»   » ತೆಲುಗು ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್

ತೆಲುಗು ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್

Posted By:
Subscribe to Filmibeat Kannada
Pawan and Manchu
ಬಾಕ್ಸ್ ಆಫೀಸ್ 'ಪರಮಾತ್ಮ' ಯೋಗರಾಜ್ ಭಟ್ ರ ಶಿಷ್ಯ ಪವನ್ ಒಡೆಯರ್ ತೆಲುಗು ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. 'ಗೋವಿಂದಾಯ ನಮಃ' ಚಿತ್ರವನ್ನು ಅವರು ತೆಲುಗು ಚಿತ್ರರಸಿಕರಿಗೆ ಪರಿಚಯಿಸಲು ಮುಂದಾಗಿದ್ದಾರೆ.

ಕನ್ನಡದಲ್ಲಿ ಕೋಮಲ್ ಪೋಷಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಡೈಲಾಗ್ ಕಿಂಗ್ ಮೋಹನ್ ಬಾಬು ಪುತ್ರ ಮಂಚು ಮನೋಜ್ ಮಾಡಲಿದ್ದಾರೆ. ಪವನ್ ಅವರ ನಿರ್ದೇಶನ ಸ್ವತಃ ಮೋಹನ್ ಬಾಬು ಅವರೇ ಕ್ಲೀನ್ ಬೋಲ್ಡ್ ಆಗಿದ್ದಾರಂತೆ. ಈಗಾಗಲೆ ಪವನ್ ಕೈಗೆ ಮುಂಗಡ ಹಣವೂ ಸಂದಾಯವಾಗಿದೆ ಎನ್ನುತ್ತವೆ ಮೂಲಗಳು.

'ಗೋವಿಂದಾಯ ನಮಃ' ಚಿತ್ರವನ್ನು ಯಥಾವತ್ತಾಗಿ ತೆಲುಗಿಗೆ ತರದೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತದೆ. ಅಲ್ಲಿನ ಪ್ರೇಕ್ಷಕರ ನಾಡಿಮಿಡಿತಕ್ಕೆ ತಕ್ಕಂತೆ ಬದಲಾವಣೆಗಳಿರುತ್ತವಂತೆ. ಮಾರ್ಚ್ 21ಕ್ಕೆ ಹೈದರಾಬಾದಿನಲ್ಲಿ ಮುಹೂರ್ತ ಪಿಕ್ಸ್ ಆಗಿದೆ.

ಚಿತ್ರದ ಉಳಿದ ಪಾತ್ರವರ್ಗ, ತಂತ್ರಜ್ಞರ ಬಳಗ ಇನ್ನೂ ಅಂತಿಮವಾಗಿಲ್ಲ. ಚಿತ್ರದ ಶೀರ್ಷಿಕೆ ಸೇರಿದಂತೆ ಎಲ್ಲವೂ ಶೀಘ್ರದಲ್ಲೇ ಪ್ರಕಟವಾಗಲಿವೆ. ಏತನ್ಮಧ್ಯೆ ಪವನ್ ಮತ್ತೊಂದು ಕನ್ನಡ ಚಿತ್ರದಲ್ಲೂ ಬಿಜಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಾಯಕ ನಟನಾಗಿರುವ 'ಗೂಗ್ಲಿ' ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಮುಕ್ತಾಯವಾಗಲಿದೆ.

ಅದಾದ ಕೂಡಲೆ ತೆಲುಗು 'ಗೋವಿಂದಾಯ ನಮಃ' ಚಿತ್ರದಲ್ಲಿ ಪವನ್ ತೊಡಗಿಕೊಳ್ಳಲಿದ್ದಾರೆ. ಕೇವಲ ಕರ್ನಾಟದಕದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ 'ಗೋವಿಂದ' ಪ್ಯಾರ್‌ಗೆ ಆಗ್ಬಿಟ್ಟಿದ್ದ. ದೆಹಲಿ, ಗೋವಾ, ಹೈದರಾಬಾದ್ ಸೇರಿದಂತೆ ಮುಂಬೈ ಹಾಗೂ ಚೆನ್ನೈನ ಪಿವಿಆರ್‌ಗಳಲ್ಲಿ 'ಗೋವಿಂದ'ನಿಗೆ ಒಳ್ಳೆಯ ಕಲೆಕ್ಷನ್ ಆಗಿತ್ತು. (ಏಜೆನ್ಸೀಸ್)

English summary
Kannada box office hit film 'Govindaya Namaha' is all set to remade in Telugu. Dialogue king Mohan Babu son Manchu Manoj is the hero. The film is scheduled to be launched on the 21st of March in Hyderabad and directed by Pawan Wodeyar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada