»   » ಲೈಂಗಿಕ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವ ನಿರ್ಭಯ

ಲೈಂಗಿಕ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವ ನಿರ್ಭಯ

Posted By:
Subscribe to Filmibeat Kannada

ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವ ಕಿರುಚಿತ್ರ 'ನಿರ್ಭಯ'ವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹೆಚ್.ಡಿ. ಗಂಗರಾಜು ಅವರು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದರು.

ಸರ್ಕಾರದ ಪರವಾಗಿ ಇದನ್ನು ಸ್ವೀಕರಿಸಿದ ನಂತರ ಗೃಹ ಸಚಿವ ಕೆ. ಜೆ. ಜಾರ್ಜ್ ಅವರು ಮಾತನಾಡಿ ಈ ಕಿರುಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ಖ್ಯಾತ ನಟ ನಟಿಯರು ಈ ಚಿತ್ರದಲ್ಲಿ ಸಾರ್ವಜನಿಕರಿಗೆ ಸಂದೇಶ ನೀಡಿದ್ದಾರೆ. [ಖ್ಯಾತ ನಿರ್ದೇಶಕ ದೊರೈ ಭಗವಾನ್ ಮುಡಿಗೆ ಹೊಸ ಗರಿ]

ಸಮಾಜದಲ್ಲಿ ಅಪರಾಧಿಗಳು ವಿಕೃತ ಕಾಮಿಗಳು, ಮೃಗೀಯ ಮನಸ್ಸುಳ್ಳವರು, ತಲೆಯೆತ್ತಿ ನಡೆಯದಂತಹ ವಾತಾವರಣವನ್ನು ಸೃಷ್ಟಿಸಬೇಕು. ಅಪರಾಧವಾಗದಂತೆ ತಡೆಯಬೇಕು ಇದು ಎಲ್ಲರ ಕರ್ತವ್ಯ. ಈ ಕಿರುಚಿತ್ರವನ್ನು ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ನಿಟ್ಟಿನಲ್ಲಿ ವಾರ್ತಾ ಸಚಿವರು ಕ್ರಮ ಕೈಗೊಳ್ಳುವರು ಎಂದು ತಿಳಿಸಿದರು.

Nirbhaya documentary relased

ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್. ರೋಷನ್‌ಬೇಗ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್. ವಿ. ರಾಜೇಂದ್ರಸಿಂಗ್ ಬಾಬು, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಜಂಟಿ ಆಯುಕ್ತ ಅಲೋಕ್‌ಕುಮಾರ್ ಈ ಚಿತ್ರದ ನಿರ್ದೇಶಕ ದೊರೆ ಭಗವಾನ್. ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ವಾರ್ತಾ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರು ಉಪಸ್ಥಿತರಿದ್ದರು.

ಈ ಚಿತ್ರದಲ್ಲಿ ಖ್ಯಾತ ತಾರೆಯರಾದ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಉಪೇಂದ್ರ, ಯಶ್, ಗಣೇಶ್, ಸಾಧು ಕೋಕಿಲ, ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ, ಭವ್ಯಾ, ಅಮೂಲ್ಯಾ, ಪೂಜಾ ಗಾಂಧಿ ಮತ್ತಿತರರು ಈ ಕಿರುಚಿತ್ರದಲ್ಲಿ ಭಾಗವಹಿಸಿ ಜಾಗೃತಿಯ ಸಂದೇಶ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಗೃಹ ಇಲಾಖೆ ಕೈಗೊಂಡಿರುವ ಕ್ರಮಗಳ ಮಾಹಿತಿಯೊಂದಿಗೆ ವಾಣಿಜ್ಯ ಮಂಡಳಿಯ ವತಿಯಿಮದ ಪ್ರತ್ಯೇಕ ಚಿತ್ರ ನಿರ್ಮಿಸಲಾಗುವುದು ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷರು ಪ್ರಕಟಿಸಿದರು. ಹತ್ತು ನಿಮಿಷಗಳ ಕಾಲಾವಧಿಯ ಈ ಕಿರುಚಿತ್ರದಲ್ಲಿ 30 ಮಂದಿ ತಾರೆಗಳು "ಸಿಡಿದೇಳಿ, ಭಯ ಬಿಡಿ" ಎನ್ನುತ್ತಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ನಿರ್ಮಿಸಲಾದ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸುವ ಕಿರುಚಿತ್ರ 'ನಿರ್ಭಯ'ವನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜ್ ಅವರು ಗೃಹ ಸಚಿವ ಕೆ.ಜೆ. ಜಾರ್ಜ್ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್. ರೋಷನ್ ಬೇಗ್ ಅವರಿಗೆ ಶುಕ್ರವಾರ ಹಸ್ತಾಂತರಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು, ಚಿತ್ರದ ನಿರ್ದೇಶಕ ದೊರೆ-ಭಗವಾನ್ ಉಪಸ್ಥಿತರಿದ್ದರು. (ಫಿಲ್ಮಿಬೀಟ್ ಕನ್ನಡ)

English summary
Nirbhaya, a 10-minute documentary, directed by S.K. Bhagawan (of the Dore-Bhagawan fame), produced by the Karnataka Film Chamber of Commerce (KFCC) released on 5th December, 2015. Almost all actors of the Sandalwood have voiced their concern and offered solutions to stop rape and sexual harassment of women and children in this documentary.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada