For Quick Alerts
  ALLOW NOTIFICATIONS  
  For Daily Alerts

  ಜಂಬೂಸವಾರಿಗೆ ಕಳೆತಂದ ‘ಕಲಾತಂಡಗಳು’, ಗಮನ ಸೆಳೆದ ಪುನೀತ್ ರಾಜ್‌ಕುಮಾರ್ ಸ್ಥಬ್ಧಚಿತ್ರ!

  By ಮೈಸೂರು ಪ್ರತಿನಿಧಿ
  |

  ನವರಾತ್ರಿಯ ಕೊನೆಯ ದಿನ ಮೈಸೂರು ದಸರಾ ಜಂಬೂಸವಾರಿಯನ್ನು ಇಂದು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು. ಪ್ರತಿಬಾರಿಯಂತೆ ಈ ಬಾರಿಯೂ ಜಂಬೂಸವಾರಿ ವೈಭವೋಪೇತವಾಗಿ ಜರುಗಿತು.

  ಪ್ರತಿಬಾರಿಯಂತೆ ಈ ಬಾರಿಯೂ ದಸರಾ ಜಂಬೂಸವಾರಿಗೆ ಕಲಾತಂಡಗಳು ವಿಶೇಷ ಮೆರುಗು ನೀಡಿದವು. ನಂದಿಧ್ವಜಕ್ಕೆ ಪೂಜೆಯಾಗುತ್ತಿದ್ದಂತೆ ಇತ್ತ ಜಾನಪದ ಕಲಾತಂಡಗಳಾದ ವೀರಗಾಸೆ, ಪುರಂವತಿಕೆ, ಕೊಂಬುಕಹಳೆ, ಕಂಸಾಳೆ, ಪಟ ಕುಣಿತ, ಕೀಲುಕುದುರೆ, ಚಿಟ್ ಮೇಳ, ಪೂಜಾ ಕುಣಿತ, ಲಂಬಾಣಿ ನೃತ್ಯಘಿ, ಹಗಲು ವೇಷ, ದಟ್ಟಿ ಕುಣಿತ, ಕುಡುಬಿ ನೃತ್ಯಘಿ, ಗೊಂಡರ ಡಕ್ಕೆಘಿ, ಚಿಲಿಪಿಲಿ ಗೊಂಬೆ, ಸಿಂಗಾರಿ ಮೇಳ, ಸುಗ್ಗಿ ಕುಣಿತ, ಗಾರುಡಿ ಗೊಂಬೆ ಸೇರಿದಂತೆ ನಾನಾ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ವೈವಿಧ್ಯಮಯ ನೃತ್ಯಗಳು ಜನರನ್ನು ಆಕರ್ಷಿಸಿದವು. ಒಂದೊಂದು ಕಲಾ ತಂಡವೂ ತಮ್ಮದೇ ಆದ ಪ್ರಾದೇಶಿಕ ಅಸ್ಮಿತೆ, ಸಂಸ್ಕೃತಿಯನ್ನು ಪ್ರಚುರಪಡಿಸಿದವು.

  ವೀರಗಾಸೆ ಚೆಂದ

  ವೀರಗಾಸೆ ಚೆಂದ

  ಮೊದಲಿಗೆ ನಂಜನಗೂಡಿನ ಅಂಬಳೆ ಶಿವಣ್ಣ ತಂಡದವರು ವಿರಗಾಸೆ ಪ್ರದರ್ಶನ ನೀಡಿ ಗಮನ ಸೆಳೆದರು. ನಾಲಿಗೆ ಚಾಚುತ್ತ ಕೆಂಗಣ್ಣುಗಳೊಂದಿಗೆ ಭಿನ್ನ ವೇಷಭೂಷಣದಿಂದ ಅದ್ಭುತ ಎನಿಸುವ ನೃತ್ಯ ಪ್ರದರ್ಶನ ನೀಡಿದರು. ಪೊಲೀಸ್ ಇಲಾಖೆಯ ವಾದ್ಯ ವೃಂದವೂ ಗಮನ ಸೆಳೆಯಿತು. ಆಕಾಶದತ್ತ ನೋಡಿ ತಮ್ಮದೇ ಆದ ಶಬ್ಧ ಹೊರಡಿಸುತ್ತಾ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕೋರೇಗಾಲ ಸಿ.ಎಚ್.ಶಿವಕುಮಾರ್ ತಂಡ ಕೊಂಬು ಕಹಳೆ ಮೂಲಕ ಸಾಗಿ ಗ್ರಾಮೀಣ ಸೊಗಡನ್ನು ಹರಿಡಿದರು. ಹಳದಿ ಬಣ್ಣದ ವಸಗಳನ್ನು ಧರಿಸಿ ತಲೆಗೆ ಪೇಟ ಸುತ್ತಿ ಕೊಂಬು ಕಹಳೆ ಊದುತ್ತಿದ್ದ ಪರಿಯೇ ಅಮೋಘವಾಗಿತ್ತು.

  ಕಂಸಾಳೆ ಮೋಡಿ

  ಕಂಸಾಳೆ ಮೋಡಿ

  ಪ್ರತಿವರ್ಷ ಕಂಸಾಳೆ ನೃತ್ಯ ದಸರಾ ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದರೂ ಜನರಿಗೆ ಅದರ ಮೇಲಿನ ಆಸಕ್ತಿ, ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲದಂತೆ ಭಾಸವಾಗುತ್ತಿತ್ತುಘಿ. ಮೈಸೂರು ಜಿಲ್ಲೆ ವರುಣಾ ಹೋಬಳಿಯ ಬಡಗಲಹುಂಡಿ ಮಲೆಮಹದೇಶ್ವರ ಕಂಸಾಳೆ ಕಲಾವಿದರ ಸಂಘ ಕಂಸಾಳೆ ಗಮನ ಸೆಳೆಯಿತು. ಕಲಾವಿದರು ಕಂಸಾಳೆ ಬೀಸುತ್ತಾ ಪಿರಮಿಡ್ಡು ರಚಿಸಿ ನಾನಾ ಭಂಗಿಗಳನ್ನು ಪ್ರದರ್ಶಿಸುತ್ತಿದ್ದಂತೆ ಜನಸ್ತೊಮ ಚಪ್ಪಾಳೆ ತಟ್ಟಿ ಪೋತ್ಸಾಹಿಸಿದರು.

  ಝಾಂಜ್ ಪಥಕ್ ನೃತ್ಯ ಝಲಕ್

  ಝಾಂಜ್ ಪಥಕ್ ನೃತ್ಯ ಝಲಕ್

  ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಶಂಕರ, ಕವಟಗಿ, ಜೈಗಣೇಶ ತಂಡ ಕುಚ್ಚಿನ ಜಾಲರಿಗಳನ್ನು ಹಿಡಿದುಕೊಂಡು ಸಮವಸ ತೊಟ್ಟು ಝಾಂಜ್ ಪಥಕ್ ನೃತ್ಯ ಮಾಡಿದರು. ಲಯಕ್ಕೆ ತಕ್ಕಂತೆ ಕಲಾವಿದರು ಹೆಜ್ಜೆ ಹಾಕಿದರು. ಇವಲ್ಲದೆ, ಧಾರವಾಡ ಜಿಲ್ಲೆಯ ಸುಗ್ಗಿ ಕುಣಿತ, ಸಕಲೇಶಪುರದ ಮಲೆನಾಡ ಸುಗ್ಗಿ ಕುಣಿತ, ಹಾವೇರಿಯ ತಮಟೆವಾದನ, ಮೈಸೂರು ಜಿಲ್ಲೆಯ ತಿ.ನರಸೀಪುರ ತಾಳೂಕು ಯಡಹಳ್ಳಿ ಗ್ರಾಮದ ವೈಘಿ.ಬಿ.ಪ್ರಕಾಶ್ ತಂಡದ ಪೂಜಾ ಕುಣಿತ, ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಶಾಂತಾಬಾಯಿ ಯವರೊಂದಿಗಿನ ಕಲಾವಿದರ ಲಂಬಾಣಿ ನೃತ್ಯಘಿ, ಬಳ್ಳಾರಿ ಜಿಲ್ಲೆ ಬುಡ್ಗಜಂಗಮ್ ನಗರದ ಅಶ್ವರಾಮಣ್ಣ ಅವರ ಹಗಲುವೇಷ, ಚಿಕ್ಕಬಳ್ಳಾಪುರದ ಪಿಂಡಪಾಪನಹಳ್ಳಿಯ ತಮಟೆ ವಾದನವೂ ಗಮನ ಸೆಳೆಯಿತು.

  ಪುನೀತ್ ರಾಜ್‌ಕುಮಾರ್ ಸ್ತಬ್ಧಚಿತ್ರ

  ಪುನೀತ್ ರಾಜ್‌ಕುಮಾರ್ ಸ್ತಬ್ಧಚಿತ್ರ

  ಸ್ತಬ್ಧಚಿತ್ರಗಳ ಪ್ರದರ್ಶನವೂ ಸಹ ಇಂದು ಗಮನ ಸೆಳೆಯಿತು. ಅದರಲ್ಲಿಯೂ ಚಾಮರಾಜನಗರ ಜಿಲ್ಲೆಯವರು ನಿರ್ಮಿಸಿದ್ದ ಅಪ್ಪು ಸ್ತಬ್ಧಚಿತ್ರ ಹೆಚ್ಚು ಗಮನ ಸೆಳೆಯಿತು. ಚಾಮರಾಜನಗರ ಜಿಲ್ಲೆಯ ಪ್ರವಾಸೋದ್ಯಮ ರಾಯಭಾರಿ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ಗೌರವವನ್ನು ಸ್ತಬ್ಧಚಿತ್ರದ ಮೂಲಕ ಸಲ್ಲಿಸಲಾಯ್ತು. ಚಾಮರಾಜನಗರದ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ಪ್ರತಿನಿಧಿಸುವ ಸ್ತಬ್ಧಚಿತ್ರದ ಜೊತೆಗೆ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಚಿತ್ರವೂ ಇತ್ತು.

  English summary
  Mysore Dasara: Today Puneeth Rajkumar Tableau attracted people. Chamarajanagar district created Puneeth Rajkumar tableau.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X