»   » 'ಬ್ರೇಕಿಂಗ್ ನ್ಯೂಸ್' ಫಸ್ಟ್‌ಡೇ ರಿಪೋರ್ಟ್ ಕಾರ್ಡ್

'ಬ್ರೇಕಿಂಗ್ ನ್ಯೂಸ್' ಫಸ್ಟ್‌ಡೇ ರಿಪೋರ್ಟ್ ಕಾರ್ಡ್

Posted By:
Subscribe to Filmibeat Kannada

ಬ್ರೇಕಿಂಗ್ ನ್ಯೂಸ್‌ಗೆ ಸಮಾಧಾನಕರ ಆರಂಭ ಸಿಕ್ಕಿದೆ. ಮೊದಲ ದಿನದ ಪ್ರದರ್ಶನಕ್ಕೆ ಧಾಂಧೂಂ ಎನ್ನುವಂಥ ಓಪನಿಂಗ್ ಸಿಗದಿದ್ದರೂ, ಆ ರೀತಿಯ ಆರಂಭವನ್ನ ಚಿತ್ರತಂಡ ಕೂಡಾ ನಿರೀಕ್ಷೆ ಮಾಡಿಕೊಂಡು ಕಾಯುತ್ತಿರಲಿಲ್ಲ ಅನ್ನೋದೂ ಅಷ್ಟೇ ಸತ್ಯ.

ನಮ್ದು ಸ್ಟಾರ್‌ಗೀರ್ ಇಲ್ಲದ ಮಧ್ಯಮ ಬಜೆಟ್‌ನ ಸಿನಿಮಾ ಎಂದುಕೊಂಡೇ ನಾಗತಿ ಓಡಾಡಿದ್ದರು. ಒಂದು (ಸುಶಿಕ್ಷಿತ ವರ್ಗ) ನಾಗತಿ ಸಿನಿಮಾಗಳ ಖಾಯಂ ಪ್ರೇಕ್ಷಕರಾಗಿರುವುದರಿಂದ, ಅವರ ರೆಸ್ಪಾನ್ಸ್ ಹೇಗಿರಬಹುದು ಎಂಬ ಪ್ರತಿಕ್ರಿಯೆಗಷ್ಟೇ ನಾಗತಿಹಳ್ಳಿ ಚಂದ್ರಶೇಖರ್ ಕಾಯುತ್ತಿದ್ದರು.

ಯಾಕೆಂದರೆ, ಅವರ ಹಿಂದಿನ ಚಿತ್ರ 'ನೂರು ಜನ್ಮಕೂ' ಸಿನಿಮಾಗೆ ಆ ಪ್ರೇಕ್ಷಕ ಕೂಡಾ ಭ್ರಮನಿರಾಸೆ ವ್ಯಕ್ತಪಡಿಸಿದ್ದ. ಹಾಗಾಗಿ ತುಂಬಾ ಎಚ್ಚರಿಕೆ ಇಟ್ಟುಕೊಂಡು ನಾಗತಿಹಳ್ಳಿ ಈ ಸಿನಿಮಾವನ್ನ ನಿರ್ಮಿಸಿದ್ದರು. ಇದೀಗ ಆರಂಭಿಕ ಫಲಿತಾಂಶ ಹೊರಬಿದ್ದಿದೆ.

ಬ್ರೇಕಿಂಗ್ ನ್ಯೂಸ್ ವೀಕ್ಷಣೆ ಮಾಡಿದ ಪ್ರೇಕ್ಷಕ ಅಂಥಾ ನಿರಾಸೆಯನ್ನೇನೂ ಅನುಭವಿಸಿಲ್ಲ. ಆಹಾ ಓಹೋ ಅಂದುಕೊಳ್ಳಲಾಗದಿದ್ದರೂ, ಇರುವ ಕಥೆಯನ್ನ ಆರಾಮಾಗಿ ಕುಳಿತು ನೋಡುವಂತೆ ಮಾಡುವಲ್ಲಿ ನಾಗತಿಹಳ್ಳಿ ಯಶಸ್ವಿಯಾಗಿದ್ದಾರೆ.

ಹಾಗೆನ್ನುವ ಅಭಿಪ್ರಾಯಗಳು ಅಲ್ಲಲ್ಲಿಂದ ಹೊರಬಿದ್ದಿವೆ. ಬರುವ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಜನರ ಕೊರಳು ಸೇರಿಕೊಳ್ಳುವ ಭರವಸೆಯಲ್ಲಿ ನಾಗತಿ ಎಲ್ಲಾ ಚಾನೆಲ್‌ಗಳನ್ನೂ ಸುತ್ತುತ್ತ, ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದಾರೆ. (ಒನ್‍ಇಂಡಿಯಾ ಕನ್ನಡ)

English summary
Nagathihalli Chandrashekhar's latest film Breaking News did not get good reviews but it certainly got a reasonbly good opening at the box office. Here is the first day report card of the Ajay Rao and Radhika Pandit lead movie.
Please Wait while comments are loading...