»   » ಮಣಿರತ್ನಂ ಚಿತ್ರದಲ್ಲಿ ಪ್ರಕಾಶ್ ರೈಗೆ ಭರ್ಜರಿ ಚಾನ್ಸ್

ಮಣಿರತ್ನಂ ಚಿತ್ರದಲ್ಲಿ ಪ್ರಕಾಶ್ ರೈಗೆ ಭರ್ಜರಿ ಚಾನ್ಸ್

Posted By:
Subscribe to Filmibeat Kannada

ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರು ಮತ್ತೊಂದು ಮಹಾ ದೃಶ್ಯಕಾವ್ಯಕ್ಕೆ ಸಿದ್ಧವಾಗಿದ್ದಾರೆ. ಮಣಿರತ್ನಂ ಚಿತ್ರಗಳೆಂದರೆ ಪ್ರೇಕ್ಷಕರು ಮುಗಿಬಿದ್ದು ನೋಡುವಂತಹ ಕಾಲ ಹೋಗಿದ್ದರೂ ಅವರ ಚಿತ್ರಗಳನ್ನು ಇಷ್ಟಪಡುವಂತಹ ಪ್ರೇಕ್ಷಕ ವರ್ಗವಂತೂ ಇದ್ದೇ ಇದೆ.

'ಇರುವರ್' ಚಿತ್ರದಲ್ಲಿ ಪ್ರಕಾಶ್ ರೈ ಅವರಿಗೆ ಅತ್ಯುತ್ತಮ ಪಾತ್ರ ಕೊಟ್ಟಿದ್ದ ಮಣಿರತ್ನಂ ಅವರು ಬಾಂಬೆ, ಅಮೃತಾ ಚಿತ್ರಗಳಲ್ಲೂ ಅವಕಾಶ ನೀಡಿದ್ದರು. ಇದೀಗ ನಾಲ್ಕನೇ ಬಾರಿ ಮಣಿರತ್ನಂ ಚಿತ್ರದಲ್ಲಿ ಅಭಿನಯಿಸುವ ಚಾನ್ಸ್ ಪ್ರಕಾಶ್ ರೈ ಅವರಿಗೆ ಸಿಕ್ಕಿದೆ. [ಇದೇ ಮೊದಲ ಬಾರಿಗೆ ಸುದೀಪ್ ಜತೆ ಪ್ರಕಾಶ್ ರೈ]

Prakash Raj

ಇನ್ನೂ ಹೆಸರಿಡದ ಮಣಿರತ್ನಂ ಅವರ ಚಿತ್ರ ಅಕ್ಟೋಬರ್ 6ರಂದು ಸೆಟ್ಟೇರಿದ್ದು ಮುಖ್ಯಭೂಮಿಕೆಯಲ್ಲಿ ದುಲ್ಕರ್ ಸಲ್ಮಾನ್ ಹಾಗೂ ನಿತ್ಯಾ ಮೆನನ್ ಇದ್ದಾರೆ. ಇನ್ನು ಚಿತ್ರದಲ್ಲಿ ಪ್ರಕಾಶ್ ರೈ ಅವರದು ಗಮಾನಾರ್ಹ ಪಾತ್ರವಾಗಿದೆ.

ಈ ಬಗ್ಗೆ ಪ್ರಕಾಶ್ ರೈ ಅವರು ಟ್ವೀಟಿಸಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ, "ದುಲ್ಕರ್ ಸಲ್ಮಾನ್ ಹಾಗೂ ನಿತ್ಯಾ ಮೆನನ್ ಅವರಂತಹ ಯುವ ನಟರೊಂದಿಗೆ ಅಭಿನಯಿಸುತ್ತಿರುವುದು ನಿಜಕ್ಕೂ ಇಷ್ಟವಾಗಿದೆ" ಎಂದಿದ್ದಾರೆ.

ಎಂದಿನಂತೆ ಮಣಿರತ್ನಂ ಚಿತ್ರದ ತಾಂತ್ರಿಕ ಬಳಗ ಇಲ್ಲೂ ಇದೆ. ಪಿ.ಸಿ. ಶ್ರೀರಾಮ್ ಅವರ ಛಾಯಾಗ್ರಹಣ, ಎ ಆರ್ ರೆಹಮಾನ್ ಅವರ ಸಂಗೀತ ಚಿತ್ರಕ್ಕಿದೆ. ಈ ಚಿತ್ರವನ್ನು ಮದ್ರಾಸ್ ಟಾಕೀಸ್ ಲಾಂಛನದಲ್ಲಿ ಮಣಿರತ್ನಂ ನಿರ್ಮಿಸುತ್ತಿದ್ದಾರೆ.

English summary
National award winner, Kannadiga Prakash Raj is one lucky star who has got the chance to act in Mani Ratnam direction for the fourth time, after their successful collaboration in Bombay, Iruvar and Amrutha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada