Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಷ್ಟ್ರ ಪ್ರಶಸ್ತಿ ಪಡೆದ 'ಡೊಳ್ಳು' ಸಿನಿಮಾ ಮೇಲೆ ರಸೂಲ್ ಪೂಕುಟ್ಟಿ ಕೆಂಗಣ್ಣು; ಪವನ್ ಒಡೆಯರ್ ಏನಂದ್ರು?
ನಿನ್ನೆಯಷ್ಟೇ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡದ 'ಡೊಳ್ಳು' ಸಿನಿಮಾಕ್ಕೆ 'ಅತ್ಯುತ್ತಮ ಪ್ರಾದೇಶಿಕ ಕನ್ನಡ ಚಿತ್ರ' ಪ್ರಶಸ್ತಿ ಹಾಗೂ ಅತ್ಯುತ್ತಮ ಆಡಿಯೋಗ್ರಫಿ (ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್) ಪ್ರಶಸ್ತಿಗೆ ಜೋಬಿನ್ ಜಯನ್ ಅವರು ಭಾಜನರಾಗಿದ್ದಾರೆ. ಈ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಒಡೆಯರ್ ಸಿನಿಮಾಸ್ ಬ್ಯಾನರ್‌ನಲ್ಲಿ ನಿರ್ದೇಶಕ ಪವನ್ ಒಡೆಯರ್ ಮತ್ತು ಪತ್ನಿ ಅಪೇಕ್ಷಾ ಪುರೋಹಿತ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿರುವ 'ಡೊಳ್ಳು'ಚಿತ್ರಕ್ಕೆ 2 ರಾಷ್ಟ್ರ ಪ್ರಶಸ್ತಿ ಗೌರವ ಸಿಕ್ಕಿರೋದು ವಿಶೇಷ. ಹಲವು ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದ ಚಿತ್ರಕ್ಕೆ ಅತ್ಯುತ್ತಮ ಆಡಿಯೋಗ್ರಫಿ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿರೋದು ಅಚ್ಚರಿ ತಂದಿದೆ.
ಇನ್ನು 'ಡೊಳ್ಳು' ಚಿತ್ರಕ್ಕೆ 2 ರಾಷ್ಟ್ರಪ್ರಶಸ್ತಿ ಸಿಕ್ಕಿರುವುದು ಕನ್ನಡಿಗರಿಗೆ ಸಂತಸ ತಂದಿದೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರು ಸೋಶಿಯಲ್ ಮೀಡಿಯಾ ಮೂಲಕ ತಂಡಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. ಇದೆಲ್ಲದರ ನಡುವೆ ಆಸ್ಕರ್ ಪ್ರಶಸ್ತಿ ವಿಜೇತ ರಸೂಲ್ ಪೂಕುಟ್ಟಿ 'ಡೊಳ್ಳು' ಚಿತ್ರಕ್ಕೆ ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಘೋಷಿಸಿರುವ ಬಗ್ಗೆ ಚಕಾರ ಎತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪೂಕುಟ್ಟಿ ಸ್ವತ: ಚಿತ್ರದ ಸೌಂಡ್ ಡಿಸೈನರ್ ನಿತಿನ್ ಲುಕೊಸ್ ಹೇಳುವಂತೆ 'ಡೊಳ್ಳು' ಸಿಂಕ್ ಸೌಂಡ್ ಸಿನಿಮಾ ಅಲ್ಲ. ಆದರೂ ಚಿತ್ರಕ್ಕೆ ಈ ವಿಭಾಗದಲ್ಲಿ ಅದು ಹೇಗೆ ಪ್ರಶಸ್ತಿ ಸಿಕ್ತು ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ.
Breaking:
68ನೇ
ರಾಷ್ಟ್ರ
ಪ್ರಶಸ್ತಿ
ಪ್ರಕಟ:
ಯಾರಿಗೆ
ಯಾವ್ಯಾವ
ಪ್ರಶಸ್ತಿ?
ಇಲ್ಲಿದೆ
ಪಟ್ಟಿ!
ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ಪ್ರತಿಕ್ರಿಯೆ ನೀಡಿದ್ದು, ನಮಗೂ ಯಾಕೆ ಈ ವಿಭಾಗದಲ್ಲಿ ಪ್ರಶಸ್ತಿ ಬಂತು ಅನ್ನುವುದು ಗೊತ್ತಿಲ್ಲ. ಬಹುಶಃ ನಮ್ಮ ಸೌಂಡ್ ರೆಕಾರ್ಡಿಸ್ಟ್ ಅವರ ಶ್ರಮವನ್ನು ನೋಡಿ ತೀರ್ಪುಗಾರರು ಈ ಪ್ರಶಸ್ತಿಯನ್ನು ನಮ್ಮ ಚಿತ್ರಕ್ಕೆ ನೀಡಿರಬಹುದು ಎಂದು ಹೇಳಿದ್ದಾರೆ. ಅದೇ ರೀತಿ ಚಿತ್ರದ ನಿರ್ಮಾಪಕ ಪವನ್ ಒಡೆಯರ್ ಕೂಡ ಫಿಲ್ಮಿಬೀಟ್‌ಗೆ ಎಕ್ಸ್‌ಕ್ಲೂಸಿವ್ ಆಗಿ ಪ್ರತಿಕ್ರಿಯೆ ನೀಡಿದ್ದು, ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ. ಈ ಗೊಂದಲದ ಬಗ್ಗೆ ರಸೂಲ್ ಪುಕುಟ್ಟಿ ಜೊತೆ ಮಾತನಾಡಿದ ವಿಚಾರವನ್ನು ತಿಳಿಸಿದ್ದಾರೆ. ಪವನ್ ಒಡೆಯರ್ ಏನಂದ್ರು? ಮುಂದೆ ಓದಿ..

ಈ ವಿಚಾರದ ಬಗ್ಗೆ ಪವನ್ ಒಡೆಯರ್ ಏನಂದ್ರು?
'ನಮ್ಮದು ಸೌಂಡ್ ಸಿಂಕ್ ಸಿನಿಮಾ ಅಲ್ಲ. ನಾವು ಆ ವಿಭಾಗದಲ್ಲಿ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿಲ್ಲ. ನಾವು ಈಗಲೂ ನಮ್ಮದು ಸೌಂಡ್ ಸಿಂಕ್ ಸಿನಿಮಾ ಎಂದು ಹೇಳುತ್ತಿಲ್ಲ. ಹೊರಾಂಗಣದಲ್ಲಿ 'ಡೊಳ್ಳು' ಪ್ರದರ್ಶವನ್ನು ಶೂಟ್ ಮಾಡಿ, ಡಬ್ಬಿಂಗ್ ಸ್ಟುಡಿಯೋದಲ್ಲಿ ಆಡಿಯೋ ಸಿಂಕ್ ಮಾಡುವುದು ಅಷ್ಟು ಸುಲಭ ಇರಲಿಲ್ಲ. ಬಹಳ ನೈಜವಾಗಿ ಬರಬೇಕು ಅನ್ನುವ ಕಾರಣಕ್ಕೆ ನಿರ್ದೇಶಕ ಸಾಗರ್ ಪುರಾಣಿಕ್ ಹಾಗೂ ಜೋಬಿನ್ ಜಯನ್ ಬಹಳ ಕಷ್ಟಬಿದ್ದು ಅದನ್ನು ಸಿಂಕ್ ಮಾಡಿದ್ದರು. ಈ ಪ್ರಕ್ರಿಯೆ ಅಷ್ಟು ಸುಲಭದ್ದಾಗಿರಲಿಲ್ಲ. ತೀರ್ಪುಗಾರರಿಗೆ ಅದರ ಹರಿವಾಗಿ ನಮ್ಮ ಚಿತ್ರಕ್ಕೆ ಈ ವಿಭಾಗದಲ್ಲಿ ಪ್ರಶಸ್ತಿ ನೀಡಿರಬಹುದು'- ಪವನ್ ಒಡೆಯರ್, ನಿರ್ಮಾಪಕ
68th
National
Film
Awards;
ಭಾಷಾವಾರು
ಪ್ರಶಸ್ತಿ
ವಿಜೇತರ
ಲಿಸ್ಟ್
ಇಲ್ಲಿದೆ

ರಸೂಲ್ ಪುಕುಟ್ಟಿ ಜೊತೆ ಪವನ್ ಮಾತುಕತೆ
'2 ರಾಷ್ಟ್ರಪ್ರಶಸ್ತಿ ಗೆದ್ದ ಖುಷಿಯಲ್ಲಿರುವ ತಂಡಕ್ಕೆ ರಸೂಲ್ ಪೂಕುಟ್ಟಿಯವರು ಚಕಾರ ಎತ್ತಿರುವ ವಿಚಾರ ಕೊಂಚ ಕಸಿವಿಸಿ ಉಂಟು ಮಾಡಿದೆ. ಅವರು ನನ್ನ ಆತ್ಮೀಯ ಸ್ನೇಹಿತರು. ಈ ವಿಚಾರದ ಬಗ್ಗೆ ಅವರನ್ನು ಸಂಪರ್ಕಿಸಿ ಮಾತನಾಡಿದೆ. ನಮಗೆ ಇರುವ ಗೊಂದಲವೇ ಅವರಿಗೂ ಇದೆ. ಅದನ್ನು ವಿವರಿಸಿ ಹೇಳಿದ ಮೇಲೆ ಅವರಿಗೂ ಅರ್ಥವಾಯ್ತು. ಗೊತ್ತಿಲ್ಲದೇ ಟ್ವೀಟ್ ಮಾಡಿದೆ ಅಂತ ಅವರು ಹೇಳಿದ್ದಾರೆ' ಅಂತ ಪವನ್ ಒಡೆಯರ್ ಫಿಲ್ಮಿ ಬೀಟ್‌ಗೆ ಮಾಹಿತಿ ನೀಡಿದ್ದಾರೆ.

ಕನ್ನಡ ಸಿನಿಮಾಗಳನ್ನು ನೋಡಿ ಹೊಟ್ಟೆ ಉರಿ
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗವನ್ನು ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುತ್ತಿದೆ. 'ಕೆಜಿಎಫ್', '777 ಚಾರ್ಲಿ' ರೀತಿಯ ಸಿನಿಮಾಗಳು ಹೊರ ರಾಜ್ಯಗಳಲ್ಲೂ ಸೂಪರ್ ಹಿಟ್ ಆಗುತ್ತಿದೆ. ಇನ್ನು ಪ್ರಶಸ್ತಿಗಳ ವಿಚಾರದಲ್ಲೂ ಕನ್ನಡ ಸಿನಿಮಾಗಳ ಸಾಧನೆ ಕಮ್ಮಿ ಏನಿಲ್ಲ. ಕನ್ನಡ ಚಿತ್ರರಂಗದ ಬೆಳವಣಿಗೆ ಸಹಿಸಲಾರದೇ ಪರಭಾಷಿಕರು ಈ ರೀತಿ ಹೊಟ್ಟೆ ಉರಿದುಕೊಳ್ಳುತ್ತಿರುವಂತೆ ಕಾಣ್ತಿದೆ. ಎಲ್ಲದರಲ್ಲೂ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಶೀಘ್ರದಲ್ಲೇ ಬಿಡುಗಡೆ ಆಗಲಿದೆ 'ಡೊಳ್ಳು' ಸಿನಿಮಾ
ಕರ್ನಾಟಕದ ಗಂಡು ಕಲೆ ಆಧರಿಸಿ ನಿರ್ಮಿಸಿರುವ 'ಡೊಳ್ಳು' ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಪವನ್ ಪಡೆಯರು ಮುಂದಾಗಿದ್ದಾರೆ.ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದು, ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ ಸುರೇಶ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಟೀಕಿಸಿದ್ದಾರೆ. ಪ್ರತಿಷ್ಠಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಡೊಳ್ಳು ಸಿನಿಮಾ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಕೆಲ ದಿನಗಳ ಹಿಂದೆಯಷ್ಟೆ ಚಿತ್ರದ ಟೀಸರ್ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.