For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಚಿತ್ರದಲ್ಲಿ ಚಾನ್ಸ್ ಗಿಟ್ಟಿಸಿದ ಪಾರುಲ್ ಯಾದವ್

  By Rajendra
  |

  ಗೋವಿಂದಾಯ ನಮಃ ಚಿತ್ರದಲ್ಲಿ ಕೋಮಲ್ ಜೊತೆ ಪ್ಯಾರ್‌ಗೆ ಆಗ್ಬಿಟ್ಟೈತೆ ಎಂದು ಕುಣಿದ ಬೆಡಗಿ ಪಾರುಲ್ ಯಾದವ್ ಕನ್ನಡದಲ್ಲಿ ಮತ್ತೊಮ್ಮೆ ಚಾನ್ಸ್ ಗಿಟ್ಟಿಸಿದ್ದಾರೆ. ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಬಚ್ಚನ್ ಚಿತ್ರದ ಬಳಗಕ್ಕೆ ಪಾರುಲ್‌ ಕೂಡ ಸೇರ್ಪಡೆಯಾಗಿದ್ದಾರೆ.


  ಬಚ್ಚನ್ ಚಿತ್ರದಲ್ಲಿ ಮೂವರು ನಾಯಕಿಯರಲ್ಲಿ ಪಾರುಲ್ ಸಹ ಒಬ್ಬರು. ನಯನತಾರಾ ಹಾಗೂ ದೀಪಾ ಸನ್ನಿಧಿ ಉಳಿದಿಬ್ಬರು ನಾಯಕಿಯರು. ಶಶಾಂಕ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾರುಲ್, "ಸುದೀಪ್ ಹಾಗೂ ಶಶಾಂಕ್ ಜೊತೆ ಕೆಲಸ ಮಾಡಲು ಖುಷಿಯಾಗುತ್ತಿದೆ. ಇದು ನನ್ನ ಎರಡನೇ ಕನ್ನಡ ಚಿತ್ರ" ಎಂದಿದ್ದಾರೆ.

  'ಗೋವಿಂದಾಯನ ನಮಃ' ಚಿತ್ರದ ಪಾತ್ರಕ್ಕೂ ಬಚ್ಚನ್ ಚಿತ್ರದಲ್ಲಿನ ಪಾತ್ರಕ್ಕೂ ಬಹಳಷ್ಟು ವ್ಯತ್ಯಾಸವಿರುತ್ತದೆ. ಅಲ್ಲಿ ಅಡಿಯಿಂದ ಮುಡಿತನಕ ಬಟ್ಟೆ ಇತ್ತು. ಆದರಿಲ್ಲ ಆ ರೀತಿ ಇರಲ್ಲ ಎಂಬ ಸಣ್ಣ ಸುಳಿವನ್ನೂ ಪಾರುಲ್ ನೀಡಿದ್ದಾರೆ.

  ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಿಂದ ಆಫರ್‌ಗಲು ಬರುತ್ತಿದ್ದರೂ ತಮ್ಮ ಮೊದಲ ಆದ್ಯತೆ ಕನ್ನಡ ಚಿತ್ರ. ಬಹುತಾರಾಗಣದ ಚಿತ್ರವಾದರೂ ಸರಿ ತಮ್ಮ ಪಾತ್ರ ವಿಭಿನ್ನವಾಗಿರಬೇಕು ಎನ್ನುತ್ತಾರೆ ಪಾರುಲ್. (ಏಜೆನ್ಸೀಸ್)

  English summary
  Govindaya Namaha fame actress Parul Yadav signed for second Kannada film Bachchan directing by Shashank. The movie also have Nayantara and Deepa Sannidhi to star opposite Kichcha Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X