»   » ಇಷ್ಟೆಲ್ಲಾ ಆದರೂ ರವಿಚಂದ್ರನ್ ತಲೆ ಕೆಡಿಸಿಕೊಂಡಿಲ್ಲ!

ಇಷ್ಟೆಲ್ಲಾ ಆದರೂ ರವಿಚಂದ್ರನ್ ತಲೆ ಕೆಡಿಸಿಕೊಂಡಿಲ್ಲ!

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಇರೋದೇ ಹಾಗೆ. ನೇರ ಮತ್ತು ನಿಷ್ಠೂರವಾದಿ. ಯಾರಿಗೂ ತಲೆ ಕೆಡಿಸಿಕೊಳ್ಳುವ ಜಾಯಮಾನ ಅವರದ್ದಲ್ಲ. ಇದ್ದದ್ದಿನ್ನ ಇದ್ದ ಹಾಗೆ ಹೇಳುವ ರವಿಮಾಮ, ಫಿಲ್ಮ್ ಇಂಡಿಸ್ಟ್ರಿಯಲ್ಲಿ ಯಾವುದೇ ವಿವಾದವನ್ನೂ ಮೈಮೇಲೆ ಎಳೆದುಕೊಂಡಿಲ್ಲ.

ತಾವಾಯ್ತು...ತಮ್ಮ ಸಿನಿಮಾ ಆಯ್ತು ಅಂತ ಸಿನಿ ಲೋಕದಲ್ಲಿ ಸದಾ ಕನಸು ಕಾಣುವ ರವಿಚಂದ್ರನ್ ವಿರುದ್ಧ ಈಗ ನಿರ್ಮಾಪಕರು ತಿರುಗಿ ಬಿದ್ದಿದ್ದಾರೆ. ಚಿತ್ರರಂಗಕ್ಕಾಗಿ ಹಗಲಿರುಳು ದುಡಿಯುವ ಕಾರ್ಮಿಕರ ವೇತನ ಪರಿಷ್ಕರಣೆ ಮಾಡುವ ಸಮಿತಿಯ ಅಧ್ಯಕ್ಷತೆ ವಹಿಸಿಕೊಂಡಿರುವ ರವಿಚಂದ್ರನ್, ವೇತನ ಹೆಚ್ಚಳ ಮಾಡುವ ಬಗ್ಗೆ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದರು. [ರವಿಚಂದ್ರನ್ ವಿರುದ್ಧ ನಿರ್ಮಾಪಕರು ಮಾಡಿರುವ ಆರೋಪಗಳೇನು?]

Producers letter to KFCC; V.Ravichandran reaction

ವೇತನ ಹೆಚ್ಚಳ ಮಾಡುವುದಕ್ಕೆ ನಿರ್ಮಾಪಕರಿಗೆ ಮನಸ್ಸಿಲ್ಲ. ಇನ್ನೂ ನಿರ್ಮಾಪಕರು ಧರಣಿ ಕೂತಿದ್ದಾಗ, ಅವರ ಕಷ್ಟಕ್ಕೆ ರವಿಚಂದ್ರನ್ ಸ್ಪಂದಿಸಲಿಲ್ಲ. ರಿಯಾಲಿಟಿ ಶೋಗಳಲ್ಲಿ ಬಿಜಿಯಿದ್ದರು ಅನ್ನುವ ಕಾರಣಕ್ಕೆ ರವಿಚಂದ್ರನ್ ವಿರುದ್ಧ ನಿರ್ಮಾಪಕರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ವೇತನ ಪರಿಷ್ಕರಣೆ ಮಾಡುವ ಬಗ್ಗೆ ರವಿಚಂದ್ರನ್ ನೀಡುವ ವರದಿಯನ್ನ ಒಪ್ಪಿಕೊಳ್ಳೋದಿಲ್ಲ. ರವಿಚಂದ್ರನ್ ನೇತೃತ್ವದ ಸಮಿತಿ ರದ್ದು ಗೊಳಿಸಬೇಕೆಂದು ನಿರ್ಮಾಪಕರು ಆಗ್ರಹಿಸಿದ್ದಾರೆ. [ಕ್ರೇಜಿ ಸ್ಟಾರ್ ರವಿಚಂದ್ರನ್ ವಿರುದ್ಧ ರೊಚ್ಚಿಗೆದ್ದ ನಿರ್ಮಾಪಕರು]

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರವಿಚಂದ್ರನ್, ''ನನ್ನ ಗಮನಕ್ಕೆ ಯಾವ ವಿಷಯವೂ ಬಂದಿಲ್ಲ'' ಅಂತಷ್ಟೇ ಹೇಳಿದ್ದಾರೆ. ರವಿಚಂದ್ರನ್ ಗಮನಕ್ಕೆ ಬಂದರೂ, ಅವರ ಮುಂದೆ ವಾದ ಮಾಡಿ ಗೆಲ್ಲುವವರು ಯಾರಿದ್ದಾರೆ ಗೊತ್ತಿಲ್ಲ. ಇಷ್ಟು ದಿನ ತಲೆ ಕಡಿಸಿಕೊಳ್ಳದ ರವಿಚಂದ್ರನ್, ಮುಂದೆ ಏನು ಮಾಡ್ತಾರೆ ಅನ್ನೋದು ಸದ್ಯದ ಕುತೂಹಲ.

English summary
Kannada Film Producers have written letter to KFCC against Crazy Star V.Ravichandran. Based upon the issue V.Ravichandran has reacted to the media. Read the article to know more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada