»   » 'ಬೆತ್ತನಗೆರೆ' ಚಿತ್ರ ಬಿಡುಗಡೆ ಇನ್ನು ನಿರಾಳ

'ಬೆತ್ತನಗೆರೆ' ಚಿತ್ರ ಬಿಡುಗಡೆ ಇನ್ನು ನಿರಾಳ

Posted By:
Subscribe to Filmibeat Kannada

ನೆಲಮಂಗಲದ ರಿಯಲ್ ರೌಡಿಶೀಟರ್ ಬೆತ್ತನಗೆರೆ ಸೀನ ಮತ್ತು ಬೆತ್ತನಗೆರೆ ಶಂಕ್ರ ಅವರ ರಕ್ತ ಚರಿತ್ರೆ ಆಧರಿಸಿರುವ ಸಿನಿಮಾ 'ಬೆತ್ತನಗೆರೆ'. ರಿಲೀಸ್ ಗೆ ರೆಡಿಯಾಗಿರುವ 'ಬೆತ್ತನಗೆರೆ' ಚಿತ್ರಕ್ಕೆ ಇನ್ನು ಯಾವುದೇ ಕಂಟಕ ಇಲ್ಲ ಅನ್ನೋದು ಈಗ ಲಭ್ಯವಾಗಿರುವ ಲೇಟೆಸ್ಟ್ ಮಾಹಿತಿ.

'ಬೆತ್ತನಗೆರೆ' ಚಿತ್ರವನ್ನ ನಾವು ಮೊದಲು ನೋಡಬೇಕು ಅಂತ ಸೀನನ ಸಹೋದರ ಶಂಕ್ರ ಮತ್ತು ಸೀನನ ತಾಯಿ ಹಠ ಹಿಡಿದಿದ್ದರು. ಅದಕ್ಕಾಗಿ ವಿಶೇಷ ಪ್ರದರ್ಶನವನ್ನ ಇತ್ತೀಚೆಗಷ್ಟೇ ಚಿತ್ರತಂಡ ಹಮ್ಮಿಕೊಂಡಿತ್ತು. ['ಬೆತ್ತನಗೆರೆ' ಚಿತ್ರಕ್ಕೆ ಎದುರಾಗಿದೆ ಹೊಸ ಸಂಕಷ್ಟ]

bettanagere

ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಬೆತ್ತನಗೆರೆ ಶಂಕ್ರ ಸೇರಿದಂತೆ ನೆಲಮಂಗಲದ ಹಲವು ಹುಡುಗರು ಮತ್ತು ಸೀನನ ಕುಟುಂಬಸ್ಥರು ಭಾಗವಹಿಸಿದ್ದರು. 'ಬೆತ್ತನಗೆರೆ' ಚಿತ್ರ ನೋಡಿ ಎಲ್ಲರು ಕಣ್ಣೀರು ಹಾಕಿದ್ದು ಇಲ್ಲಿಯವರೆಗೂ ಭುಗಿಲೆದ್ದಿದ್ದ ವಿವಾದಕ್ಕೆ ಸಿಕ್ಕ ಕ್ಲೈಮ್ಯಾಕ್ಸ್.! ['ಬೆತ್ತನಗೆರೆ' ಚಿತ್ರ ಬಿಡುಗಡೆಗೆ ಹೊಸ ತಲೆನೋವು]

''ಸಿನಿಮಾ ನೋಡಿ ಎಲ್ಲರೂ ಖುಷಿ ಪಟ್ಟರು. ನಾವು ನೀಡಿದ್ದ ಮೆಸೇಜ್ ನೋಡಿ ಎಲ್ಲರೂ ಕಣ್ಣೀರು ಹಾಕಿದರು. ಸಿನಿಮಾದಲ್ಲಿ ನಾವು ಯಾರಿಗೂ ಅವಹೇಳನ ಮಾಡಿಲ್ಲ. ಚೆನ್ನಾಗಿದೆ ಅಂತ ಎಲ್ಲರೂ ಹೇಳಿದ್ದಾರೆ. ಬಿಡುಗಡೆಗೆ ಇನ್ನೂ ಯಾವುದೇ ಸಮಸ್ಯೆ ಇಲ್ಲ'' ಅಂತ ಸಂತಸ ವ್ಯಕ್ತಪಡಿಸಿದರು 'ಬೆತ್ತನಗೆರೆ' ಚಿತ್ರದ ನಿರ್ದೇಶಕ ಮೋಹನ್.

ಎಲ್ಲಾ ವಿವಾದಗಳಿಂದ ಮುಕ್ತಿ ಪಡೆದಿರುವ 'ಬೆತ್ತನಗೆರೆ' ಚಿತ್ರ ಸದ್ಯದಲ್ಲೇ ರಿಲೀಸ್ ಆಗಲಿದೆ. ಸುಮಂತ್ ಶೈಲೇಂದ್ರ, 'ಸಿಲ್ಕ್' ಖ್ಯಾತಿಯ ಅಕ್ಷಯ್, ವಿನೋದ್ ಕಾಂಬ್ಳಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಈ 'ಬೆತ್ತನಗೆರೆ'.

English summary
All hurdels are cleared for Kannada movie 'Bettanagere' release. Rowdysheeter Bettanagere Seena's Brother has watched the movie and appreciated. Akshay, Sumanth Shailendra starrer 'Bettanagere' will hit the screens shortly.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada