»   » 'ಸಂತ ಶಿಶುನಾಳ ಷರೀಫ' ಟು 'ಅಲ್ಲಮ': 'ಹರಿ ಖೋಡೆ' ಬರಿ ನೆನಪು ಮಾತ್ರ

'ಸಂತ ಶಿಶುನಾಳ ಷರೀಫ' ಟು 'ಅಲ್ಲಮ': 'ಹರಿ ಖೋಡೆ' ಬರಿ ನೆನಪು ಮಾತ್ರ

Written By:
Subscribe to Filmibeat Kannada

ಉದ್ಯಮಿ ಹಾಗೂ ಖ್ಯಾತ ಚಲನಚಿತ್ರ ನಿರ್ಮಾಪಕ ಶ್ರೀಹರಿ ಎಲ್‌. ಖೋಡೆ, ಸದಭಿರುಚಿಯ ಚಿತ್ರ ನಿರ್ಮಾಪಕರ ಸಾಲಿನಲ್ಲಿ ಬರುವ ಖ್ಯಾತ ಹೆಸರು. ಇವರು ನಿರ್ಮಿಸಿರುವ ಚಿತ್ರಗಳೇ ಇದಕ್ಕೆ ಸಾಕ್ಷಿ.

'ಸಂತ ಶಿಶುನಾಳ ಷರೀಫ', 'ನಾಗಮಂಡಲ', 'ಮೈಸೂರ ಮಲ್ಲಿಗೆ' ಎಂಬ ಅತ್ಯುದ್ಬುತ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಅಭಿರುಚಿಯನ್ನ ತೋರಿಸಿಕೊಟ್ಟ ಹರಿ ಎಲ್‌. ಖೋಡೆ ಈಗ ಬರಿ ನನೆಪು ಮಾತ್ರ.

ಹೌದು, ಉದ್ಯಮಿ ಹಾಗೂ ನಿರ್ಮಾಪಕರಾಗಿ ಜನಮನ್ನಣೆ ಗಳಿಸಿದ್ದ ಶ್ರೀಹರಿ ಎಲ್‌. ಖೋಡೆ ಅವರು ಅನಾರೋಗ್ಯದ ಕಾರಣ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. [ಉದ್ಯಮಿ, ಚಿತ್ರ ನಿರ್ಮಾಪಕ ಹರಿ ಖೋಡೆ ನಿಧನ ]

ಹೀಗೆ, ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ಖೋಡೆಯವರಿಗೆ, 'ಶೂನ್ಯಪೀಠದ ಅಧ್ಯಕ್ಷ ಅಲ್ಲಮಪ್ರಭು' ಕುರಿತು ಸಿನಿಮಾ ಮಾಡಬೇಕು ಎಂಬ ಮಹಾದಾಸೆ ಇತ್ತು. ಆ ಆಸೆಯನ್ನ ಕೂಡ ನೆರವೇರಿಸಿಕೊಳ್ಳುವ ಉದ್ದೇಶದಿಂದಲೇ ಇತ್ತೀಚಿಗೆ 'ಅಲ್ಲಮ' ಚಿತ್ರವನ್ನ ಕೂಡ ಶುರು ಮಾಡಿದ್ದರು.

ಆದ್ರೆ, ವಿಧಿ ಲಿಖಿತ 'ಅಲ್ಲಮ' ಸಿನಿಮಾ ಬಿಡುಗಡೆಗೂ ಮುಂಚೆಯೇ ಖೋಡೆ ಯವರು ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ್ದಾರೆ. ಮುಂದೆ ಓದಿ...

'ಸಂತ ಶಿಶುನಾಳ ಷರೀಫ'

ಪ್ರೇಕ್ಷಕರಿಗೆ ಒಳ್ಳೆ ಸಧಬಿರುಚಿಯ ಚಿತ್ರಗಳನ್ನ ಕೊಡಬೇಕು ಎಂಬ ಆಸೆ-ಆಸಕ್ತಿ ಹರಿ ಖೋಡೆಯವರಿಗಿತ್ತು. ಅದರ ಪ್ರತಿರೂಪವಾಗಿ ಬಂದ ಮೊದಲ ಚಿತ್ರವೇ 'ಸಂತ ಶಿಶುನಾಳ ಷರೀಫ'. 1990ರಲ್ಲಿ ತೆರೆಕಂಡ ಈ ಚಿತ್ರ 'ಸಂತ ಶಿಶುನಾಳ ಷರೀಫ' ಅವರ ಜೀವನವನ್ನಾಧರಿಸಿದ ಕಥೆ. ಶ್ರೀಧರ್ ಷರೀಫರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಗಿರೀಶ್ ಕಾರ್ನಡ್, ಸುಮನ್ ರಂಗನಾಥ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದರು.

`ಮೈಸೂರ ಮಲ್ಲಿಗೆ'ಯ ಕತೃ

ಕೆ.ಎಸ್.ನರಸಿಂಹಸ್ವಾಮಿ ಅವರ 'ಮೈಸೂರ ಮಲ್ಲಿಗೆ' ಕಾಧಂಬರಿಯನ್ನ 1992ರಲ್ಲಿ ಸಿನಿಮಾ ಮಾಡಿದ ಖೋಡೆಯವರು, ಈ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನ ಗಳಿಸಿದರು. ಈ ಚಿತ್ರದಲ್ಲಿ ಗಿರೀಶ್ ಕಾರ್ನಡ್, ಸುಧರಾಣಿ ಸೇರಿಂದತೆ ಹಲವರು ಅಭಿನಯಿಸಿದ್ದರು.

