»   » ನಿಂತುಹೋದ ನಿಶ್ಚಿತಾರ್ಥ: ಪೂಜಾ ಗಾಂಧಿ ಹೇಳಿದ್ದೇನು?

ನಿಂತುಹೋದ ನಿಶ್ಚಿತಾರ್ಥ: ಪೂಜಾ ಗಾಂಧಿ ಹೇಳಿದ್ದೇನು?

Posted By:
Subscribe to Filmibeat Kannada
Pooja Gandhi clarifies her engagement with Anand Gowda broke
ಉದ್ಯಮಿ ಆನಂದ್ ಗೌಡ ಜೊತೆ ನಿಶ್ಚಿತಾರ್ಥ ರದ್ದಾಗಿರುವುದನ್ನು ನಟಿ ಪೂಜಾ ಗಾಂಧಿ ಸ್ಪಷ್ಟ ಪಡಿಸಿದ್ದಾರೆ. ಮಾಧ್ಯಮಗಳಿಗೆ ಬುಧವಾರ (ಡಿ 19) ರಾತ್ರಿ ನೀಡಿದ ದೂರವಾಣಿ ಸಂದರ್ಶನದಲ್ಲಿ ಆನಂದ್ ಗೌಡ ಜೊತೆಗಿನ ನಿಶ್ಚಿತಾರ್ಥ ರದ್ದಾಗಿರುವುದು ಹೌದು ಮತ್ತು ಅದಕ್ಕೆ ಕೆಲ ಕಾರಣಗಳನ್ನು ಪೂಜಾ ಗಾಂಧಿ ನೀಡಿದ್ದಾರೆ.

ಅವರು ನನ್ನ ತಾಯಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಹೇಳಿದ ಹಾಗೆ ನನ್ನ ತಾಯಿ ಈ ವಿಷಯದಲ್ಲಿ ಮೂಗು ತೋರಿಸಲು ಬಂದಿಲ್ಲ. ಈ ಪ್ರಪಂಚದಲ್ಲಿ ನನಗೆ ಅತ್ಯಂತ ಪ್ರೀತಿಪಾತ್ರರಾದವರು ಎಂದರೆ ನನ್ನ ತಾಯಿ.

ನಾನು ದುಡ್ಡಿನ ಹಿಂದೆ ಬಿದ್ದವಳಲ್ಲ. ಎಷ್ಟೊ ನಿರ್ಮಾಪಕರಿಗೆ ಫ್ರೀಯಾಗಿ ಕಾಲ್ ಶೀಟ್ ನೀಡಿದ್ದೇನೆ. ಅದು ಇಡೀ ಚಿತ್ರೋದ್ಯಮದವರಿಗೆ ಮತ್ತು ಮಾಧ್ಯಮದವರಿಗೂ ಗೊತ್ತು ಎಂದು ಪೂಜಾ ಗಾಂಧಿ ಹೇಳಿದ್ದಾರೆ.

ಅವರು ಕೊಟ್ಟ ನಿಶ್ಚಿತಾರ್ಥ ಉಂಗುರವನ್ನು ಹಿಂದಿರುಗಿಸುತ್ತಿದ್ದೇನೆ, ಇಷ್ಟೆಲ್ಲಾ ನಡೆದದ್ದು ಒಂದು ಕೆಟ್ಟ ಕನಸೆಂದು ಭಾವಿಸಿ ಅದನ್ನು ಮರೆಯಲು ಪ್ರಯತ್ನಿಸುತ್ತೇನೆ.

ಇಡ್ಲಿ ಅಥವಾ ಗೌಡ ಸಮುದಾಯದ ಬಗ್ಗೆ ನಾನೂ ಯಾವುದೇ ಹೇಳಿಕೆ ನೀಡಿಲ್ಲ. ನನ್ನನ್ನು ಯಾವಾಗಲೂ ಸಂಶಯ ದೃಷ್ಟಿಯಿಂದಲೇ ಅವರು ನೋಡುತ್ತಿದ್ದರು. ಸಾಕಪ್ಪಾ ಇವರ ಸಹವಾಸ ಎಂದು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಪೂಜಾ ಗಾಂಧಿ ಮಾಧ್ಯಮಗಳಲ್ಲಿ ಕಣ್ಣೀರು ಸುರಿಸಿದ್ದಾರೆ.

ಆನಂದ್ ಲೆಕ್ಕವಿಲ್ಲದಷ್ಟು ಬಾರಿ ನನಗೆ ಅವಮಾನ ಮಾಡಿದ್ದಾರೆ. ಅವರ ಜೊತೆ ಮುಂದೆ ಸಂಸಾರ ನಡೆಸಿದರೆ ನನ್ನ ತಾಳ್ಮೆ ಮತ್ತು ಮೆಂಟಲ್ ಬ್ಯಾಲನ್ಸ್ ಕಳೆದುಕೊಳ್ಳುತ್ತೇನೆ ಎಂದು ಈ ನಿರ್ಧಾರಕ್ಕೆ ಬಂದಿದ್ದೇನೆ. ಅವರು ತಮ್ಮ ನಡವಳಿಕೆಯನ್ನು ಮೊದಲು ಸರಿಪಡಿಸಿಕೊಂಡು ನನ್ನ ತಾಯಿಯ ಬಗ್ಗೆ ಮಾತನಾಡಲಿ ಎಂದು ಪೂಜಾ ಗಾಂಧಿ ಹೇಳಿದ್ದಾರೆ.

English summary
Five weeks after her engagement to a realtor, popular film actress Pooja Gandhi on Wednesday called off her wedding with her fiancé accusing him for “ill-treating” her and her family. She said, I am no way responsible for the breakup. He alone is responsible. He is a suspecting character. He suspects me and insults me.
Please Wait while comments are loading...