For Quick Alerts
  ALLOW NOTIFICATIONS  
  For Daily Alerts

  ಮುಂದಿನ 2ವರ್ಷಕ್ಕೆ ಪುನೀತ್ ಕಾಲ್ ಶೀಟ್ ಸೋಲ್ಡ್ ಔಟ್

  |

  ಪುನೀತ್ ರಾಜಕುಮಾರ್ ಕಾಲ್ ಶೀಟ್ ಗಾಗಿ ಗಾಂಧಿನಗರದ ಎಲ್ಲಾ ನಿರ್ಮಾಪಕರು ತುದಿಗಾಲಿನಲ್ಲಿ ನಿಂತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಪುನೀತ್ ಅದೆಷ್ಟು ಬ್ಯೂಸಿಯೆಂದರೆ ದಿನದ ಹದಿನೆಂಟು ಗಂಟೆಗಳ ಕಾಲ ದುಡಿಯುತ್ತಿದ್ದರೂ ಪುನೀತ್ ಕಾಲ್ ಶೀಟ್ ಮಾತ್ರ ಇನ್ನೆರಡು ವರ್ಷಕ್ಕೆ ಹೊರಗಿನ ನಿರ್ಮಾಪಕರಿಗೆ ಸಿಕ್ಕುವುದು ಕಷ್ಟ.

  ಒಪ್ಪಿಕೊಂಡಿರುವ ಕಮಿಟ್ಮೆಂಟ್ಸ್ ಜೊತೆಗೆ ಸ್ವಂತ ಬ್ಯಾನರ್ ಸಿನಿಮಾಗಳು ಹೀಗೆ ಪುನೀತ್ ಅವರನ್ನು ಮುಂದಿನ ಎರಡು ವರ್ಷಕ್ಕೆ ಹಿಡಿಯುವುದೇ ಕಷ್ಟ.

  ಒಂದು ವಿಶೇಷವೇನಂದರೆ ಅಪ್ಪು ಅಭಿನಯದ ವಿಷಯಕಷ್ಟೇ ನಿರ್ಮಾಪಕರು ಅವರ ಹಿಂದೆ ಬಿದ್ದಿಲ್ಲ. ತಮ್ಮ ಸಿನಿಮಾದಲ್ಲಿ ಪುನೀತ್ ಒಂದು ಹಾಡು ಹಾಡಲಿ ಸಾಕು ಎಂದು ಕೂಡಾ ಒಂದಷ್ಟು ನಿರ್ದೇಶಕರು ಪುನೀತ್ ಬೆನ್ನು ಬಿದ್ದಿದ್ದಾರಂತೆ.

  ಅಪ್ಪು ಗಾಯನಕ್ಕೂ ಡಿಮಾಂಡ್ ಇದೆ. ಆದರೆ ತಾನೇನು ಅಂತ ಗಾಯಕನಲ್ಲ ಎಂದು ವಿನೀತವಾಗಿಯೇ ಹೇಳಿಕೊಳ್ಳುವ ಪುನೀತ್ ಕೆಲವು ಸಲ ಆತ್ಮೀಯರ ಒತ್ತಾಯಕ್ಕೆ ಬಿದ್ದು ಕೆಲವು ಸಿನಿಮಾಗೆ ಹಾಡು ಹಾಡಿದ್ದುಂಟು.

  ಅವರ ಬ್ಯಾನರ್ ಚಿತ್ರಗಳಲ್ಲಾಗಲಿ ಬೇರೆಯವರ ಚಿತ್ರಗಳಿಗೆ ಧ್ವನಿಯಾದ ವಿಷಯದಲ್ಲಾಗಲಿ ಅಪ್ಪು ಲಕ್ಕಿ ಸ್ಟಾರ್ ಅನ್ನೋದು ಗಾಯನದ ವಿಷಯದಲ್ಲೂ ಸಾಬೀತಾಗಿದೆ.

  ಯಾಕೆಂದರೆ ಪುನೀತ್ ಹಾಡಿದ ಬಹುತೇಕ ಹಾಡುಗಳು ಸೂಪರ್ ಹಿಟ್ ಕೇಳುಗರನ್ನು ರಂಜಿಸಿವೆ. ತೀರಾ ಇತ್ತೀಚಿನ ಉದಾಹರಣೆಯೆಂದರೆ ಅಣ್ಣಾಬಾಂಡ್ ಚಿತ್ರದ ಕಾಣದಂತೆ ಮಾಯವಾದನು ಹಾಡು. ಸಿದ್ಲಿಂಗು ಚಿತ್ರಕ್ಕಾಗಿಯೂ ಅಪ್ಪು ಒಂದು ಹಾಡು ಹಾಡಿದ್ದರು.

  ತಾಜಮಹಲ್ ಚಂದ್ರು ನಿರ್ದೇಶನದ ಮೈಲಾರಿ ಚಿತ್ರದಲ್ಲಿ ಊರಿಂದ ಓಡಿ ಬಂದ ಹಾಡನ್ನು ಪುನೀತ್ ಹಾಡಿದ್ದರು. ಆ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಆ ಚಿತ್ರದ ಸಂಗೀತಕ್ಕೆ ಗುರುಕಿರಣ್ ಅವರಿಗೆ ರಾಜ್ಯ ಪ್ರಶಸ್ತಿ ಕೂಡಾ ಬಂತು.

  ಈಗ ಮತ್ತೊಮ್ಮೆ ಚಂದ್ರು ಪುನೀತ್ ಹಿಂದೆ ಬಿದ್ದಿದ್ದಾರಂತೆ. 'ಕತ್ರಿನಾ. ಕತ್ರಿನಾ.' ಎಂದು ಶುರುವಾಗುವ ಹಾಡೊಂದನ್ನು ಸ್ವತಃ ಚಂದ್ರು ಚಾರ್ ಮಿನಾರ್ ಸಿನಿಮಾಕ್ಕೆ ರಚನೆ ಮಾಡಿದ್ದಾರೆ.

  ಈ ಚಿತ್ರಕ್ಕೆ ಹರಿ ಎಂಬ ಹೊಸಬ ಸಂಗೀತ ನಿರ್ದೇಶಕ. ಈ ಹಾಡನ್ನು ಪುನೀತ್ ಹಾಡಿದರೆ ಚೆನ್ನಾಗಿರುತ್ತದೆ ಎಂದು ಭಾವಿಸಿರುವ ಚಂದ್ರು ಅದಕ್ಕಾಗಿ ಪುನೀತ್ ಹಿಂದೆ ಬಿದ್ದಿದ್ದಾರೆ.

  ಒಟ್ಟಿನಲ್ಲಿ ಪುನೀತ್ ಮುಟ್ಟಿದೆಲ್ಲಾ ಚಿನ್ನ. ಹೀಗೆ ಸಾಗಲಿ ಅವರ ಸಿನಿಪಯಣ (ಒನ್ ಇಂಡಿಯಾ)

  English summary
  Power Star Puneet Rajkumar's call sheet is not available for the next two years. Not only producer are queuing up to cast him in their films but also there are several filmmakers, who want him to sing a song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X