twitter
    For Quick Alerts
    ALLOW NOTIFICATIONS  
    For Daily Alerts

    ಪ್ರಿಯಾಮಣಿ ಚಾರುಲತಾ ಬಾಕ್ಸಾಫೀಸ್ ರಿಪೋರ್ಟ್

    By Rajendra
    |

    ಪ್ರಿಯಾಮಣಿ ಅಭಿನಯದ 'ಚಾರುಲತಾ' ಚಿತ್ರ ಉತ್ತಮ ವಿಮರ್ಶೆಗೆ ಪಾತ್ರವಾಗಿದೆ. ಆದರೆ ಬಾಕ್ಸಾಫೀಸಲ್ಲಿ ಮಾತ್ರ ಚಿತ್ರ ನಿರೀಕ್ಷಿಸಿದಷ್ಟು ಸದ್ದು ಮಾಡುತ್ತಿಲ್ಲ. ಈ ಚಿತ್ರ ಕ್ಲಾಸ್ ಪ್ರೇಕ್ಷಕರನ್ನು ಸೆಳೆಯುತ್ತಿದ್ದರೂ ಮಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಎಡವಿದೆ ಎಂದೇ ಹೇಳಬೇಕು.

    ಸರಿಸುಮಾರು 110 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ಚಾರುಲತಾ' ಚಿತ್ರಕ್ಕೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೆಗ್ಯುಲರ್ ಚಿತ್ರಕ್ಕಿಂತ ಭಿನ್ನವಾಗಿದ್ದ ಈ ಚಿತ್ರ ಮಾಸ್ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ವಿಫಲವಾಗಿರುವುದನ್ನು ಚಿತ್ರತಂಡವೇ ಒಪ್ಪುತ್ತದೆ.

    ಒಟ್ಟು ರು. 6 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಈ ಚಿತ್ರ ಮೊದಲ ವಾರಾಂತ್ಯದಲ್ಲಿ ರು.1.10 ಕೋಟಿ ಕಲೆಕ್ಷನ್ ಮಾಡಿದೆ. ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಚಿತ್ರವಾದ ಇದನ್ನು ದ್ವಾರಕೀಶ್ ನಿರ್ಮಿಸಿದ್ದು, ಈ ಚಿತ್ರಕ್ಕೆ ಪಿ ಕುಮರ್ ಆಕ್ಷನ್ ಕಟ್ ಹೇಳಿದ್ದಾರೆ.

    ಥಾಯ್' ಭಾಷೆಯ 'ಅಲೋನ್' ಚಿತ್ರದ ರೀಮೇಕ್ ಆಗಿರುವ ಈ ಕನ್ನಡದ 'ಚಾರುಲತಾ', ಥಾಯ್ ಮೂಲದ ಚಿತ್ರವಾಗಿದ್ದರೂ ಪ್ರಪಂಚದೆಲ್ಲಡೆ ಸಲ್ಲಬಲ್ಲ ವಿಶಿಷ್ಟ ಕಥೆ ಹೊಂದಿದೆ. ಸಯಾಮಿ ಅವಳಿಗಳು ಮಾತ್ರವಲ್ಲದೇ ದೇಹದ ಹೊಟ್ಟೆ ಭಾಗದಲ್ಲಿ ಒಬ್ಬರಿಗೊಬ್ಬರು ಬೆಸೆದುಕೊಂಡಿರುವ ಹೆಣ್ಣುಮಕ್ಕಳಿಬ್ಬರ ಜೀವನಕ್ಕೆ ಸಂಬಂಧಿಸಿದ ಕಥೆಯಿದು.

    ದೇಹ ಎರಡಾಗಿದ್ದರೂ ಬೇರೆಬೇರೆಯಾಗಿ ಬಾಳಲಾರದ ಈ ಜೀವಗಳು ಪ್ರತಿಯೊಂದು ಚಟುವಟಿಕೆಗೂ ಒಬ್ಬರನೊಬ್ಬರು ಅವಲಂಬಿಸಿರುತ್ತಾರೆ. ಆದರೆ ಮನಸ್ಸು ಮಾತ್ರ ಒಂದೇ ರೀತಿ ಯೋಚಿಸುವುದಲ್ಲದೇ ಕಾರ್ಯವನ್ನೂ ಮಾಡುವುದರಿಂದ ಈ ಇಬ್ಬರ ಮಧ್ಯೆ ಹೋಲಿಸಲು ಅಸಾಧ್ಯವಾದ ಅನ್ಯೋನ್ಯತೆ ಕಂಡುಬರುತ್ತದೆ. (ಚಾರುಲತಾ ಚಿತ್ರ ವಿಮರ್ಶೆ ಓದಿ)

    ಆದರೆ ಈ ಸಯಾಮಿ ಅವಳಿ ಮಕ್ಕಳು ಬೆಳೆದು 20 ವರ್ಷಕ್ಕೆ ಕಾಲಿಡುತ್ತಿದ್ದಂತೆ ಇಬ್ಬರೂ ಒಂದೇ ಹುಡುಗನ ಪ್ರೀತಿಯಲ್ಲಿ ಬೀಳುತ್ತಾರೆ. ಅಲ್ಲಿಂದ ಮುಂದಕ್ಕೆ ಈ ಅವಳಿಗಳ ಜೀವನ ಯಾವ ತಿರುವು ಪಡೆಯುತ್ತದೆ ಎಂಬುದೇ ಚಿತ್ರದ ಕಥೆಯ ತಿರುಳು. (ಒನ್ಇಂಡಿಯಾ ಕನ್ನಡ)

    English summary
    Priyamani's Charulatha has opened up to good reviews by critics in Karnataka. The movie, which was released on September 21, has got a decent opening at the Kannada Box Office.
    Wednesday, September 26, 2012, 11:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X