'ನಾಗಮಂಡಲ'ದ ರೂವಾರಿ

ಕಾದಂಬರಿ ಆಧರಿಸಿ ಮೊದಲೆರಡು ಚಿತ್ರಗಳನ್ನ ನೀಡಿದ್ದ ಖೋಡೆ ಅವರು, ಮೂರನೇ ಚಿತ್ರವನ್ನ ಕೂಡ ಕಾದಂಬರಿ ಆಧರಿಸಿದ ಚಿತ್ರವನ್ನೇ ಮಾಡಿದರು. ಗಿರೀಶ್ ಕಾರ್ನಾಡರ `ನಾಗಮಂಡಲ' ನಾಟಕ್ಕೆ ಸಿನಿಮಾ ರೂಪ ಕೊಟ್ಟು ಕನ್ನಡ ಚಿತ್ರರಂಗದಲ್ಲಿ ಹೊಸ ಅಭಿರುಚಿಯನ್ನ ಹುಟ್ಟುಹಾಕಿದರು. ಪ್ರಕಾಶ್ ರೈ, ವಿಜಯಲಕ್ಷ್ಮಿ, ಸೇರಿದಂತೆ ಇತರರು ಈ ಚಿತ್ರದಲ್ಲಿ ಅಭಿನಯಿಸಿದ್ದರು.

ಸ್ನೇಹಜೀವಿ 'ಖೋಡೆ'

ಟಿ.ಎಸ್ ನಾಗಭರಣ ಹಾಗೂ ಸಿ.ಅಶ್ವತ್ಥ್ ಅಂದ್ರೆ ಶ್ರೀ ಹರಿ ಖೋಡೆ ಅವರಿಗೆ ತುಂಬಾ ಇಷ್ಟ ಹಾಗೂ ಇವರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು. ಇದ್ರಾ ಪರಿಣಾಮವೇ ಅನ್ಸುತ್ತೆ, ಖೋಡೆ ಅವರು ನಿರ್ಮಾಣ ಮಾಡಿದ ನಾಲ್ಕು ಚಿತ್ರಗಳಿಗೂ ಟಿ.ಎಸ್ ನಾಗಭರಣ ಅವರೇ ನಿರ್ದೇಶನ ಮಾಡಿದ್ದು, ಸಿ ಅಶ್ವತ್ಥ್ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.

ಬೆಳ್ಳಿತೆರೆ ಮೇಲೆ 'ಅಲ್ಲಮ'

ಶೂನ್ಯಪೀಠದ ಅಧ್ಯಕ್ಷ 'ಅಲ್ಲಮಪ್ರಭು' ಕುರಿತು ಸಿನಿಮಾ ಮಾಡಬೇಕು ಎಂಬ ಆಸೆಯನ್ನ ಖೋಡೆಯವರು ಇತ್ತೀಚಿಗೇ ನೆರವೇರಿಸಿಕೊಂಡಿದ್ದರು. 'ಅಲ್ಲಮ' ಎಂಬ ಹೆಸರಿನಲ್ಲೇ ಸಿನಿಮಾ ನಿರ್ಮಾಣ ಮಾಡಿದ್ದು, ಈ ಚಿತ್ರವನ್ನ ಕೂಡ ಟಿ.ಎಸ್ ನಾಗಭರಣ ಅವರ ನಿರ್ದೇಶನ ಮಾಡುತ್ತಿದ್ದರು. ಧನಂಜಯ್, ಮೇಘನಾ ರಾಜ್, ಸಂಚಾರಿ ವಿಜಯ್ ಸೇರಿದಂತೆ ಮುಂತಾದವರು ಅಲ್ಲಮ ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಅಲ್ಲಮ'ನನ್ನ ನೋಡುವ ಆಸೆ

ಸದ್ಯ, 'ಅಲ್ಲಮ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನ ರಿಲೀಸ್ ಮಾಡಿದ್ದ ಚಿತ್ರತಂಡ, ಆದಷ್ಟೂ ಬೇಗ ತೆರೆಗೆ ಬರುವ ಯೋಚನೆಯಲ್ಲಿತ್ತು. ಆದ್ರೆ, ಸಿನಿಮಾ ಬಿಡುಗಡೆಗೆ ಮುಂಚೆ ಖೋಡೆಯವರು ಇಹಲೋಕ ತ್ಯಜಿಸಿದ್ದಾರೆ.

ಮೂರು ಚಿತ್ರಗಳಿಗೂ ಪ್ರಶಸ್ತಿ

ವಿಶೇಷ ಅಂದ್ರೆ, ಶ್ರೀ ಹರಿ ಖೋಡೆಯವರು ನಿರ್ಮಾಣ ಮಾಡಿದ್ದ ಮೂರು ಚಿತ್ರಗಳು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಯನ್ನ ಗಳಿಸಿಕೊಂಡಿತ್ತು. ಈಗ 'ಅಲ್ಲಮ' ಚಿತ್ರವೂ ಪ್ರಶಸ್ತಿ ಗಳಿಸುತ್ತೆ ಎಂಬ ವಿಶ್ವಾಸವನ್ನ ನಿರ್ದೇಶಕ ಟಿ ಎಸ್ ನಾಗಭರಣ ವ್ಯಕ್ತಪಡಿಸಿದ್ದರು.

English summary
Film Producer, Industrialist, Srihari L.Khoday (77) passed away in Bengaluru on Monday night. He produced four movies and out of this three movies got award. Recently he produced movie called 'Allama', is yet to be release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada