»   » ಕನ್ನಡ ಚಿತ್ರರಂಗದ ಸೀಕ್ರೆಟ್ ಬಿಚ್ಚಿಟ್ಟ ರಾಕ್ ಲೈನ್.!

ಕನ್ನಡ ಚಿತ್ರರಂಗದ ಸೀಕ್ರೆಟ್ ಬಿಚ್ಚಿಟ್ಟ ರಾಕ್ ಲೈನ್.!

Posted By:
Subscribe to Filmibeat Kannada

ನಟ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಈಗ ಸ್ಯಾಂಡಲ್ ವುಡ್ ಗಿಂತ ಹೆಚ್ಚಾಗಿ ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಬಿಜಿಯಾಗಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ 'ಲಿಂಗಾ' ದಂತಹ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡಿದ್ದ ರಾಕ್ ಲೈನ್ ವೆಂಕಟೇಶ್ ಈಗ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ಈ ಮಧ್ಯೆ ನಿರ್ಮಾಪಕರು ಮತ್ತು ಕಲಾವಿದರ ನಡುವಿನ ಬಿಕ್ಕಟ್ಟಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ಗುರುತಿಸಿಕೊಂಡಿರುವ ರಾಕ್ ಲೈನ್ ಇಂದು ಕನ್ನಡದ ಪ್ರಸಿದ್ಧ ದಿನಪ್ರತಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ.

ಕನ್ನಡ ಚಿತ್ರರಂಗದ ಸ್ಟಾರ್ ಗಳು, ಮಾರ್ಕೆಟ್-ಡಿಮ್ಯಾಂಡ್ ಬಗ್ಗೆ ಸ್ಟಾರ್ ಗಳು ನೋಡುವ ಧಾಟಿ ಮತ್ತು ಇತ್ತೀಚಿನ ಗದ್ದಲ-ಗಲಾಟೆ ಬಗ್ಗೆ ರಾಕ್ ಲೈನ್ ವೆಂಕಟೇಶ್ ಮನಬಿಚ್ಚಿ ಮಾತನಾಡಿದ್ದಾರೆ.

ಅಲ್ಲದೇ, ಮಲ್ಟಿ ಸ್ಟಾರರ್ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ ಅನ್ನುವ ದೊಡ್ಡ ಸೀಕ್ರೆಟ್ ನ ಬಿಟ್ಟುಕೊಟ್ಟಿದ್ದಾರೆ. ಮುಂದೆ ಓದಿ.....

ಕನ್ನಡದಲ್ಲಿ ಮಲ್ಟಿ ಸ್ಟಾರರ್ ಚಿತ್ರಗಳನ್ನ ನೋಡಿದ್ದೀರಾ?

ಕನ್ನಡದಲ್ಲಿ ಮಲ್ಟಿ ಸ್ಟಾರರ್ ಚಿತ್ರಗಳು ಬಂದು ವರ್ಷಗಳೇ ಉರುಳಿವೆ. ವಿಶೇಷ ಪಾತ್ರಗಳಲ್ಲಿ ಸ್ಟಾರ್ ನಟರು ಕಾಣಿಸಿಕೊಳ್ಳುವುದು ಬಿಟ್ಟರೆ, ಇತ್ತೀಚೆಗೆ ಒಂದೇ ಚಿತ್ರದಲ್ಲಿ ಇಬ್ಬರು-ಮೂವರು ಬಿಗ್ ಸ್ಟಾರ್ ಗಳು ಪೂರ್ಣ ಪ್ರಮಾಣದಲ್ಲಿ ಮಿಂಚಿಲ್ಲ. ಒಂದ್ಕಾಲದಲ್ಲಿ, ರಿಯಲ್ ಸ್ಟಾರ್ ಉಪೇಂದ್ರ-ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಪ್ರೀತ್ಸೇ' ಚಿತ್ರದಲ್ಲಿ ಒಂದಾಗಿದ್ದರು. ವಿಷ್ಣುವರ್ಧನ್-ರವಿಚಂದ್ರನ್ 'ಯಾರೇ ನೀನು ಚೆಲುವೆ' ಅಂದಿದ್ದರು. ಅಂಬಿ-ವಿಷ್ಣು ತೆರೆಮೇಲೆ ಕುಚ್ಚಿಕ್ಕು ಹಾಡಿದ್ದರು. ಈಗ ಇಂತಹ ಪ್ರಯತ್ನ ಯಾಕೆ ಆಗುತ್ತಿಲ್ಲಾ.? ಕಲಾವಿದರಲ್ಲಿ ಒಗ್ಗಟ್ಟಿಲ್ಲವಾ? ಅನ್ನುವ ಪ್ರಶ್ನೆ ಗಾಂಧಿನಗರದಲ್ಲಿ ಎದ್ದಿದೆ.

ಉದಯವಾಣಿಗೆ ಸಂದರ್ಶನ

ಕಲಾವಿದರಲ್ಲಿನ ಒಗ್ಗಟ್ಟು, ನಿರ್ಮಾಪಕರ ಜಗಳ ಸೇರಿದಂತೆ ಹಲವಾರು ಪ್ರಶ್ನೆಗಳನ್ನಿಟ್ಟುಕೊಂಡು 'ಉದಯವಾಣಿ' ದಿನಪತ್ರಿಕೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರೊಂದಿಗೆ ಸಂದರ್ಶನ ನಡೆಸಿದೆ. ಅದರಲ್ಲಿ ಮಲ್ಟಿ ಸ್ಟಾರರ್ ಚಿತ್ರಗಳು ಕನ್ನಡದಲ್ಲಿ ಯಾಕೆ ಆಗುತ್ತಿಲ್ಲ ಅನ್ನುವ ಕುರಿತು ರಾಕ್ ಲೈನ್ ಸೀಕ್ರೆಟ್ ಹೇಳಿದ್ದಾರೆ.

ಸೀಕ್ರೆಟ್ ಬಿಟ್ಟುಕೊಟ್ಟ ರಾಕ್ ಲೈನ್ ವೆಂಕಟೇಶ್

ಸಂದರ್ಶನದ ವೇಳೆ 'ಕನ್ನಡದಲ್ಲಿ ಮಲ್ಟಿ ಸ್ಟಾರರ್ ಸಿನಿಮಾ ಕಡಿಮೆಯಾಗಿದೆ. ಯಾಕೆ ಹೀಗೆ? ನೀವು ಈ ಹಿಂದೆ ಈ ಪ್ರಯತ್ನ ಮಾಡಿ ಗೆದ್ದಿದ್ದೀರಿ' ಅಂತ ತೂರಿ ಬಂದ ಪ್ರಶ್ನೆಗೆ ರಾಕ್ ಲೈನ್ ವೆಂಕಟೇಶ್ ಕೊಟ್ಟ ಉತ್ತರ - ''ಈಗ ಆಗಲ್ಲ. ಚಾನ್ಸೇ ಇಲ್ಲ. ಒಂದು ಸೀಕ್ರೆಟ್ ಹೇಳ್ತೀನಿ. ಮಲ್ಟಿ ಸ್ಟಾರರ್ ಸಿನಿಮಾ ಯಾವಾಗ ಆಗುತ್ತೆ ಅಂದ್ರೆ ನಾವು ಯಾರನ್ನು ಅಂದುಕೊಂಡಿರುತ್ತೇವೋ ಅವರ ಮಾರ್ಕೆಟ್ ಕಡಿಮೆ ಆಗಿರಬೇಕು. ಟಾಪ್ ನಲ್ಲಿದ್ದಾಗ ಯಾರೂ ಮಲ್ಟಿ ಸ್ಟಾರರ್ ಸಿನಿಮಾ ಮಾಡೋಕೆ ಒಪ್ಪಲ್ಲ. ಇನ್ನೊಂದ್ ಕೈ ಬೇಕು ಅಂತ ಇಬ್ಬರಿಗೂ ಅನ್ನಿಸಬೇಕು. ಆಗಲೇ ಅವರು ಕೈ ಜೋಡಿಸೋದು. ಇಲ್ಲಾಂದ್ರೆ ಜೋಡಿಸಲ್ಲ. ಇದು ಸ್ವಾಭಿಮಾನಾನೋ ಏನೋ ನಂಗೆ ಗೊತ್ತಿಲ್ಲ.''

