For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕಲ್ಯಾಣ: ನಿಶ್ಚಿತಾರ್ಥದ ದಿನಾಂಕ ನಿಗದಿ ಮಾಡಿದ ಕುಟುಂಬ

  |
  ಕೊನೆಗೂ ರೇವತಿ ಜೊತೆ ಮಾತನಾಡಿದ್ರಂತೆ ನಿಖಿಲ್ | Nikhil Kumarswamy | Revathi | New movie Muhurtham

  ನಟ ನಿಖಿಲ್ ಕುಮಾರ್ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಫೆಬ್ರವರಿಗೆ ನಿಶ್ಚಿತಾರ್ಥ ಹಾಗೂ ಏಪ್ರಿಲ್ ನಲ್ಲಿ ಮದುವೆ ಮಾಡುವ ನಿರ್ಧಾರವನ್ನು ಎರಡು ಕುಟುಂಬಗಳು ತೆಗೆದುಕೊಂಡಿವೆ.

  ಇಂದು (ಜನವರಿ 30) ಕುಮಾರಸ್ವಾಮಿ ಮನೆಗೆ ವಧು ರೇವತಿ ಕುಟುಂಬ ಭೇಟಿ ನೀಡಿದ್ದರು. ಈ ವೇಳೆ ಮದುವೆ ಬಗ್ಗೆ ಮಾತುಕತೆ ನಡೆಸಿ ದಿನಾಂಕವನ್ನು ನಿಗದಿ ಮಾಡಲಾಗಿದೆ. ಕಳೆದ ಭಾನುವಾರ ವಧುವಿನ ಮನೆಗೆ ಕುಮಾರಸ್ವಾಮಿ ಕುಟುಂಬ ಭೇಟಿ ನೀಡಿತ್ತು.

  'ರೇವತಿ ನಂಗೆ ಪರ್ಫೆಕ್ಟ್ ಪಾರ್ಟ್ನರ್': ಮೊಟ್ಟ ಮೊದಲ ಬಾರಿಗೆ ಭಾವಿ ಪತ್ನಿ ಬಗ್ಗೆ ನಿಖಿಲ್ ಮಾತು.!'ರೇವತಿ ನಂಗೆ ಪರ್ಫೆಕ್ಟ್ ಪಾರ್ಟ್ನರ್': ಮೊಟ್ಟ ಮೊದಲ ಬಾರಿಗೆ ಭಾವಿ ಪತ್ನಿ ಬಗ್ಗೆ ನಿಖಿಲ್ ಮಾತು.!

  ಕಾರ್ಯಕ್ರಮದ ನಂತರ ನಿಖಿಲ್ ಕುಮಾರ್ ನಿಶ್ಚಿತಾರ್ಥ ಹಾಗೂ ತಮ್ಮ ಮದುವೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

  ಫೆಬ್ರವರಿ 10ಕ್ಕೆ ನಿಶ್ಚಿತಾರ್ಥ

  ಫೆಬ್ರವರಿ 10ಕ್ಕೆ ನಿಶ್ಚಿತಾರ್ಥ

  ಫೆಬ್ರವರಿ 10 ರಂದು ನಿಖಿಲ್ ಹಾಗೂ ರೇವತಿ ನಿಶ್ಚಿತಾರ್ಥ ನಡೆಯಲಿದೆ. ಇಂದು (ಜನವರಿ 30) ಎಂಗೇಜ್ ಮೆಂಟ್ ದಿನಾಂಕವನ್ನು ಕುಟುಂಬ ನಿರ್ಧಾರ ಮಾಡಿದೆ. ನಿಶ್ಚಿತಾರ್ಥ ಬೆಂಗಳೂರಿನಲ್ಲಿಯೇ ನಡೆಯುವ ಸಾಧ್ಯತೆ ಹೆಚ್ಚಿದೆ. ಆದರೆ, ಇನ್ನು ಸ್ಥಳದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

