twitter
    For Quick Alerts
    ALLOW NOTIFICATIONS  
    For Daily Alerts

    ಡಾ. ರಾಜ್ ಜನ್ಮದಿನದಂದು ಹಂಸಲೇಖರಿಂದ ಗಿರಿರಾಜ್ ಕೃತಿ ಲೋಕಾರ್ಪಣೆ

    |

    ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ನಿರ್ದೇಶಕ ಬಿ ಎಂ. ಗಿರಿರಾಜ ಅವರ ಚೊಚ್ಚಲ ಕೃತಿ ಲೋಕಾರ್ಪಣೆಗೊಂಡಿದೆ. ನಾದಬ್ರಹ್ಮ ಹಂಸಲೇಖ ಅವರು ತಮ್ಮ ಮನೆಯಲ್ಲಿ ಸರಳವಾಗಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.

    Recommended Video

    ಅಪ್ಪನಿಗೆ Puneeth Rajkumar ರಿಂದ ಹೃದಯಸ್ಪರ್ಶಿ ಗೀತೆಯ ಕೊಡುಗೆ | Filmibeat Kannada

    ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬದಂದೇ ಬಿಡುಗಡೆ ಆಗಬೇಕೆಂದು ಬಿ ಎಂ ಗಿರಿರಾಜ್ ಅವರು, ಎಸ್ ರತ್ನ ವಿಠ್ಠಲ್ ಕರ್ ಅವರು ಮತ್ತು ಹಂಸಲೇಖ ಅವರು ತೀರ್ಮಾನಿಸಿ ಇಂದು ಬಿಡುಗಡೆ ಗೊಳಿಸಿದರು.

    ಕಥೆಗೆ ಸಾವಿಲ್ಲ ಮತ್ತು ಪುನರ್ವಸಂತ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹಂಸಲೇಖ, ''ಕಲೆಗೂ ಸಾವಿಲ್ಲ, ಕಥೆಗೂ ಸಾವಿಲ್ಲ, ಎಲ್ಲವನ್ನು ವಿಭಿನ್ನವಾಗಿ ಆಲೋಚನೆ ಮಾಡುವ ಕಲಾವಿದ ಗಿರಿರಾಜ, ನಮ್ಮ ಶಾಲೆಯಲ್ಲಿ ಅಧ್ಯಾಪಕನಾಗಿದ್ದ, ಎಲ್ಲವನ್ನು ದಿಟ್ಟವಾಗಿ ಮಾಡುವ ವ್ಯಕ್ತಿ, ಎಲ್ಲರೂ ಈ ಪುಸ್ತಕ ಕೊಂಡು ಓದಿ'' ಎಂದರು.

    Nadabrahma Hamsalekha releases BM Girirajs Kathege Savilla Book

    ಕೋವಿಡ್ 19 ಲಸಿಕೆ ಹಾಕಿಸಿಕೊಂಡಿರುವ ಹಂಸಲೇಖ ಅವರಿಗೆ ಜ್ವರ ಬರುವ ಲಕ್ಷಣವಿದ್ದರೂ ಸಹ ಖುದ್ದು ಅವರೇ ಪಬ್ಲಿಷರ್ ನಂದೀಶ್ ಅವರಿಗೆ ಕರೆ ಮಾಡಿ, ಕನ್ನಡದ ಕೆಲಸ ನಿಲ್ಲಬಾರದು ಎಂದು ಹೇಳಿ, ಹೆಚ್ಚು ಜನ ಸೇರೋದು ಬೇಡ ಸರಳವಾಗಿ ಪುಸ್ತಕ ಬಿಡುಗಡೆ ಮಾಡೋಣ ಎಂದಿದ್ದಾರೆ. ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

    ಕಥೆಗೆ ಸಾವಿಲ್ಲ ಮತ್ತು ಪುನರ್ವಸಂತ ಎರಡೂ ಪುಸ್ತಕಗಳು ಬಿಡುಗಡೆ ಆಗಿದ್ದು, ಎಲ್ಲಾ ಪುಸ್ತಕ ಮಳಿಗೆಗಳು ಮೊದಲಿನಂತೆ ಕಾರ್ಯ ನಿರ್ವಹಿಸಲು ಶುರುವಾದಾಗ ಅಂಗಡಿಗಳಲ್ಲಿ ದೊರೆಯುತ್ತದೆ. ಅಲ್ಲಿಯವರೆಗೂ ಕನ್ನಡ ಲೋಕ , ಜೀರುಂಡೆ ಪುಸ್ತಕ , ಋತುಮಾನ, ನವಕರ್ನಾಟಕ ಮತ್ತು ಮುಂತಾದ ಆನ್ಲೈನ್ ತಾಣಗಳಲ್ಲಿ ಲಭ್ಯವಿದೆ. ಕೊರಿಯರ್ ಮತ್ತು ಪೋಸ್ಟ್ ಸೌಲಭ್ಯವಿದ್ದು ಆಸಕ್ತರು ಬಳಸಿಕೊಳ್ಳಬಹುದು. ಈಗಾಗಲೇ ಪ್ರೀ ಆರ್ಡರ್ ಮಾಡಿರುವವರಿಗೆ ತಲುಪುತ್ತದೆ ಎಂದು ಕಾನ್‌ಕೇವ್ ಪಬ್ಲಿಕೇಷನ್‌ನ ನಂದೀಶ್ ಅವರು ಫಿಲ್ಮಿಬೀಟ್ ಪ್ರತಿನಿಧಿಗೆ ತಿಳಿಸಿದರು.

    Nadabrahma Hamsalekha releases BM Girirajs Kathege Savilla Book

    ಜಟ್ಟ, ಮೈತ್ರಿ, ಅಮರಾವತಿಯಂಥ ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರ ಮುಂದಿಟ್ಟ ನಟ, ನಿರ್ದೇಶಕ ಗಿರಿರಾಜ ಅವರು ತಮ್ಮ ಚೊಚ್ಚಲ ಕಾದಂಬರಿ ಲೋಕಾರ್ಪಣೆಯಾಗಿದೆ. ಸದ್ಯ ಕನ್ನಡ ಚಿತ್ರರಂಗದ ಶೋ ಮ್ಯಾನ್ ವಿ ರವಿಚಂದ್ರನ್ ಅವರನ್ನು ವಿಭಿನ್ನ ಪಾತ್ರದ ಮೂಲಕ ''ಕನ್ನಡಿಗ'' ನಾಗಿ ತೆರೆಗೆ ತರುವ ಯತ್ನದಲ್ಲಿದ್ದಾರೆ ಗಿರಿರಾಜ್.

    English summary
    Musiciaan Nadabrahma Hamsalekha released Director BM Giriraj's Kathege Savilla and Rathna Vittalkar's Punarvasu book at his residence.
    Saturday, April 24, 2021, 13:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X