'ಎಲ್ಲರೂ ತಿಳ್ಕೊಂಡು ಸಿನಿಮಾ ಮಾಡ್ಬೇಕು'

''ನಾನು ಗಮನಿಸಿದಂತೆ ಸಿನಿಮಾ ವೃತ್ತಿ ಗೊತ್ತಿಲ್ಲದೇ ಇರೋ ನಿರ್ಮಾಪಕರು, ನಾಲೆಜ್ ಇರದೇ ಇರೋ ನಿರ್ಮಾಪಕರು, ಬೇರೆ ಬೇರೆ ವ್ಯಾಪಾರ ಮಾಡ್ತಿದ್ದೋರು ಇಲ್ಲಿಗೆ ಬಂದಿದ್ದಾರೆ. ಅವರನ್ನು ಬರಬಾರದು ಅಂತ ಹೇಳ್ಳೋದು ತಪ್ಪು. ಆದರೆ ತಿಳ್ಕೊಂಡು ಸಿನಿಮಾ ಮಾಡಬೇಕು. ನಾವು ಯಾವುದಾದರೂ ವ್ಯಾಪಾರ ಮಾಡಬೇಕು ಅಂತಂದುಕೊಂಡಾಗ ತಿಳ್ಕೊಂಡು ಮಾಡುತ್ತೇವೆ. ಆದರೆ ಇಲ್ಲಿ ಕೋಟ್ಯಂತರ ರೂಪಾಯಿ ಕುರುಡಾಗಿ ಹಾಕಿ ಸಿನಿಮಾ ಮಾಡುತ್ತಾರೆ.'' - ರಾಕ್ ಲೈನ್ ವೆಂಕಟೇಶ್ [ಮಂಡ್ಯದ ಗಂಡು ಅಂಬಿಗೆ ಭಾರಿ ಮುಖಭಂಗ]

ಸಮಸ್ಯೆ ಎಲ್ಲಿಂದ ಆರಂಭ ಆಯ್ತು?

''ಹಿಂದೆ ಎಲ್ಲವೂ ಸಿಸ್ಟಮ್ಯಾಟಿಕ್ ಆಗಿ ನಡೆಯುತ್ತಿತ್ತು. ಒಬ್ಬ ಹೀರೋ ಒಂದು ಕೋಟಿ ತೆಗೆದುಕೊಳ್ಳುವವ 70 ಲಕ್ಷ ತಗೋತಿದ್ದರು. ಯಾಕೆ ಅಂದ್ರೆ ದುಡ್ಡು ಹಾಕಿ ಸಿನಿಮಾ ಮಾಡಿದ ನಿರ್ಮಾಪಕನಿಗೆ ನಷ್ಟ ಆಗದೇ ಇರಲಿ ಅಂತ. ಎಲ್ಲಾ ಹೀರೋಗಳಿಗೂ ಈ ಭಾವನೆ ಇತ್ತು. ಎಲ್ಲರೂ ನಮಗೆ ಸ್ಪಂದಿಸ್ತಾ ಇದ್ರು. ಆದ್ರೆ ಆಮೇಲೆ ಬಂದ ಹೊಸಬರು ದೊಡ್ಡ ಸ್ಟಾರ್ ಸಿನಿಮಾ ಮಾಡಬೇಕು ಅಂತ ಪ್ರಯತ್ನ ಪಡ್ತಾರೆ. ಅವರ ಮಾರ್ಕೆಟ್ ಗಿಂತ ಜಾಸ್ತಿ ದುಡ್ಡು ಕೊಡೋಕೆ ಹೋಗ್ತಾರೆ. ಒಬ್ಬ ಸ್ಟಾರ್‌ ತಾನು ಬೇರೆಡೆ ಕಮಿಟ್ ಆಗಿದೀನಿ ಅಂದರೂ ಬಿಡಲ್ಲ. ಸಂಭಾವನೆ ಜಾಸ್ತಿ ಮಾಡ್ತಾನೇ ಹೋಗ್ತಾರೆ.'' - ರಾಕ್ ಲೈನ್ ವೆಂಕಟೇಶ್ [ರೆಬೆಲ್ ಸ್ಟಾರ್ ಅಂಬರೀಶ್ ತಂಟೆಗೆ ಬಂದ್ರೆ...ಹುಷಾರ್..!]

ಸ್ಟಾರ್ ಗಳನ್ನ ಕೆಡಿಸಿದ್ದು ನಿರ್ಮಾಪಕರೇ..!

