For Quick Alerts
  ALLOW NOTIFICATIONS  
  For Daily Alerts

  ಪೊಲೀಸ್ ಭದ್ರತೆಯಲ್ಲಿ ಮೀರಾ ಜಾಸ್ಮಿನ್ ಮದುವೆ

  By Rajendra
  |

  ಕನ್ನಡದ ಮೌರ್ಯ, ಅರಸು, ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಸಿಕರಿಗೆ ಬಲು ಹತ್ತಿರವಾಗಿದ್ದ ತಾರೆ ಮೀರಾ ಜಾಸ್ಮಿನ್ ಮದುವೆ ಬುಧವಾರ (ಫೆಬ್ರವರಿ 12) ಪೊಲೀಸ್ ಭದ್ರತೆಯಲ್ಲಿ ನೆರವೇರಿತು.

  ತಮ್ಮ ವಿವಾಹಕ್ಕೆ ಪೊಲೀಸ್ ಭದ್ರತೆ ಕಲ್ಪಿಸಬೇಕು ಎಂದು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು ಮೀರಾ ಜಾಸ್ಮಿನ್ ಭಾವಿ ಪತಿ. ತಿರುವನಂತಪುರಂನ ಚರ್ಚ್ ನಲ್ಲಿ ಇಂದು ಮದುವೆ ನೆರವೇರಿತು. ಪರಸ್ಪರ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಅನಿಲ್ ಜಾನ್ ಟಿಟುಸ್ ಅವರ ಕೈಹಿಡಿದರು ಮೀರಾ. [ಪ್ರಿಯಕರನ ಜೊತೆ ತಾರೆ ಮೀರಾ ಜಾಸ್ಮಿನ್ ಲವ್ವಿ ಡವ್ವಿ]

  ಮ್ಯಾಟ್ರಿಮನಿ ವೆಬ್ ಸೈಟ್ ಮೂಲಕ ಇವರಿಬ್ಬರ ಮದುವೆ ಸಂಬಂಧ ಕುದುರಿತ್ತು. ಮೀರಾ ಜಾಸ್ಮಿನ್ ಅವರ ಪತಿ ಅನಿಲ್ ಐಐಟಿ ಪದವೀಧರ. ಮದ್ರಾಸ್ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಪ್ರಸ್ತುತ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. [ಮೀರಾ ಜಾಸ್ಮಿನ್ ಮದುವೆ ವಿಡಿಯೋ]

  ಮೀರಾ ಜಾಸ್ಮಿನ್ ವಿವಾಹಕ್ಕೆ ಪೊಲೀಸ್ ಭದ್ರತೆ

  ಮೀರಾ ಜಾಸ್ಮಿನ್ ವಿವಾಹಕ್ಕೆ ಪೊಲೀಸ್ ಭದ್ರತೆ

  ಮೀರಾ ಅವರ ವಿವಾಹಕ್ಕೆ ಭದ್ರತೆ ನೀಡುವಂತೆ ಪೊಲೀಸರಿಗೆ ಕೇರಳ ಹೈಕೋರ್ಟ್ ಆದೇಶಿಸಿದೆ. ತನ್ನ ಮಾಜಿ ಸ್ನೇಹಿತೆ ನವ್ಯಾ ನಟರಾಜನ್ ಅವರು ತಮ್ಮ ಮದುವೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.

  ನವ್ಯಾರಿಂದ ಮೀರಾ ಮದುವೆಗೆ ಅಡ್ಡಿ

  ನವ್ಯಾರಿಂದ ಮೀರಾ ಮದುವೆಗೆ ಅಡ್ಡಿ

  ಈ ಹಿಂದೆ ನವ್ಯಾ ಅವರನ್ನು ಮದುವೆ ಮಾಡಿಕೊಳ್ಳಬೇಕೆಂದುಕೊಂಡಿದ್ದೆವು. ಆದರೆ ಕಾರಣಾಂತರಗಳಿಂದ ಆ ಮದುವೆ ನಡೆಯಲಿಲ್ಲ. ಇದೀಗ ನವ್ಯಾ ಹಾಗೂ ಅವರ ತಂದೆ ಮೀರಾ ಜಾಸ್ಮಿನ್ ಜೊತೆಗಿನ ಮದುವೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದ್ದರು.

  ಈ ಮದುವೆ ನಡೆಯಲ್ಲಾ ಎಂದು ಬೆದರಿಕೆ ಒಡ್ಡಿದ್ದರು

  ಈ ಮದುವೆ ನಡೆಯಲ್ಲಾ ಎಂದು ಬೆದರಿಕೆ ಒಡ್ಡಿದ್ದರು

  ಜನವರಿ 23ರಂದು ನವ್ಯಾ ಹಾಗೂ ಅವರ ತಂದೆಯವರು ಮೀರಾ ಜಾಸ್ಮಿನ್ ಮನೆಗೆ ಹೋಗಿ ಈ ಮದುವೆ ನಡೆಯಲು ಬಿಡಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಅನಿಲ್ ದೂರಿನಲ್ಲಿ ತಿಳಿಸಿದ್ದಾರೆ.

  ಮಲಯಾಳಂ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ತಾರೆ

  ಮಲಯಾಳಂ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ತಾರೆ

  ಈ ಹಿನ್ನೆಲೆಯಲ್ಲಿ ಅನಿಲ್ ಅವರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಭದ್ರತೆ ಕಲ್ಪಿಸುವಂತೆ ಪೊಲೀಸರಿಗೆ ಆದೇಶಿಸಿದೆ. 2001ರಲ್ಲಿ ಮಲಯಾಳಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಮೀರಾ ಜಾಸ್ಮಿನ್ ಬಳಿಕ ಕನ್ನಡ, ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಹೂ ಚಿತ್ರದ ಬಳಿಕ ಕನ್ನಡಕ್ಕೆ ಬರಲಿಲ್ಲ ಮೀರಾ

  ಹೂ ಚಿತ್ರದ ಬಳಿಕ ಕನ್ನಡಕ್ಕೆ ಬರಲಿಲ್ಲ ಮೀರಾ

  ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಪ್ರಶಸ್ತಿಗಳನ್ನು ಪಡೆದ ಪ್ರತಿಭಾವಂತ ತಾರೆ ಮೀರಾ ಜಾಸ್ಮಿನ್. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ 'ಹೂ' ಚಿತ್ರದ ಬಳಿಕ ಮೀರಾ ಜಾಸ್ಮಿನ್ ಕನ್ನಡದಲ್ಲಿ ಅಭಿನಯಿಸಲಿಲ್ಲ. ಸದ್ಯಕ್ಕೆ ಮಲಯಾಳಂನ ಸಾಕಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

  English summary
  A Division Bench of the Kerala High Court on Tuesday directed the police to ensure that no law-and-order problem takes place during the solemnisation of the marriage of actor Meera Jasmine with Anil John Titus at a church in Thiruvananthapuram on February 12.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X