Just In
Don't Miss!
- News
ದೆಹಲಿಯಲ್ಲಿ ಬರೋಬ್ಬರಿ 9 ತಿಂಗಳ ನಂತರ ನೂರರ ಕೆಳಗಿಳಿದ ಕೊರೊನಾ ಪ್ರಕರಣ
- Sports
ಸಿರಾಜ್ನ ದೊಡ್ಡ ಸಾಮರ್ಥ್ಯವೇ ಆತನ ಆತ್ಮವಿಶ್ವಾಸ: ಬೌಲಿಂಗ್ ಕೋಚ್ ಭರತ್ ಅರುಣ್
- Automobiles
2030ರಿಂದ ಕೇವಲ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಈ ಕಾರು ತಯಾರಕ ಕಂಪನಿ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಂದನವನಕ್ಕೆ ಡಜನ್ ನಿರ್ದೇಶಕರನ್ನು ಕೊಟ್ಟ 'ಕುಂದಾಪುರ'
ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಸಿನಿಮಾ ಪ್ರೀತಿ ಹೆಚ್ಚಾಗುತ್ತಿದೆ. ಅಲ್ಲಿಂದ ಸ್ಯಾಂಡಲ್ ವುಡ್ ಗೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಪರಿಚಯವಾಗುತ್ತಿದ್ದಾರೆ. ಕೆಲವರು ಕೋಸ್ಟಲ್ ವುಡ್ ನಲ್ಲೇ ಗುರುತಿಸಿಕೊಂಡರೆ ಇನ್ನು ಕೆಲವರು ಕನ್ನಡ ಸಿನಿಮಾರಂಗದಲ್ಲಿ ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುತ್ತಿದ್ದಾರೆ.
ಸದ್ಯ ಕುಂದಾಪುರ ಒಂದರಿಂದಲೇ ಹತ್ತಕ್ಕೂ ಹೆಚ್ಚು ನಿರ್ದೇಶಕರು ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಸಂಚಲನ ಮೂಡಿಸುತ್ತಿದ್ದಾರೆ. ಕಾಶಿನಾಥ್ ರಿಂದ ಆರಂಭವಾದ ನಿರ್ದೇಶಕರ ಲೆಕ್ಕ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ನಿರ್ದೇಶಕ ಗುರುದತ್ತ್ ಗಾಣಿಗ ಅವರ ವರೆಗೂ ಬಂದು ನಿಂತಿದೆ.
ವಿವಾದಕ್ಕೆ ಕಾರಣವಾಯ್ತು ನೂತನ ಫಿಲ್ಮ್ ಚೇಂಬರ್ ಅಧ್ಯಕ್ಷರ ನಿಲುವು.!
ಹಾಗಾದರೆ ಸ್ಯಾಂಡಲ್ ವುಡ್ ನಲ್ಲಿ ಸೌಂಡ್ ಮಾಡುತ್ತಿರುವ ಕುಂದಪುರದ ನಿರ್ದೇಶಕರು ಯಾರು? ಯಾವೆಲ್ಲಾ ಚಿತ್ರವನ್ನು ಡೈರೆಕ್ಟ್ ಮಾಡುತ್ತಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಕಾಶಿನಾಥ್ ಅವರಿಂದ ಸ್ಫೂರ್ತಿ
ಕನ್ನಡ ಸಿನಿಮಾರಂಗದಲ್ಲಿ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಮೊಟ್ಟಮೊದಲ ಕುಂದಾಪುರಿದ ನಿರ್ದೇಶಕ ಅಂದರೆ ಕಾಶಿನಾಥ್.
ಅವರ ನಂತರ ಕಾಶಿನಾಥ್ ಅವರ ಗರಡಿಯಲ್ಲಿ ಪಳಗಿದ ಅವರ ಶಿಷ್ಯ ಉಪೇಂದ್ರ ಕೂಡ ಕುಂದಾಪುರದವರೇ. ಉಪ್ಪಿ ಚಿತ್ರರಂಗದಲ್ಲಿ ಬೇರೆಯದೇ ಟ್ರೆಂಡ್ ಸೃಷ್ಟಿಸಿದರು.

