For Quick Alerts
  ALLOW NOTIFICATIONS  
  For Daily Alerts

  ಜಗತ್ತಿನ ಪ್ರಸಿದ್ಧ ಕ್ರಿಕೆಟ್ ಆಟಗಾರನನ್ನು ಭೇಟಿ ಮಾಡಿದ ಪಾರೂಲ್

  By Bharath Kumar
  |

  'ಬಟರ್ ಫ್ಲೈ' ಹಾರಿಸಲು ಸಜ್ಜಾಗಿರುವ ನಟಿ ಪಾರೂಲ್ ಯಾದವ್ ಅವರನ್ನ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ನೋಡಬೇಕಾಗಿದೆ.

  'ಸೀಜರ್' ಸಿನಿಮಾ ನಂತರ ಎಲ್ಲೂ ಕಾಣಿಸಿದ ಪಾರೂಲ್, ಈಗ ಜಗತ್ತು ಕಂಡ ಅತ್ಯುತ್ತಮ ಕ್ರಿಕೆಟ್ ಆಟಗಾರನ ಜೊತೆ ಕಾಣಿಸಿಕೊಂಡಿದ್ದಾರೆ.

  ಹೌದು, ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸಮನ್ ಮತ್ತು ಫೀಲ್ಡರ್ ಜಾಂಟಿ ರೋಡ್ಸ್ ಅವರನ್ನ ನಟಿ ಪಾರೂಲ್ ಭೇಟಿ ಮಾಡಿ ಫೋಟೋ ತೆಗಿಸಿಕೊಂಡಿದ್ದಾರೆ.

  ಬದುಕಿನ ಕರಾಳದಿನಗಳ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಪಾರೂಲ್ ಬದುಕಿನ ಕರಾಳದಿನಗಳ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಪಾರೂಲ್

  ಆದ್ರೆ, ಎಲ್ಲಿ ಭೇಟಿಯಾಗಿದ್ದಾರೆ, ಯಾವಾಗ ಭೇಟಿಯಾಗಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ, ತಮ್ಮ ಟ್ವಿಟ್ಟರ್ ನಲ್ಲಿ ಜಾಂಟಿ ರೋಡ್ಸ್ ಅವರ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ.

  ಓಲಾ ಚಾಲಕನಿಂದ ಪಾರೂಲ್ ಗೆ ಪರದಾಟ ಓಲಾ ಚಾಲಕನಿಂದ ಪಾರೂಲ್ ಗೆ ಪರದಾಟ

  ಅಂದ್ಹಾಗೆ, ಪಾರೂಲ್ ಅಭಿನಯದ 'ಬಟರ್ ಫ್ಲೈ' ಸಿನಿಮಾ ಹಿಂದಿಯ 'ಕ್ವೀನ್' ಚಿತ್ರದ ರೀಮೇಕ್. ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಈ ಸಿನಿಮಾ ಬರ್ತಿದ್ದು, ಕನ್ನಡದಲ್ಲಿ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರೆ.

  ಸಿಂಗಲ್ ಟೇಕ್ ಹಾಡಿನಲ್ಲಿ 'ಕ್ವೀನ್' ಬೆಡಗಿಯರು ಸಿಂಗಲ್ ಟೇಕ್ ಹಾಡಿನಲ್ಲಿ 'ಕ್ವೀನ್' ಬೆಡಗಿಯರು

  ಇನ್ನು ಜಾಂಟಿ ರೋಡ್ಸ್ ಬಗ್ಗೆ ಹೇಳುವುದಾರೇ ವಿಶ್ವಕ್ರಿಕೆಟ್ ಕಂಡ ಅತ್ಯುತ್ತಮ ಕ್ಷೇತ್ರ ರಕ್ಷಕ. 1992 ರಿಂದ 2003ರ ವರೆಗೂ ದಕ್ಷಿಣ ಆಪ್ರಿಕಾ ತಂಡದ ಪರವಾಗಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಕೀನ್ಯಾ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಮತ್ತು ಐಪಿಎಲ್ ನಲ್ಲಿ 'ಮುಂಬೈ ಇಂಡಿಯೆನ್ಸ್' ತಂಡದ ಫೀಲ್ಡಿಂಗ್ ಕೋಚ್ ಆಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

  English summary
  kannada actress parul yadav has met south africa's ex cricket player Jonty hodRes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X