For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಉಪೇಂದ್ರ ಕೈಯಲ್ಲಿ ಲಾಂಗ್ ಕೊಟ್ಟ ನಿರ್ದೇಶಕ

  |

  ನಟಿ ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬದ ವಿಶೇಷವಾಗಿ ಖೈಮರಾ ಎಂಬ ಹೊಸ ಸಿನಿಮಾ ಆರಂಭವಾಗಿದೆ. ಅದರ ಜೊತೆಗೆ ಉಗ್ರಾವತಾರ ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.

  ಪ್ರಿಯಾಂಕಾ ಉಪೇಂದ್ರ ಕಯ್ಯಲ್ಲಿ ಲಾಂಗ್ | Filmibeat Kannada

  ಉಗ್ರಾವತಾರ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ ಬಗ್ಗೆ ಬಿಟ್ಟುಕೊಡದ ಪ್ರಿಯಾಂಕಾ, ಇದು ದಕ್ಷಾ ಪೊಲೀಸ್ ಆಧಿಕಾರಿಯ ಕಥೆ ಎಂದಷ್ಟೇ ಹೇಳಿದ್ದಾರೆ.

  ಪ್ರಿಯಾಂಕಾ-ಪ್ರಿಯಾಮಣಿ ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ರಿಲೀಸ್ಪ್ರಿಯಾಂಕಾ-ಪ್ರಿಯಾಮಣಿ ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ರಿಲೀಸ್

  ಹೆಸರಿಗೆ ತಕ್ಕಂತೆ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಆಕ್ಷನ್‌ಗೆ ಹೆಚ್ಚು ಒತ್ತು ನೀಡಿದ್ದಾರೆ. ಅದಕ್ಕಾಗಿ ಆರೇಳು ತಿಂಗಳು ತರಬೇತಿ ಪಡೆದುಕೊಂಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಹೆಚ್ಚಿನ ತರಬೇತಿ ಪಡೆಯಲು ಸಾಧ್ಯವಾಯಿತು ಎಂದು ನಟಿ ತಿಳಿಸಿದ್ದಾರೆ.

  ವಿಶೇಷ ಅಂದ್ರೆ ಖಡಕ್ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದರೂ, ಫೈಟ್ ದೃಶ್ಯದ ವೇಳೆ ಲಾಂಗ್ ಸಹ ಹಿಡಿದಿದ್ದಾರೆ ಎಂದು ನಿರ್ದೇಶಕ ಗುರುಮೂರ್ತಿ ಬಹಿರಂಗಪಡಿಸಿದ್ದಾರೆ.

  ಲಾಂಗ್ ಅಂದಾಕ್ಷಣ ಉಪೇಂದ್ರ ಅವರು ನೆನಪಾಗ್ತಾರೆ. ಓಂ ಸಿನಿಮಾದಲ್ಲಿ ಶಿವಣ್ಣ ಕೈಯಲ್ಲಿ ಲಾಂಗ್ ಕೊಟ್ಟು ಇತಿಹಾಸ ಸೃಷ್ಟಿಸಿದ್ದರು. ನಂತರ ಲಾಂಗ್ ಎನ್ನುವುದು ಚಿತ್ರರಂಗದಲ್ಲಿ ಟ್ರೆಂಡ್ ಆಯಿತು.

  ಉಗ್ರಾವತಾರ ಚಿತ್ರದ ಜೊತೆ ಖೈಮರಾ ಎಂಬ ಸಿನಿಮಾ ಮಾಡುತ್ತಿರುವ ಪ್ರಿಯಾಂಕಾ, ಈ ಚಿತ್ರದಲ್ಲಿ ಪ್ರಿಯಾಮಣಿ, ಛಾಯ ಸಿಂಗ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆ ಸೆಂಟ್ ಮಾರ್ಕ್ಸ್ ರೋಡ್ ಎಂಬ ಪ್ರಾಜೆಕ್ಟ್ ಸಹ ಪ್ರಿಯಾಂಕಾ ಕೈಯಲ್ಲಿದೆ.

  English summary
  Kannada actress Priyanka Upendra's Ugravatara movie motion poster released on birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X