For Quick Alerts
  ALLOW NOTIFICATIONS  
  For Daily Alerts

  ನಾಗಶೇಖರ್ 'ಮೈನಾ' ಕಲರ್ ಫುಲ್ ಸೆಂಚುರಿ

  By Rajendra
  |

  ಚಲನಚಿತ್ರ ನಿರ್ದೇಶಕ ನಾಗಶೇಖರ್ ಅವರ ಹ್ಯಾಟ್ರಿಕ್ ಕನಸು ನನಸಾಗಿದೆ. ಅವರ ನಿರ್ದೇಶನದ ಮೂರನೇ ಚಿತ್ರ ಶತಕ ಪೂರೈಸಿದೆ. ಈ ಹಿಂದೆ ಅವರ ಅರಮನೆ, ಸಂಜು ವೆಡ್ಸ್ ಗೀತಾ ಚಿತ್ರಗಳು ಸೆಂಚುರಿ ಭಾರಿಸಿದ್ದವು. ಈಗ ಮೈನಾ ಚಿತ್ರವೂ ಶತಕ ಪೂರೈಸಿದೆ.

  ವಜ್ರೇಶ್ವರಿ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಚೇತನ್ ಕುಮಾರ್, ಶರತ್ ಕುಮಾರ್ ಹಾಗೂ ನಿತ್ಯಾ ಮೆನನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಚಿತ್ರಮಂದಿರಗಳಲ್ಲಿ 'ಮೈನಾ' 50 ದಿನಗಳನ್ನು ಪೂರೈಸಿತ್ತು.

  ಈಗ ಬೆಂಗಳೂರಿನ ಸಾಗರ್, ವೀರೇಶ್, ಗೋಪಾಲನ್ ಮಾಲ್, ಪಿವಿಆರ್, ಓರಿಯನ್ ಮಾಲ್, ಐನಾಕ್ಸ್, ಮೈಸೂರಿನ ಶಾಂತಲಾ, ಪದ್ಮಾಂಜಲಿ ಹಾಗೂ ದಾವಣಗೆರೆಯಲ್ಲಿ ಚಿತ್ರ ಸೆಂಚುರಿ ಪೂರೈಸಿದೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ.

  ಮೈನಾ ಚಿತ್ರದ ಯಶಸ್ಸು ಪರಭಾಷಾ ಚಿತ್ರ ನಿರ್ಮಾಪಕರ ಗಮನವನ್ನೂ ಸೆಳೆದಿದೆ. ತೆಲುಗಿನಲ್ಲೂ ಈ ಚಿತ್ರವನ್ನು ರೀಮೇಕ್ ಮಾಡಲಾಗುತ್ತಿದೆ. ಆದರೆ ಮೂಲ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ತೆಲುಗಿನಲ್ಲಿ ಬದಲಾಯಿಸಲಾಗುತ್ತಿದೆ. (ಮೈನಾ ಚಿತ್ರ ವಿಮರ್ಶೆ ಓದಿ)

  ತೆಲುಗು ಚಿತ್ರದ ಬಳಿಕ ತಮಿಳು ಹಾಗೂ ಮಲಯಾಳಂನತ್ತಲೂ ಮೈನಾ ಚಿತ್ರ ಹಾರಲಿದೆ ಎನ್ನುತ್ತವೆ ಮೂಲಗಳು. ಪರಭಾಷಾ ಚಿತ್ರಗಳ ತೀವ್ರ ಪೈಪೋಟಿ ನಡುವೆ ಕನ್ನಡ ಚಿತ್ರಗಳು ಮುನ್ನುಗ್ಗುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. (ಏಜೆನ್ಸೀಸ್)

  English summary
  Nagashekhar directed Kannada film Myna completes colourful 100 days. The director has achieved the distinction of hat trick director. His Previous films 'Aramane' and 'Sanju Weds Geetha' also successfully completed 100 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X