  ಏಪ್ರಿಲ್ ಗೆ ಮದುವೆ

  ಏಪ್ರಿಲ್ ಗೆ ಮದುವೆ

  ನಿಶ್ಚಿತಾರ್ಥದ ಎರಡು ತಿಂಗಳ ನಂತರ ಮದುವೆ ಕಾರ್ಯಕ್ರಮ ನಡೆಯಲಿದೆ. ಏಪ್ರಿಲ್ ನಲ್ಲಿ ನಿಖಿಲ್ ಕಲ್ಯಾಣೋತ್ಸವ ಜರುಗಲಿದೆ ಎನ್ನುವ ಸುದ್ದಿ ಇದೆ. ಆದರೆ, ಈ ಬಗ್ಗೆ ಕುಟುಂಬ ಮೂಲಗಳು ತಿಳಿಸಿಲ್ಲ. ಆದರೆ, ಮದುವೆ ಬಗ್ಗೆ ಮಾತನಾಡಿದ ನಿಖಿಲ್ ತಂದೆಯ ಕನಸಿನಂತೆ ಮದುವೆ ನಡೆಯಲಿದೆ ಎಂದಿದ್ದಾರೆ.

  Big Breaking: ಗಣರಾಜ್ಯದಿನವೆ ಸ್ಟೇಟಸ್ ಬದಲಾಯಿಸಿಕೊಂಡ ನಟ ನಿಖಿಲ್, ಇಂದು ನಿಶ್ಚಿತಾರ್ಥBig Breaking: ಗಣರಾಜ್ಯದಿನವೆ ಸ್ಟೇಟಸ್ ಬದಲಾಯಿಸಿಕೊಂಡ ನಟ ನಿಖಿಲ್, ಇಂದು ನಿಶ್ಚಿತಾರ್ಥ

  ರೇವತಿ ಜೊತೆ ನಿಖಿಲ್ ಮಾತು

  ರೇವತಿ ಜೊತೆ ನಿಖಿಲ್ ಮಾತು

  ನಿನ್ನೆ ಮೊದಲ ಬಾರಿಗೆ ರೇವತಿ ಜೊತೆಗೆ ನಿಖಿಲ್ ಮಾತನಾಡಿದ್ದಾರಂತೆ. ಒಂದು ಗಂಟೆಗಳ ಕಾಲ ಭಾವಿ ಪತ್ನಿ ಜೊತೆ ಯುವರಾಜ ಕುಮಾರ ಮಾತನಾಡಿದ್ದಾರೆ. 'ಜಾಗ್ವರ್' ಹಾಗೂ 'ಸೀತಾರಾಮ ಕಲ್ಯಾಣ' ಸಿನಿಮಾಗಳನ್ನು ಚಿತ್ರಮಂದಿರದಲ್ಲೇ ನೋಡಿದ್ದೆ ಎಂದು ರೇವತಿ ಹೇಳಿದಾಗ ನಿಖಿಲ್ ಗೆ ಆಶ್ಚರ್ಯದ ಜೊತೆಗೆ ಖುಷಿ ಆಯಿತಂತೆ.

  ರೇವತಿ ಬಗ್ಗೆ

  ರೇವತಿ ಬಗ್ಗೆ

  ವಧು ರೇವತಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಅವರ ಸಹೋದರನ ಪುತ್ರ. ಮಂಜುನಾಥ್ ಎನ್ನುವವರ ಮೊದಲ ಮಗಳು. ಎಂ.ಸಿ.ಎ ಓದಿರುವ ರೇವತಿ ಚಲನಚಿತ್ರ ರಂಗ ಮತ್ತು ರಾಜಕೀಯ ರಂಗದಿಂದ ದೂರ ಉಳಿದಿದ್ದಾರೆ. ರೇವತಿ ತುಂಬ ಸೂಕ್ಷ್ಮ ಹುಡುಗಿ ಎಂದು ನಿಖಿಲ್ ಹೇಳಿದ್ದಾರೆ.

  English summary
  Kannada actor Nikhil Kumar and Revathi engagement held on February 10th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X