TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ನೆನಪಿರಲಿ ಪ್ರೇಮ್ ಜೀವನದಲ್ಲಿ 'ಜನವರಿ 30' ಮರೆಯಲಾಗದ ದಿನ
ಹೀರೋ ಆಗ್ಬೇಕು ಅಂತ ಇಂಡಸ್ಟ್ರಿಗೆ ಬಂದವರಿಗೆಲ್ಲ ಸಕ್ಸಸ್ ಸಿಗಲ್ಲ. ಒಂದೆರೆಡು ಸಕ್ಸಸ್ ಸಿಕ್ಕಿದ ತಕ್ಷಣ ಅವರು ಸ್ಟಾರ್ ಆಗಲ್ಲ. ಆ ಸಕ್ಸಸ್ ಮತ್ತು ಜನರ ಪ್ರೀತಿಯನ್ನ ವರ್ಷಗಳ ಕಾಲ ಕಾಪಾಡಿಕೊಂಡು ಬರುವ ಕಲಾವಿದನೇ ನಿಜವಾದ ಹೀರೋ ಅಥವಾ ಸ್ಟಾರ್. ಇಂತಹ ಹೀರೋ ನೆನಪಿರಲಿ ಪ್ರೇಮ್ ಗೆ ಇಂದು ಮರೆಯಲಾಗದ ದಿನ.
ಹೌದು, ಜನವರಿ 30ಕ್ಕೆ ಪ್ರೇಮ್ ಕುಮಾರ್ ಕನ್ನಡ ಸಿನಿಮಾ ರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿ 17 ವರ್ಷ ಆಗಿದೆ. ಪ್ರೇಮ್ ಹೀರೋ ಆಗಿ ಅಭಿನಯಿಸಿದ ಚೊಚ್ಚಲ ಸಿನಿಮಾ ಪ್ರಾಣ ಸೆಟ್ಟೇರಿದ್ದ ದಿನ ಇದು. ಖುಷಿ ನಿರ್ದೇಶನ ಮಾಡಿದ್ದ ಪ್ರಕಾಶ್ ಅವರು ನಿರ್ದೇಶನ ಮಾಡಿದ್ದ ಎರಡನೇ ಚಿತ್ರ ಇದು.
'ಸೆಲ್ಫಿ' ಸಹವಾಸ ಕೆಲವರಿಗೆ ಇಷ್ಟವಾಯ್ತು, ಕೆಲವರಿಗೆ ಕಿರಿಕಿರಿಯಾಯ್ತು
ಈ ಸಂತಸದ ಕ್ಷಣದ ಬಗ್ಗೆ ನೆನಪಿರಲಿ ಪ್ರೇಮ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ. ತಮ್ಮ ಹದಿನೇಳು ವರ್ಷ ಸೋಲು-ಗೆಲುವು, ನೋವು-ನಲಿವಿನಲ್ಲಿ ಜೊತೆಯಿದ್ದವರಿಗೆ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.
''#ಇಂದಿಗೆ ಕನ್ನಡ ಚಿತ್ರರಂಗಕ್ಕೆ ಪ್ರಾಣ ಚಿತ್ರದ ಹೀರೋ ಆಗಿ ನಾನು Entry ಕೊಟ್ಟು ಹದಿನೇಳು ವರ್ಷಗಳು. ನನ್ನನ್ನು ಆಶೀರ್ವದಿಸಿ ಹರಸಿ ಅಭಿಮಾನಿಸಿ ಪ್ರೀತಿಸಿ ಶ್ರೀರಕ್ಷೆ ಕೊಟ್ಟು ಕಾಪಾಡಿದ ಎಲ್ಲ ಕನ್ನಡದ ಮನುಸುಗಳಿಗೆ, ಚಿತ್ರರಂಗಕ್ಕೆ, ಮಾಧ್ಯಮ ಲೋಕಕ್ಕೆ ನನ್ನ ಕುಟುಂಬಕ್ಕೆ. ಸ್ನೇಹಿತರಿಗೆ. ಸೋತಾಗಲು ನನ್ನ ಕೈ ಹಿಡಿದು ಕಾಪಾಡಿದ ನನ್ನ ಅಭಿಮಾನಿಗಳಿಗೆ . ಕಷ್ಟದಲ್ಲಿನನ್ನ ಜೊತೆ ನಿಂತ ಎಲ್ಲ ಕನ್ನಡ ಪರ ಸಂಘಟನೆಗಳಿಗೆ. ನನ್ನ ಶಿರ ಸಾಷ್ಟಾಂಗ ನಮಸ್ಕಾರಗಳು. ನಿಮ್ಮ ಪ್ರೀತಿ ಅಭಿಮಾನ ಶ್ರಿರಕ್ಷೆ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ ನಿಮ್ಮ ನೆನಪಿರಲಿ ಪ್ರೇಮ್'' ಎಂದು ಬರೆದುಕೊಂಡಿದ್ದಾರೆ.
ಪ್ರಾಣ ಸಿನಿಮಾ ಅಷ್ಟಾಗಿ ಯಶಸ್ಸು ಕೊಟ್ಟಿಲ್ಲ. ನಂತರ ತೆರೆಕಂಡ ನೆನಪಿರಲಿ ಪ್ರೇಮ್ ಗೆ ಬ್ರೇಕ್ ನೀಡಿತು. ಈ ಚಿತ್ರದಿಂದ ಬರಿ ಪ್ರೇಮ್ ಆಗಿದ್ದವರು ನೆನಪಿರಲಿ ಪ್ರೇಮ್ ಆದರು. ಜೊತೆಜೊತೆಯಲಿ, ಪಲ್ಲಕ್ಕಿ, ಗುಣವಂತ, ಜೊತೆಗಾರ, ಚಾರ್ ಮಿನರ್, ಚಂದ್ರು ಅಂತಹ ಡಿಫ್ರೆಂಟ್ ಚಿತ್ರಗಳನ್ನ ಮಾಡಿದ್ರು.
ಈ ಜರ್ನಿಯಲ್ಲಿ ಕೆಲವು ಸೋಲುಗಳನ್ನ ಕೂಡ ಕಂಡರು. ಆದ್ರೆ, ಎಲ್ಲಿಯೂ ಹಿಂದೇಟು ಹಾಕದ ಪ್ರೇಮ್ ಹೊಸ ಹೊಸ ಪ್ರಯತ್ನದೊಂದಿಗೆ ಪ್ರೇಕ್ಷಕರೆದುರು ಬರ್ತಿದ್ದರು. ಅದರ ಪ್ರತಿಫಲವಾಗಿ ಇಂದು ಪ್ರೇಮ್ ಲವ್ಲಿ ಸ್ಟಾರ್ ಆಗಿದ್ದಾರೆ.
'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ ಕೊನಯೆದಾಗಿ ತೆರೆಕಂಡಿತ್ತು. ನೆನಪಿರಲಿ ಚಿತ್ರದ ಅಭಿನಯ ಹಾಗೂ ಚಾರ್ ಮಿನರ್ ನಟನೆಗಾಗಿ ಬೆಸ್ಟ್ ಆಕ್ಟರ್ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ.