»   » ಹಾಲಿವುಡ್ ಶೈಲಿಯಲ್ಲಿ 'ಮಮ್ಮಿ'ಗೆ ರೀ-ರೆಕಾರ್ಡಿಂಗ್

ಹಾಲಿವುಡ್ ಶೈಲಿಯಲ್ಲಿ 'ಮಮ್ಮಿ'ಗೆ ರೀ-ರೆಕಾರ್ಡಿಂಗ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಧರ್ಮಪತ್ನಿ ನಟಿ ಪ್ರಿಯಾಂಕ ಉಪೇಂದ್ರ ಅವರು ಏಳು ತಿಂಗಳ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ, 'ಮಮ್ಮಿ-ಸೇವ್ ಮಿ' ಬಿಡುಗಡೆ ಹಂತದಲ್ಲಿದೆ. ಇನ್ನೇನು ಸದ್ಯದಲ್ಲೇ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಸದ್ಯಕ್ಕೆ ಚಿತ್ರಕ್ಕೆ ಲೈವ್ ರೀ-ರೆಕಾರ್ಡಿಂಗ್ ಬಹಳ ಭರದಿಂದ ಸಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಟ್ರೈಲರ್ ನಿಂದ, ಹಾರರ್-ಥ್ರಿಲ್ಲರ್ ಸಿನಿಮಾ 'ಮಮ್ಮಿ-ಸೇವ್ ಮಿ' ಸಾಕಷ್ಟು ಕುತೂಹಲ ಹುಟ್ಟಿಸುತ್ತಿದೆ. ನವ ಪ್ರತಿಭೆ ಲೋಹಿತ್ ಹೆಚ್ ನಿರ್ದೇಶನ ಮಾಡಿರುವ ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ಕಂಪೋಸ್‌ ಮಾಡಿದ್ದಾರೆ. ['ಮಮ್ಮಿ' ಆದ ಪ್ರಿಯಾಂಕಾ ಉಪೇಂದ್ರ ಜೊತೆ ಸಣ್ಣ ಮಾತುಕತೆ]

ಈ ಇಡೀ ಚಿತ್ರಕ್ಕೆ ಹಾರರ್ ಎಫೆಕ್ಟ್ ಬರಲು ಹಿನ್ನಲೆ ಸಂಗೀತವನ್ನು ಬಳಸಿಕೊಂಡಿರೋದು ಪ್ಲಸ್ ಪಾಯಿಂಟ್. ಮುಂದೆ ಓದಿ....

ಹಾಲಿವುಡ್ ಸ್ಟೈಲ್ ನಲ್ಲಿ ಹಿನ್ನಲೆ ಸಂಗೀತ

ಚಿತ್ರದ ರೀ-ರೆಕಾರ್ಡಿಂಗ್ ಅನ್ನು ಬಹಳ ವಿಶೇಷವಾಗಿ ಮಾಡಿರುವ ಚಿತ್ರತಂಡ, ಸತತ 5 ಬಾರಿ ಲೈವ್ ಆಗಿ ರೀ-ರೆಕಾರ್ಡಿಂಗ್ ಮಾಡಿದ್ದಾರೆ. ಹಾಲಿವುಡ್ ಮಾದರಿಯಲ್ಲಿ 'ಮಮ್ಮಿ' ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದು ಇನ್ನೊಂದು ವಿಶೇಷ.[ಚಿತ್ರಪಟ: 'ಮಮ್ಮಿ' ಟ್ರೈಲರ್ ಲಾಂಚ್ ನಲ್ಲಿ ಮಸ್ತ್ ಜೋಕ್ ಮಾಡಿದ ತಾರಾ]

3 ತಿಂಗಳು ದುಡಿದ ಚಿತ್ರತಂಡ

ಹಾರರ್-ಥ್ರಿಲ್ಲರ್ ಮಮ್ಮಿ ಚಿತ್ರದ ಸೌಂಡಿಂಗ್ ಎಫೆಕ್ಟ್ ಗಾಗಿ ಬರೋಬ್ಬರಿ 3 ತಿಂಗಳು ಸಮಯವನ್ನು ಚಿತ್ರತಂಡದವರು ತೆಗೆದುಕೊಂಡಿದ್ದಾರೆ. ಬಹಳ ಮುತುವರ್ಜಿಯಿಂದ ಚಿತ್ರದ ಕೆಲಸಗಳು ಸಾಗುತ್ತಿದ್ದು, ಸಖತ್ ಆಗಿ ಸಿನಿಮಾ ಮೂಡಿ ಬರಲಿದೆ ಎನ್ನುತ್ತಿದ್ದಾರೆ 'ಮಮ್ಮಿ' ತಂಡದವರು.

ಸಂಗೀತವೇ 'ಮಮ್ಮಿ'ಯ ಆಕರ್ಷಣೆ

ನಿರ್ಮಾಪಕ ಕೆ.ರವಿ ಕುಮಾರ್ ಬಂಡವಾಳ ಹೂಡಿರುವ ಹಾರರ್ 'ಮಮ್ಮಿ' ಬರೀ ಮ್ಯೂಸಿಕ್ ನಿಂದಲೇ ಎಲ್ಲರನ್ನೂ ಆಕರ್ಷಿಸಲಿದೆ. 10 ಥೀಮ್ಸ್ ಮತ್ತು 35 ಸಂಗೀತ ಪರಿಕರಗಳಿಂದ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಲಾಗಿದೆ. ಒಂದೊಂದು ಥೀಮ್ ಗೂ ಒಂದೊಂದು ರೀತಿಯ ಸಂಗೀತ ನೀಡಿರೋದು ಈ ಚಿತ್ರದ ವಿಶೇಷ.

2 ಬಾರಿ ರೀ-ರೇಕಾರ್ಡಿಂಗ್

ಇನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮೊದಲ ಬಾರಿಗೆ ಎರಡು ಬಾರಿ ಇಡೀ ಚಿತ್ರಕ್ಕೆ ರೀ-ರೆಕಾರ್ಡಿಂಗ್ ಮಾಡಿದ್ದಾರಂತೆ. ಜೊತೆಗೆ ಇಡೀ ಚಿತ್ರಕ್ಕೆ ಹಾರರ್ ಎಫೆಕ್ಟ್ ಅನ್ನು ಸಂಗೀತದಲ್ಲಿ ನೀಡಿರೋದು ಈ ಚಿತ್ರದ ಮಗದೊಂದು ಸ್ಪೆಷಾಲಿಟಿ.

ಮುಂದಿನ ತಿಂಗಳು ತೆರೆ ಕಾಣುವ ಸಾಧ್ಯತೆ

ಒಟ್ಟಾರೆ ಬೇರೆ-ಬೇರೆ ವಿಚಾರಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿರುವ 'ಮಮ್ಮಿ' ಚಿತ್ರ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳು ಸಿನಿಮಾ ತೆರೆ ಕಾಣಲಿದೆ.

English summary
Kannada Movie 'Mummy-Save Me' Re-recording Underway. Kannada Actress Priyanka Upendra, Baby Yuvina Parthavi in the lead role. The movie is directed by Lohith H.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada