For Quick Alerts
  ALLOW NOTIFICATIONS  
  For Daily Alerts

  'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ

  |

  ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಪಂಜಾಬಿ ನಟ ದೀಪ್ ಸಿಧು ಕಾರಣ ಎಂಬ ಆರೋಪ ಕೇಳಿ ಬಂದಿದೆ. ದೀಪ್ ಸಿಧು ಬಿಜೆಪಿ ಬೆಂಗಲಿಗ, ಮೋದಿ ಮತ್ತು ಅಮಿತ್ ಶಾ ಜೊತೆ ಒಡನಾಟ ಹೊಂದಿದ್ದಾನೆ, ಸಂಸದ ಸನ್ನಿ ಡಿಯೋಲ್ ಅವರ ಆಪ್ತ ಎಂದು ಬಿಂಬಿಸುವ ಫೋಟೋಗಳು ವೈರಲ್ ಆಗಿದೆ.

  ಈ ಬಗ್ಗೆ ಸಂಸದ ಸನ್ನಿ ಡಿಯೋಲ್ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದು, ''ದೀಪ್ ಸಿಧು ಜೊತೆ ನನಗೆ ಅಥವಾ ನನ್ನ ಕುಟುಂಬಕ್ಕೆ ಯಾವುದೇ ಸಂಪರ್ಕ ಇಲ್ಲ'' ಎಂದಿದ್ದಾರೆ.

  ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?

  ''ಕೆಂಪುಕೋಟೆಯಲ್ಲಿ ನಡೆದ ಘಟನೆ ಬಗ್ಗೆ ನನಗೆ ಬೇಸರವಿದೆ. ಆದರೆ, ದೀಪ್ ಸಿಧು ಜೊತೆಗೆ ನನಗೆ ಆಗಲಿ, ನನ್ನ ಕುಟುಂಬ ಸದಸ್ಯರಿಗೆ ಆಗಲಿ ಯಾವುದೇ ರೀತಿಯ ಒಡನಾಟ, ಸಂಪರ್ಕ ಇಲ್ಲ ಎಂದು ಡಿಸೆಂಬರ್ 6 ರಂದೇ ಹೇಳಿದ್ದೇನೆ'' ಎಂದು ಜನವರಿ 26 ರಂದು ಮಾಡಿದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

  ಮತ್ತೊಂದೆಡೆ ''ಕೆಂಪುಕೋಟೆಯಲ್ಲಿ ಮಹಾನ್ ಸಾಹೇಬ್ ಬಾವುಟ ಹಾರಿಸಿದ್ದು ನಾವೇ, ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿಲ್ಲ. ರೈತರ ಪ್ರತಿಭಟನೆಗೆ ನಾವು ಜೊತೆಯಾಗಿದ್ವಿ, ನಾನು ಯಾವುದೇ ಪಕ್ಷದ ಬೆಂಬಲಿಗನಲ್ಲ, ಯಾವ ರಾಜಕಾರಣಿಯ ಆಪ್ತನೂ ಅಲ್ಲ'' ಎಂದು ದೀಪ್ ಸಿಧು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

  ಯಾರು ಈ ದೀಪ್ ಸಿಧು?

  1984ರಲ್ಲಿ ಪಂಜಾಬ್ ರಾಜ್ಯದ ಮಕ್ತ್ ಸರ್ ಜಿಲ್ಲೆಯಲಿ ಜನಿಸಿದ ದೀಪ್ ಸಿಧು ಕಾನೂನು ಪದವಿಧರರಾಗಿದ್ದಾರೆ. ಜೊತೆಗೆ ಪಂಜಾಬಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ ಸಂಸದ ಸನ್ನಿ ಡಿಯೋಲ್ ಪರ ಪ್ರಚಾರ ಮಾಡಿದ್ದರು ಎನ್ನಲಾಗಿದೆ.

  ರೈತರ ಪ್ರತಿಭಟನೆ ವೇಳೆ ಹಿಂಸಾಚಾರ: ಪೊಲೀಸರು ನೀಡಿದ ಹೇಳಿಕೆಯಲ್ಲೇನಿದೆ?

  Recommended Video

  ದರ್ಶನ್ ಮತ್ತು ಸುದೀಪ್ ಸ್ನೇಹದಲ್ಲಿ ಬಿರುಕು, ಸ್ಪಷ್ಟನೆ ಕೊಟ್ಟ ದೊಡ್ಡಣ್ಣ | Filmibeat Kannada

  ದೀಪ್ ಸಿಧು ಪಂಜಾಬ್‌ನ ನಿಷೇಧಿತ ಸಂಘಟನೆ 'ಸಿಖ್ ಫಾರ್ ಜಸ್ಟಿಸ್' ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ. ದೀಪ್ ಸಿಧು ಅವರ ವಿರುದ್ಧ ರೈತ ಸಂಘಟನೆಗಳು ಸಹ ಆಕ್ರೋಶ ಹೊರಹಾಕಿದೆ.

  English summary
  BJP MP Sunny Deol has clarified about deep sidhu and distanced himself from Punjabi film actor who turned activist.
  Wednesday, January 27, 2021, 15:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X