''ನಾವೇ ನಿರ್ಮಾಪಕರು ಸ್ಟಾರ್‌ ಗಳನ್ನು ಕೆಡಿಸಿದ್ವಿ. ನಂಗೆ ಅಮ್ಮ ಪಾರ್ವತಮ್ಮ ರಾಜ್‌ಕುಮಾರ್‌ ಹೇಳ್ತಿದ್ರು. ಅಣ್ಣಾವ್ರು 10 ಸಾವಿರ ರೂ.ತಗೋಬೇಕಾದಲ್ಲಿ ಆರು ಅಥವಾ ಏಳು ಸಾವಿರ ರೂ. ತಗೋತಿದ್ರು. ಒಂದು ಲಕ್ಷ ರೂ. ಇದ್ದಾಗ 60 ಸಾವಿರ ಅಥವಾ 70 ಸಾವಿರ ರೂ. ತಗೋತಿದ್ರು. ಇನ್ನೊಬ್ಬ ಜಾಸ್ತಿ ಕೊಡ್ತೀನಿ ಅಂದ್ರೆ ಸಾಕಪ್ಪಾ, ಇಷ್ಟೇ ಸಾಕು ಅನ್ನುತ್ತಿದ್ದರಂತೆ. ಸ್ಟಾರ್‌ಗಳು ಹೀಗಿದ್ದರೆ ನಿರ್ಮಾಪಕರಿಗೆ ರಿಲ್ಯಾಕ್ಸ್ ಆಗಿ ಒಳ್ಳೆ ಸಿನಿಮಾ ಮಾಡೋಕೆ ಸಾಧ್ಯ ಆಗತ್ತೆ. ಕಲಾವಿದರಿಗೆ ವ್ಯಾಪಾರಿ ಬುದ್ಧಿ ಬಂದರೆ, ನಿರ್ಮಾಪಕನೂ ವ್ಯಾಪಾರಿ ಬುದ್ಧಿ ತೋರಿಸ್ತಾನೆ. ಅವರಂತೂ ವ್ಯಾಪಾರಕ್ಕೆ ಬಂದೋರು ಅಲ್ವೇ. ಹೀಗಾದಾಗ ಕೆಟ್ಟ ಪ್ರಾಡಕ್ಟು ರೆಡಿಯಾಗುತ್ತದೆ.'' - ರಾಕ್ ಲೈನ್ ವೆಂಕಟೇಶ್ [ರಜನಿಕಾಂತ್ ಬಗ್ಗೆ ರಾಕ್ ಲೈನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]

ಈಗ ಸುಂಟರಗಾಳಿ ಎದ್ದಿದೆ..!

''ಈಗ ಸುಂಟರಗಾಳಿ ಎದ್ದಿದೆ. ಅದರೆದುರಿಗೆ ನಿಲ್ಲೋ ಶಕ್ತಿ ನಮಗೆ ದೇವರು ಕೊಟ್ಟಿಲ್ಲ. ಸುಂಟರಗಾಳಿ ಪಾಸಾಗ್ಲಿ. ಸ್ವಲ್ಪ ಕ್ಲೀನ್ ಆಗ್ಲಿ. ಕ್ಲೀನ್ ಆಗೇ ಆಗತ್ತೆ.'' ಅಂತ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ. ಉದಯವಾಣಿ ದಿನಪತ್ರಿಕೆಗೆ ರಾಕ್ ಲೈನ್ ನೀಡಿರುವ ಸಂದರ್ಶನದ ಲಿಂಕ್ ಇಲ್ಲಿದೆ.

ಮೂಕ ಪ್ರೇಕ್ಷಕ..!

ಸಂದರ್ಶನದಲ್ಲಿ ರಾಕ್ ಲೈನ್ ವೆಂಕಟೇಶ್ ಹೇಳಿರುವುದನ್ನ ನೋಡಿದರೆ, ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ. ಕಲಾವಿದರಿಗೆ ಸ್ವಾಭಿಮಾನ ಮುಖ್ಯ ಅನ್ನೋದು ಪಕ್ಕಾ. ಬೇಡದ ಕಾರಣಕ್ಕೆ ಈಗ ಸ್ಯಾಂಡಲ್ ವುಡ್ ನಲ್ಲಿ ವಿವಾದ ಎದ್ದಿದೆ. ಸುಂಟರಗಾಳಿಯಿಂದ ಎಲ್ಲವೂ ಕ್ಲೀನ್ ಆಗುತ್ತೆ ಅಂತ ಹೇಳಿರುವ ರಾಕ್ ಲೈನ್ ವೆಂಕಟೇಶ್, ಈಗ ಹತ್ತಿಕೊಂಡಿರುವ ಬೆಂಕಿಯನ್ನ ನೋಡುತ್ತಾ ಮೂಕ ಪ್ರೇಕ್ಷಕನಾಗಿದ್ದಾರೆ.

English summary
In an interview with the leading daily, Kannada Film Producer Rockline Venkatesh has revealed the secret as to why Multi-Starrer movies cannot be made in Kannada Film Industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada