುತೇಕ ಕಲಾವಿದರು ಮದುವೆಯಲ್ಲಿ ಪಾಲ್ಗೊಂಡಿದ್ದರು.

  ಆರತಕ್ಷತೆಗೆ ಬಂದ ಚಾಲೆಂಜಿಂಗ್ ಸ್ಟಾರ್

  ಆರತಕ್ಷತೆಗೆ ಬಂದ ಚಾಲೆಂಜಿಂಗ್ ಸ್ಟಾರ್

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಆರತಕ್ಷತೆಗೆ ಬಂದು ಇಬ್ಬರಿಗೂ ಶುಭಾಶಯ ಕೋರಿದ್ರು. ದರ್ಶನ್ ಮೇಘನಾ ರಾಜ್ ಹಾಗೂ ಅರ್ಜುನ್ ಸರ್ಜಾ ಜೊತೆ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.

  ಮದುವೆ ಮನೆಯಲ್ಲಿ ಡಾಲಿ

  ಮದುವೆ ಮನೆಯಲ್ಲಿ ಡಾಲಿ

  ಅಲ್ಲಮ ಸಿನಿಮಾದಲ್ಲಿ ಮೇಘನಾ ರಾಜ್ ಜೊತೆಯಾಗಿ ಅಭಿನಯ ಮಾಡಿದ್ದ ಡಾಲಿ ಧನಂಜಯ ಕೂಡ ಆರತಕ್ಷತೆಗೆ ಬಂದು ಸ್ನೇಹಿತೆ ಮೇಘನಾ ಹಾಗೂ ಚಿರಂಜೀವಿ ಸರ್ಜಾಗೆ ವಿಷ್ ಮಾಡಿದ್ರು.

  ಹಂಸಲೇಖ ದಂಪತಿಗಳ ಆಶೀರ್ವಾದ

  ಹಂಸಲೇಖ ದಂಪತಿಗಳ ಆಶೀರ್ವಾದ

  ಹಂಸಲೇಖ ಹಾಗೂ ಅವರ ಪತ್ನಿ ಲತಾ ಆರತಕ್ಷತೆಯಲ್ಲಿ ಭಾಗಿ ಆಗಿದ್ದರು ಅವರ ಜೊತೆಯಲ್ಲಿ ನಟ ದುನಿಯಾ ವಿಜಿ ಕೂಡ ನವ ಜೋಡಿಗೆ ಶುಭಾಶಯ ಕೋರಿದರು.

  ಚಿತ್ರಗಳು: ಚಿರು ಸರ್ಜಾ-ಮೇಘನಾ ಮದುವೆ ಕಣ್ತುಂಬಿಕೊಳ್ಳಿ ಚಿತ್ರಗಳು: ಚಿರು ಸರ್ಜಾ-ಮೇಘನಾ ಮದುವೆ ಕಣ್ತುಂಬಿಕೊಳ್ಳಿ

  English summary
  Kannada actress Meghna Raj and Chiranjeevi Sarja wedding reception held yesterday at Palace Ground. Most of Sandalwood's stars are involved in the reception.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X