»   » 'ರಣವಿಕ್ರಮ' ಆಯ್ತು..! ಪವನ್ ಒಡೆಯರ್ ಕಥೆಯೇನು?

'ರಣವಿಕ್ರಮ' ಆಯ್ತು..! ಪವನ್ ಒಡೆಯರ್ ಕಥೆಯೇನು?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಸೂಪರ್ ಹಿಟ್ ಆಯ್ತು. ಪವನ್ ಒಡೆಯರ್ 'ಹ್ಯಾಟ್ರಿಕ್ ನಿರ್ದೇಶಕ' ಅನ್ನುವ ಪಟ್ಟವನ್ನೂ ಪಡೆದುಕೊಂಡರು. ಅರ್ಧ ಶತಕ ಬಾರಿಸಿ 'ರಣವಿಕ್ರಮ' ಬಹುತೇಕ ಥಿಯೇಟರ್ ಗಳಲ್ಲಿ ಮುನ್ನುಗ್ಗುತ್ತಿದೆ. ಆದ್ರೆ, ನಿರ್ದೇಶಕ ಪವನ್ ಎಲ್ಲಿ?

ಈ ಪ್ರಶ್ನೆಗೆ ಗಾಂಧಿನಗರದಲ್ಲಿ ಉತ್ತರ ಸಿಕ್ಕಿದೆ. ಹೊಸ ಸಿನಿಮಾದ ಸ್ಕ್ರಿಪ್ಟ್ ತಯಾರಿಯಲ್ಲಿ ಪವನ್ ಒಡೆಯರ್ ತೊಡಗಿದ್ದಾರೆ. ಅಂದ್ಹಾಗೆ ಈ ಬಾರಿ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿರುವುದು 'ಡೈರೆಕ್ಟರ್ಸ್ ಸ್ಪೆಷಲ್' ಖ್ಯಾತಿಯ ಧನಂಜಯ್ ಗೆ. [ದಾಖಲೆಯ ದಾಪುಗಾಲು ಹಾಕುವತ್ತ ಪುನೀತ್ 'ರಣವಿಕ್ರಮ']

Pawan Wadeyar's directorial next titled as 'Jessie'

ಹೌದು, ಧನಂಜಯ್ ಜೊತೆ ಪವನ್ ಒಡೆಯರ್ ನಿರ್ದೇಶಿಸುತ್ತಿರುವ ಹೊಸ ಚಿತ್ರ 'ಜೆಸ್ಸಿ'. ಲವ್ ಸ್ಟೋರಿ ಕಮ್ ಆಕ್ಷನ್ ಎಂಟರ್ಟೇನರ್ ಆಗಿರುವ ಚಿತ್ರ 'ಜೆಸ್ಸಿ'. ವಿಶೇಷ ಅಂದ್ರೆ, 'ಗೋವಿಂದಾಯ ನಮಃ' ಚಿತ್ರದ ಮೂಲಕ ಕನ್ನಡಕ್ಕೆ ಬಂದ ಪಾರುಲ್ ಯಾದವ್, 'ಜೆಸ್ಸಿ' ಚಿತ್ರಕ್ಕೂ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. [ಪವನ್ ಒಡೆಯರ್ ಆಕ್ಷನ್ ಕಟ್ ನಲ್ಲಿ ಅಲ್ಲು ಅರ್ಜುನ್]

Pawan Wadeyar's directorial next titled as 'Jessie'

ಸ್ಪೆಷಲ್ ರೋಲ್ ನಲ್ಲಿ ರಘು ಮುಖರ್ಜಿ ಕೂಡ ನಟಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರಕಥೆ ಬರೆಯುವುದರಲ್ಲಿ ಪವನ್ ಒಡೆಯರ್ ಬಿಜಿಯಾಗಿದ್ದು, ಅದು ಮುಗಿದ ಬಳಿಕ ಸಿನಿಮಾ ಸೆಟ್ಟೇರಲಿದೆ.

English summary
After 'Ranavikrama', Pawan Wadeyar is gearing up for his directorial next titled 'Jessie'. Director Pawan has roped in Dhananjay of 'Director's Special' fame and Parul Yadav to play lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada