»   » ಕೈಕೊಟ್ಟ ಪ್ರಾಜೆಕ್ಟರ್,ಚಿತ್ರಮಂದಿರದಲ್ಲಿ ಪ್ರೇಕ್ಷಕರ ದಾಂಧಲೆ

ಕೈಕೊಟ್ಟ ಪ್ರಾಜೆಕ್ಟರ್,ಚಿತ್ರಮಂದಿರದಲ್ಲಿ ಪ್ರೇಕ್ಷಕರ ದಾಂಧಲೆ

Posted By:
Subscribe to Filmibeat Kannada
Projector failure while screening Kalpana movie
ಚಿತ್ರ ಮುಗಿಯಲು ಇನ್ನೇನು ಹತ್ತು ನಿಮಿಷ ಇದೆ ಅನ್ನುವಷ್ಟರಲ್ಲೇ ಪ್ರಾಜೆಕ್ಟರ್ ಕೈಕೊಟ್ಟಿದ್ದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಚಿತ್ರಮಂದಿರ ಮತ್ತು ಅದರ ಕ್ಯಾಂಟೀನ್ ಗ್ಲಾಸ್ ಗಳನ್ನು ಪುಡಿಪುಡಿ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಿಪಿನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಉಪೇಂದ್ರ ಅಭಿನಯದ ಕಲ್ಪನ ಚಿತ್ರ ನೋಡಲು ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಚಿತ್ರ ಕ್ಲೈಮ್ಯಾಕ್ಸ್ ಹತ್ತಿರ ಬರುತ್ತಿದ್ದಂತೆಯೇ ಪ್ರಾಜೆಕ್ಟರ್ ಕೈಕೊಟ್ಟಿತ್ತು. ಸಹನೆ ಕಳೆದುಕೊಂಡ ಅಭಿಮಾನಿಗಳು ಚಿತ್ರಮಂದಿರದ ಗ್ಲಾಸ್, ಕುರ್ಚಿಗಳಿಗೆ ಹಾನಿ ಮಾಡಿದ್ದಾರೆ.

ಚಿತ್ರಮಂದಿರದ ಆಡಳಿತ ಮಂಡಳಿ ಪರಿ ಪರಿಯಾಗಿ ವಿನಂತಿಸಿದ ನಂತರ ಪ್ರಾಜೆಕ್ಟರ್ ನಲ್ಲಾದ ತಾಂತ್ರಿಕ ತೊಂದರೆ ಸರಿಪಡಿಸಿ ಕೊನೆಯ ಹತ್ತು ನಿಮಿಷವನ್ನು ಮತ್ತೆ ಪ್ರಸಾರ ಮಾಡುವಷ್ಟರಲ್ಲಿ ಚಿತ್ರಮಂದಿರದ ಸಿಬ್ಬಂದಿಗಳು ಹೈರಾಣವಾಗಿ ಹೋಗಿದ್ದರು.

ಶನಿವಾರ (ಸೆ 29) ರಾತ್ರಿಯ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ.

ಈ ಮಧ್ಯೆ, ಮಾಧ್ಯಮಗಳ ಮಿಶ್ರ ಪ್ರತಿಕ್ರಿಯೆಯ ನಡುವೆ ಕಲ್ಪನ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಎಂದಿನ ಉಪೇಂದ್ರ ಚಿತ್ರದಂತೆ ಈ ಚಿತ್ರದಲ್ಲೂ ಅವರ ಸಂಭಾಷಣೆಗೆ ಜನ ಮನಸೋತಿದ್ದಾರೆ.

ನಿರ್ದೇಶಕ ರಾಮ್ ನಾರಾಯಣ್ ಚಿತ್ರಕಥೆ, ನಿರ್ದೇಶನದ ಜೊತೆಗೆ ಚಿತ್ರದ ನಿರ್ಮಾಪಕರೂ ಆಗಿರುವುದು ವಿಶೇಷ. ಮೂಲ ಕಥೆಯನ್ನು ಕೆಡಿಸದೇ ರಿಮೇಕ್ ಮಾಡಿ ಕನ್ನಡದಲ್ಲಿ ರಾಮ್ ನಾರಾಯಣ್ ತೆರೆಗೆ ತಂದಿದ್ದಾರೆ.

English summary
Audience went rampage when Upendra's Kalpana was screening in Siddalingeshwara theater in J P Nagar, Bangalore.
Please Wait while comments are loading...