ರಿಷಬ್ ಶೆಟ್ಟಿ ಕೂಡ ಕುಂದಾಪುರದವರು
'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಪ್ರಖ್ಯಾತರಾದ ರಿಷಬ್ ಶೆಟ್ಟಿ ಕೂಡ ಕುಂದಾಪುರದವರೇ. 'ಕಿರಿಕ್ ಪಾರ್ಟಿ' ಹಾಗೂ 'ರಿಕ್ಕಿ' ಚಿತ್ರಕ್ಕೂ ಮುನ್ನವೇ ಸಾಕಷ್ಟು ವರ್ಷಗಳಿಂದ ರಿಷಬ್ ಕನ್ನಡ ಚಿತ್ರರಂಗದಲ್ಲೇ ಕೆಲಸ ಮಾಡಿಕೊಂಡಿದ್ದರು.

ಕುಂದರಪುರದ ಸಂತೋಷ್ ಆನಂದ್ ರಾಮ್
'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ಮತ್ತು 'ರಾಜಕುಮಾರ' ಚಿತ್ರಗಳ ನಿರ್ದೇಶಕ ಸಂತೋಷ್ ಆನಂದರಾಮ್ ಕೂಡ ಕುಂದಾಪುರದವರೇ.ಇನ್ನು 'ಉಗ್ರಂ' ಖ್ಯಾತಿಯ ಸಂಗೀತ ನಿರ್ದೇಶಕ ರವಿಬಸ್ರೂರ್ ಕುಂದಾಪುರದವರು.

ಕರಾವಳಿಯ ಡೈರೆಕ್ಟರ್ ಸಿನಿಮಾ ನಂಜುಂಡಿಕಲ್ಯಾಣ
'ಕಿನಾರೆ' ಚಿತ್ರವನ್ನು ನಿರ್ದೇಶನ ಮಾಡಿರುವ ದೇವರಾಜ್ ಪೂಜಾರಿ ಕೂಡ ಕರಾವಳಿಯವರೇ ಎನ್ನುವುದು ವಿಶೇಷ. ಡೈರೆಕ್ಟರ್ ರಾಜೇಂದ್ರಕಾರಂತ್ ಈಗಾಗಲೇ ಎರಡು ಚಿತ್ರ ನಿರ್ದೇಶಿಸಿರುವ ಸ್ಯಾಂಡಲ್ ವುಡ್ ನಲ್ಲಿ ಹೆಸರು ಗಳಿಸಿದ್ದಾರೆ.

ಗುರುದತ್ತ್ ಗಾಣಿಗ ಕುಂದಾಪುರದವರು
ಸುದೀಪ್ ಹಾಗೂ ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ನಿರ್ದೇಶಕ ಗುರುದತ್ತ್ ಗಾಣಿಗ ಕೂಡ ಕುಂದಾಪುರದ ಯುವ ನಿರ್ದೇಶಕ. ಗುರುದತ್ತ್ ಸಾಕಷ್ಟು ವರ್ಷಗಳಿಂದ ಸುದೀಪ್ ಅವರ ಚಿತ್ರಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ.

ಕುಂದಾಪುರದ ಪ್ರತಿಭೆಗಳು
ಭರತ್ತಾವಂದಾ, ನಾಗರಾಜ್ಉಪ್ಪುಂದ, ರಾಜೀವ್_ಕೊಠಾರಿ, ನಾಗರಾಜ್ಅರೆಹೊಳೆ, ಇನ್ನೂ ಅನೇಕರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದು ಕುಂದಾಪುರ ಒಂದರಿಂದಲೇ ಹತ್ತಕ್ಕೂ ಹೆಚ್ಚು ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ ಎನ್ನುವುದು ಖುಷಿ ವಿಚಾರ.