For Quick Alerts
  ALLOW NOTIFICATIONS  
  For Daily Alerts

  ಅಪ್ಪು ಅಭಿಮಾನಿಗಳ ಆರ್ಭಟಕ್ಕೆ ಅಲುಗಾಡಿದ ಯೂಟ್ಯೂಬ್

  |

  ಅಪ್ಪು ಅಭಿಮಾನಿಗಳು ಕೊಡ್ತಿರುವ ಹಾವಳಿಗೆ ಯೂಟ್ಯೂಬ್ ಕೋಮಾ ತಲುಪಿದೆ. ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ.

  ಟ್ರೈಲರ್ ಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದ್ದು, ಅತಿ ಹೆಚ್ಚು ವೀಕ್ಷಣೆ ಕಂಡಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಎಷ್ಟು ವೀವ್ಸ್ ಆಗ್ತಿದೆ ಎಂಬುದನ್ನ ಲೆಕ್ಕವೇ ಹಾಕಲು ಸಾಧ್ಯವಾಗದಂತಹ ಸ್ಥಿತಿಗೆ ಯೂಟ್ಯೂಬ್ ತಲುಪಿದೆ.

  ಬಂದ ನೋಡೋ 'ನಟಸಾರ್ವಭೌಮ', ದಾಖಲೆಗಳೆಲ್ಲಾ ನೆಲಸಮ

  ಇದನ್ನ ಗಮನಿಸಿದ ಪವರ್ ಸ್ಟಾರ್ ಅಭಿಮಾನಿಗಳು, ಯೂಟ್ಯೂಬ್ ಕೋಮಾ ತಲುಪಿದೆ ಎಂದು ಕಾಲೆಳೆಯುತ್ತಿದ್ದಾರೆ. ಯೂಟ್ಯೂಬ್ ಕೋಮಾ ಸ್ಥಿತಿಯನ್ನ ತೋರಿಸುವಂತೆ ಟ್ರೋಲ್ ಮಾಡಲಾಗುತ್ತಿದೆ.

  ಸದ್ಯ, ನಟಸಾರ್ವಭೌಮ ಟ್ರೈಲರ್ ಒಂದು ಮಿಲಿಯನ್ ವೀಕ್ಷಣೆಯನ್ನ ದಾಟಿದೆಯಂತೆ. ಇದನ್ನ ಲಹರಿ ಸಂಸ್ಥೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಖಚಿತಪಡಿಸಿದೆ. ಅಷ್ಟೇ ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಆದ್ರೆ, ಯೂಟ್ಯೂಬ್ ನಲ್ಲಿ ಕೇವಲ 7 ಲಕ್ಷ ತೋರಿಸುತ್ತಿದೆ. ಹಾಗಾಗಿ, ಯೂಟ್ಯೂಬ್ ಗೆ ಕೋಮಾಗೆ ಹೋಗಿದೆ ಎಂದು ಹೇಳುತ್ತಿದ್ದಾರೆ.

  ಈ ಬಗ್ಗೆ ಪವನ್ ಒಡೆಯರ್ ಟ್ವೀಟ್ ಮಾಡಿದ್ದು, ಯೂಟ್ಯೂಬ್ ಕೋಮಾಗೆ ಹೋಗಿದೆ ಎಂದು ಅವರೇ ಹೇಳಿ ಹಾಸ್ಯಚಟಾಕಿ ಹಾರಿಸಿದ್ದರು. ಅಂದ್ಹಾಗೆ, ಯೂಟ್ಯೂಬ್ ಸ್ಟಕ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಯಜಮಾನ ಹಾಡು ಹಾಗೂ ಪೈಲ್ವಾನ್ ಟೀಸರ್ ವೇಳೆಯೂ ಇದೇ ರೀತಿ ಆಗಿತ್ತು. ಈಗ ಅಪ್ಪು ಅಭಿಮಾನಿಗಳ ಹಾವಳಿಗೆ ಯೂಟ್ಯೂಬ್ ಬಲಿಯಾಗಿದೆ.

  English summary
  Power Star Puneeth Rajkumar starring Natasaarvabhowma Trailer opened to excellent response. trailer reached 1 million views.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X