For Quick Alerts
  ALLOW NOTIFICATIONS  
  For Daily Alerts

  ಎರಡನೇ ಬಾರಿ ಬಿಡುಗಡೆಯಾಗಲಿದೆ 'ಒಂಥರಾ ಬಣ್ಣಗಳು' ಸಿನಿಮಾ

  By Naveen
  |

  ಕಳೆದ ಶುಕ್ರವಾರ ಬಿಡುಗಡೆಯಾಗಿದ್ದ ಸಿನಿಮಾಗಳಲ್ಲಿ 'ಒಂಥರಾ ಬಣ್ಣಗಳು' ಕೂಡ ಒಂದಾಗಿತ್ತು. ಆದರೆ, ಈಗಾಗಲೇ ರಿಲೀಸ್ ಆಗಿರುವ ಈ ಸಿನಿಮಾ ಮತ್ತೆ ಎರಡನೇ ಬಾರಿ ರಿಲೀಸ್ ಆಗಲಿದೆ. ಈ ಸುದ್ದಿ ಕೊಂಚ ಗೊಂದಲ ಎನ್ನಿಸಿರೂ ಇದು ನಿಜ.

  'ಒಂಥರಾ ಬಣ್ಣಗಳು' ಚಿತ್ರ ಹೊಸತರ ಪ್ರಯೋಗಗಳು 'ಒಂಥರಾ ಬಣ್ಣಗಳು' ಚಿತ್ರ ಹೊಸತರ ಪ್ರಯೋಗಗಳು

  'ಒಂಥರಾ ಬಣ್ಣಗಳು' ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಲು ಚಿತ್ರದ ನಿರ್ದೇಶಕ ಸುನೀಲ್ ಭೀಮರಾವ್ ನಿರ್ಧಾರ ಮಾಡಿದ್ದಾರೆ. ಕಾರಣ ಸಿನಿಮಾ ತಾವು ಅಂದುಕೊಂಡ ಮಟ್ಟಿಗೆ ಜನರನ್ನು ತಲುಪಿಲ್ಲವಂತೆ. ಹೌದು, ಆಗಸ್ಟ್ 17 ರಂದು ತೆರೆಗೆ ಬಂದ ಈ ಸಿನಿಮಾಗೆ ಒಳ್ಳೆಯ ಮಾತು ಕೇಳಿ ಬಂತು. ಆದರೂ ಸದ್ಯಕ್ಕೆ ಚಿತ್ರಮಂದಿರ ಖಾಲಿ ಇರುವ ಕಾರಣ ತಮ್ಮ ಸಿನಿಮಾವನ್ನು ಅವರು ವಾಪಸ್ ಪಡೆಯಲಿದ್ದಾರಂತೆ.

  ಸಿನಿಮಾಗೆ ಪ್ರಚಾರದ ಕೊರತೆ ಆಗಿದ್ದು, ಸರಿಯಾದ ಪ್ರಚಾರ ಇಲ್ಲದ ಕಾರಣ ಸಿನಿಮಾ ಜನರಿಗೆ ರೀಚ್ ಆಗಿಲ್ಲವಂತೆ. ಇದರಿಂದ ನಿರ್ದೇಶಕರು ಮತ್ತೆ ಉತ್ತಮವಾಗಿ ಪ್ರಮೋಟ್ ಮಾಡಿ ಚಿತ್ರವನ್ನು ರಿಲೀಸ್ ಮಾಡಲಿದ್ದಾರಂತೆ. ಇನ್ನು ಚಿತ್ರದ ಮರು ಬಿಡುಗಡೆಯ ದಿನಾಂಕ ಸದ್ಯಕ್ಕೆ ನಿಗದಿ ಆಗಿಲ್ಲ.

  Ontara Bannagalu kannada movie will be re releasing soon

  ಅಂದಹಾಗೆ, 'ಒಂಥರಾ ಬಣ್ಣಗಳು' ಸೋನು ಗೌಡ, ಹಿತಾ ಚಂದ್ರಶೇಖ್,ಪ್ರವೀಣ್, ಕಿರಣ್ ಶ್ರೀನಿವಾಸ್, ಹಾಗೂ ಪ್ರತಾಪ್ ನಾರಾಯಣ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರ. ಇವರೊಂದಿಗೆ ಶರತ್ ಲೋಹಿತಾಶ್ವ, ಆಶಾಲತಾ, ಮಾಲತಿ ದೇಶಪಾಂಡೆ, ಸುಚೇಂದ್ರ ಪ್ರಸಾದ್ ಇನ್ನು ಅನೇಕರು ನಟಿಸಿದ್ದರು.

  English summary
  Kannada actress Hitha Chandrashekhar and Sonu Gowda's 'Ontara Bannagalu' kannada movie will be re releasing soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X